ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲಲು ವಿಂಡೀಸ್‌ಗೆ ತಂತ್ರ ಹೇಳಿದ ಬ್ರಿಯಾನ್ ಲಾರಾ

Brian Lara reveals the strategy for Caribbean side to win a series on English soil

ಲಂಡನ್, ಜುಲೈ 7: ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಚಾಲನೆಗೊಳ್ಳುತ್ತಿದೆ. ಇಂಗ್ಲೆಂಡ್‌ಗೆ ಪ್ರವಾಸ ಬಂದಿರುವ ಕೆರಿಬಿಯನ್ನರು ಅಲ್ಲಿ ಜೈವಿಕ ಸುರಕ್ಷಾ ಪರಿಸರದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದಾರೆ. ಇತ್ತಂಡಗಳ ಟೆಸ್ಟ್ ಸರಣಿ ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯಲಿದೆ.

ಎಲ್ಲರಿಗೂ ದಿಗಿಲು ಹುಟ್ಟಿಸಿದ್ದ ಧೋನಿಯ ನಾಲ್ಕು ಅಚ್ಚರಿಯ ನಿರ್ಧಾರಗಳುಎಲ್ಲರಿಗೂ ದಿಗಿಲು ಹುಟ್ಟಿಸಿದ್ದ ಧೋನಿಯ ನಾಲ್ಕು ಅಚ್ಚರಿಯ ನಿರ್ಧಾರಗಳು

ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ಗೆ ಕಡೇಯ ಬಾರಿ ಪ್ರವಾಸ ಹೋಗಿದ್ದಾಗ ಟೆಸ್ಟ್ ಸರಣಿಯನ್ನು 1-2ರಿಂದ ಸೋತಿತ್ತು. ಆದರೆ ಕಳೆದ ವರ್ಷ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಬಲಿಷ್ಠ ತಂಡ ಇಂಗ್ಲೆಂಡನ್ನು ವಿಂಡೀಸ್ 2-1 ಮಣಿಸಿ ಸುಮಾರು 10 ವರ್ಷಗಳ ಬಳಿಕ 'ದ ವಿಸ್ಡನ್ ಟ್ರೋಫಿ'ಯನ್ನು ಮತ್ತೆ ಗೆದ್ದಿತ್ತು.

ಐಪಿಎಲ್ 2020 ನಡೆಸಲು ನ್ಯೂಜಿಲೆಂಡ್, ಶ್ರೀಲಂಕಾ, ಯುಎಇ ಮಧ್ಯೆ ಪೈಪೋಟಿ!ಐಪಿಎಲ್ 2020 ನಡೆಸಲು ನ್ಯೂಜಿಲೆಂಡ್, ಶ್ರೀಲಂಕಾ, ಯುಎಇ ಮಧ್ಯೆ ಪೈಪೋಟಿ!

ಈಗ ಇತ್ತಂಡಗಳು ಮತ್ತೆ 3 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿವೆ. ಮೊದಲ ಪಂದ್ಯ ಜುಲೈ 8ರ ಬುಧವಾರ ಆರಂಭವಾಗಲಿದೆ. ಇಂಗ್ಲೆಂಡ್ ನೆಲದಲ್ಲಿ ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಸರಣಿ ಗೆದ್ದಿದ್ದು ಸುಮಾರು 32 ವರ್ಷಗಳ ಹಿಂದೆ. ಈ ಬಾರಿ ಕೆರಿಬಿಯನ್ನರು ಸರಣಿ ಗೆಲ್ಲುವ ಅವಕಾಶವಿದೆ. ಆದರೆ ಸರಣಿಯ ಆರಂಭದಿಂದಲೂ ವಿಂಡೀಸ್ ಒಂದು ತಂತ್ರಗಾರಿಕೆಯನ್ನು ಪಾಲಿಸಬೇಕಾಗುತ್ತದೆ ಎಂದು ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಹೇಳಿದ್ದಾರೆ.

ಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿ

'ಅವರು (ವೆಸ್ಟ್ ಇಂಡೀಸ್) ತಕ್ಷಣವೇ ಪುಟಿಯಲು ಸಮರ್ಥರಾಗಿರಬೇಕು. ಹಾಗಂತ ತವರಿನಲ್ಲಿ ಇಂಗ್ಲೆಂಡ್‌ ಅನ್ನು ಸೋಲಿಸೋದು ಸುಲಭವಿಲ್ಲ. ಅವರದ್ದು ಗೆಲ್ಲುವ ಅತೀ ಫೇವರಿಟ್ ತಂಡವೆನಿಸಿದೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಆರಂಭದಿಂದಲೇ ಗೆಲುವಿಗೆ ದಾರಿ ಮಾಡಿಕೊಳ್ಳಬೇಕು ಮತ್ತು ಅಧಿಕಾರವನ್ನು ಮುದ್ರೆ ಒತ್ತಬೇಕು,' ಎಂದು ಬಿಬಿಸಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಲಾರಾ ಹೇಳಿದ್ದಾರೆ.

ಸಿಪಿಎಲ್‌ನ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪಾಲಾದ ಪ್ರವೀಣ್ ತಾಂಬೆಸಿಪಿಎಲ್‌ನ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪಾಲಾದ ಪ್ರವೀಣ್ ತಾಂಬೆ

ಮಾತು ಮುಂದುವರೆಸಿದ ಲಾರಾ, 'ಅವರು ಪಂದ್ಯವನ್ನು ಐದು ದಿನದವರೆಗೆ ಕೊಂಡೊಯ್ಯುತ್ತಾರೆ ಎಂದು ನನಗನ್ನಿಸುತ್ತಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಪಂದ್ಯವನ್ನು 4 ದಿನಗಳಲ್ಲೇ ಮುಗಿಸಬೇಕಾಗುತ್ತದೆ. ಪಂದ್ಯದ ಆರಂಭದಿಂದಲೇ ಲೀಡ್ ಸಾಧಿಸುತ್ತಾ ಸಾಗಿದರೆ ಗೆಲುವು ಸಾಧ್ಯವಿದೆ,' ಎಂದು ವಿಂಡೀಸ್‌ಗೆ ಪಂದ್ಯ ಗೆಲ್ಲುವ ಗುಟ್ಟು ಬಿಚ್ಚಿಟ್ಟಿದ್ದಾರೆ.

Story first published: Tuesday, July 7, 2020, 17:14 [IST]
Other articles published on Jul 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X