ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ನನ್ನನ್ನು ಎದುರಿಸುವುದು ಕಷ್ಟ ಎಂದು ಸ್ವತಃ ಲಾರಾ ಹೇಳಿಕೊಂಡಿದ್ದರು" : ಪಾಕ್ ಆಲ್‌ರೌಂಡರ್

Brian Lara Admitted He Had Difficulties Against Me: Mohammad Hafeez

ವಿಶ್ವ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್ ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾಗೆ ಬೌಲಿಂಗ್ ಮಾಡಲು ಬೌಲರ್‌ಗಳು ತಿಣುಕಾಡುತ್ತಿದ್ದರು. ಬೌಲರ್‌ಗಳ ಪ್ರತಿ ಅಸ್ತ್ರಕ್ಕೂ ಲಾರಾ ಬಳಿ ಉತ್ತರವಿರುತ್ತಿತ್ತು. ಅಂತಾ ಬ್ಯಾಟ್ಸ್‌ಮನ್ ಲಾರಾಗೆ ತನ್ನನ್ನು ಎದುರಿಸಲು ಕಷ್ಟವಾಗುತ್ತಿತ್ತು ಎಂದು ಪಾಕಿಸ್ತಾನದ ಆಲ್‌ರೌಂಡರ್ ಹೇಳಿಕೆಯನ್ನು ನೀಡಿದ್ದಾರೆ.

ಬ್ರಿಯಾನ್ ಲಾರಾ ತನ್ನ ಬೌಲಿಂಗನ್ನು ಎದುರಿಸಲು ಕಷ್ಟಪಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಹೀಗೆ ಹೇಳಿಕೊಂಡಿರುವುದು ಬೇರೆ ಯಾರೂ ಅಲ್ಲ. ಪಾಕಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ಹಫೀಜ್. ಇದನ್ನು ಸ್ವತಃ ಲಾರಾ ಅವರೇ ತನ್ನ ಬಳಿ ಹೇಳಿಕೊಂಡಿದ್ದರು ಎಂದು ಹಫೀಜ್ ಹೇಳಿದ್ದಾರೆ.

ಚೆಂಡಿನ ಹೊಳಪಿಗೆ ಬಾಹ್ಯವಸ್ತುವಿಗೆ ಅವಕಾಶ ನೀಡಲಿ: ಟೀಮ್ ಇಂಡಿಯಾ ಬೌಲಿಂಗ್ ಕೋಚ್ಚೆಂಡಿನ ಹೊಳಪಿಗೆ ಬಾಹ್ಯವಸ್ತುವಿಗೆ ಅವಕಾಶ ನೀಡಲಿ: ಟೀಮ್ ಇಂಡಿಯಾ ಬೌಲಿಂಗ್ ಕೋಚ್

ಎಡಗೈ ಬ್ಯಾಟ್ಸ್‌ಮನ್‌ಗಳು ನನ್ನ ಬೌಲಿಂಗ್‌ನಲ್ಲಿ ಬ್ಯಾಟ್‌ ಮಾಡಲು ಸದಾ ಕಷ್ಟಪಡುತ್ತಾರೆ. ಬಲಗೈ ಬ್ಯಾಟ್ಸ್‌ಮನ್‌ಗಳ ಎದುರು ಕೂಡ ಉತ್ತಮವಾಗೇ ಬೌಲಿಂಗ್‌ ಮಾಡಿದ್ದೇನೆ. ಆದ್ದರಿಂದಲೇ ಎಡ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎದುರು ನನ್ನ ಎಕಾನಮಿ ರೇಟ್‌ ಉತ್ತಮವಾಗಿದೆ. ಇನ್ನು ಬ್ರಿಯಾನ್‌ ಲಾರಾ ಸೇರಿದಂತೆ ಹಲವು ದಿಗ್ಗಜರ ವಿಕೆಟ್‌ಗಳನ್ನು ನಾನು ಪಡೆದಿದ್ದೇನೆ," ಎಂದು ಸಂದರ್ಶನವೊಂದರಲ್ಲಿ ಹಫೀಜ್ ಹೇಳಿಕೊಂಡಿದ್ದಾರೆ.

ತಮ್ಮ ಆಫ್‌ ಸ್ಪಿನ್‌ ಬೌಲಿಂಗ್‌ ಮೂಲಕ ಪಾಕಿಸ್ತಾನ ಪರ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ 139 ವಿಕೆಟ್‌ ಮತ್ತು ಟೆಸ್ಟ್‌ ಕ್ರಿಕೆಟ್‌ ನಲ್ಲೂ 53 ವಿಕೆಟ್‌ಗಳನ್ನು ಪಡೆದಿರುವ 39 ವರ್ಷದ ಬ್ಯಾಟಿಂಗ್‌ ಆಲ್‌ರೌಂಡರ್ ಹಫೀಜ್‌, ತಮ್ಮ ವೃತ್ತಿ ಬದುಕಿನಲ್ಲಿ ಹಲವು ಬಾರಿ ಶಂಕಾಸ್ಪದ ಬೌಲಿಂಗ್‌ ಶೈಲಿಯ ಆರೋಪವನ್ನೂ ಎದುರಿಸಿದ್ದಾರೆ.

ಧೋನಿ ತಂಡದ ಮೀಟಿಂಗ್‌ಗಳು 2 ನಿಮಿಷಕ್ಕೆ ಹೆಚ್ಚಿರುತ್ತಿರಲಿಲ್ಲ: ಪಾರ್ಥಿವ್ಧೋನಿ ತಂಡದ ಮೀಟಿಂಗ್‌ಗಳು 2 ನಿಮಿಷಕ್ಕೆ ಹೆಚ್ಚಿರುತ್ತಿರಲಿಲ್ಲ: ಪಾರ್ಥಿವ್

ಬ್ಯಾಟಿಂಗ್‌ನಲ್ಲಿ ಯಶಸ್ಸು ದೊರೆಯದಿದ್ದರೂ ಬೌಲಿಂಗ್‌ನಲ್ಲಿ ಅದನ್ನು ಸರಿದುಗಿಸಿಕೊಳ್ಲುತ್ತೇನೆ. ಎಡಗೈ ಬೌಲರ್‌ಗಳ ಎದುರು ಸಿಗುವ ಯಶಸ್ಸನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುತ್ತೇನೆ. ನನ್ನ ಪಾಲಿಗೆ ಅದು ದೇವರು ಕೊಟ್ಟಿರುವ ವರ ಎಂದು ಮೊಹಮ್ಮದ್ ಹಫೀಜ್ ತಮ್ಮ ಬಗ್ಗೆ ತಾವೇ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Story first published: Friday, May 29, 2020, 9:21 [IST]
Other articles published on May 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X