ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್‌ಗಿಂತ ಇನ್ನೊಬ್ಬ ಲೆಜೆಂಡ್‌ಗೆ ಬೌಲಿಂಗ್‌ ಕಷ್ಟ ಎಂದ ಮೆಕ್‌ಗ್ರಾಥ್

Brian Lara Was Slightly Harder To Bowl To Than Sachin: Glenn McGrath

ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್‌ ಮೆಕ್‌ಗ್ರಾಥ್ ಹೇಳಿಕೆಯೊಂದನ್ನು ನೀಡಿದ್ದಾರೆ. ಯಾವ ಆಟಗಾರನಿಗೆ ಬೌಲಿಂಗ್ ಕಷ್ಟ ಎನ್ನುವುದನ್ನು ಮೆಕ್‌ಗ್ರಾಥ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್‌ಗೆ ಸಚಿನ್ ತೆಂಡೂಲ್ಕರ್‌ಗಿಂತಲೂ ಇನ್ನೊಬ್ಬ ಲೆಜೆಂಡರಿ ಆಟಗಾರನಿಗೆ ಬೌಲಿಂಗ್ ಮಾಡುವುದು ಕಷ್ಟ ಎಂಬ ಮಾತನ್ನು ಹೇಳಿದ್ದಾರೆ.

ಭಾರತಕ್ಕೆ ಬಂದಿರುವ ಆಸಿಸ್‌ನ ದಿಗ್ಗಜ ವೇಗಿ ತಮ್ಮ ಕ್ರೆಕೆಟ್ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿರುದ್ಧ ಸಚಿನ್ ತೆಂಡೂಲ್ಕರ್ ಅದ್ಭುತವಾಗಿಯೇ ಆಡುತ್ತಿದ್ದರು. ಅದರೆ ಸಚಿನ್‌ಗಿಂತಲೂ ಮತ್ತೊಬ್ಬ ಆಟಗಾರನಿಗೆ ಬೌಲಿಂಗ್ ಮಾಡುವುದು ಕಷ್ಟಕರನಿಸುತ್ತಿತ್ತು ಎಂದು ಹೇಳಿದ್ದಾರೆ.

ಭಾರತ vs ನ್ಯೂಜಿಲೆಂಡ್: ಅಂತಿಮ ಟೆಸ್ಟ್‌ಗೆ ಪೃಥ್ವಿ ಶಾ ಫಿಟ್ಭಾರತ vs ನ್ಯೂಜಿಲೆಂಡ್: ಅಂತಿಮ ಟೆಸ್ಟ್‌ಗೆ ಪೃಥ್ವಿ ಶಾ ಫಿಟ್

ಈ ಸಂದರ್ಭದಲ್ಲಿ ತಮಗೆ ಯಾರು ಬೌಲಿಂಗ್ ಮಾಡಲು ಸವಾಲಾಗುತ್ತಿದ್ದರು ಎಂಬುದರ ಜೊತೆಗೆ ಯಾವ ಕಾರಣಕ್ಕೆ ಆತ ಎದುರಾಳಿ ಬೌಲರ್‌ಗಳಿಗೆ ಸವಾಲೆನಿಸುತ್ತಿದ್ದರು ಎಂಬುದನ್ನು ಕೂಡ ವಿವರಿಸಿದ್ದಾರೆ.

ವೆಸ್ಟ್‌ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್

ವೆಸ್ಟ್‌ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್

ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಬೌಲರ್ ಮೆಕ್‌ಗ್ರಾಥ್ ಪ್ರಕಾರ ಸಚಿನ್‌ ತೆಂಡೂಲ್ಕರ್‌ಗೆ ಬೌಲಿಂಗ್ ಮಾಡುವುದಕ್ಕಿಂತಲೂ ವೆಸ್ಟ್‌ ಇಂಡೀಸ್‌ ದಿಗ್ಗಜ ಬ್ರ್ಯಾನ್ ಲಾರಾಗೆ ಬೌಲಿಂಗ್ ಮಾಡುವುದು ಕಠಿಣ ಎಂಬ ಮಾತನ್ನು ಮೆಕ್‌ಗ್ರಾಥ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ

ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ

ಆಸ್ಟ್ರೇಲಿಯಾ ವಿರುದ್ಧ ಬ್ರಿಯಾನ್ ಲಾರಾ ಅದ್ಭುತವಾಗಿ ಆಡುತ್ತಿದ್ದರು. ತಾನು ಆತನನ್ನು 15 ಬಾರಿ ಔಟ್ ಮಾಡಿದ್ದೇನೆ. ಆದರೆ ಬ್ರ್ಯಾನ್ ಲಾರಾ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದರು. ಶತಕ ದ್ವಿಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಎಂಬ ಮಾತನ್ನು ಮೆಕ್‌ಗ್ರಾಥ್ ಹೇಳಿದ್ದಾರೆ.

ನಿರ್ಭೀತಿಯಿಂದ ಆಟ

ನಿರ್ಭೀತಿಯಿಂದ ಆಟ

ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ತಂಡದ ವಿರುದ್ಧ ಕೂಡ ಅಷ್ಟೇ ಉತ್ತಮವಾಗಿ ಆಡುತ್ತಿದ್ದರು. ಆದರೆ ಬ್ರ್ಯಾನ್ ಲಾರಾ ಅವರ ಆಟಕ್ಕೆ ಹೋಲಿಸಿದರೆ ಲಾರಾ ಯಾವುದೇ ಭಯವಿಲ್ಲದೆ ಆರಾಮಾಗಿ ಬ್ಯಾಟ್ ಬೀಸುತ್ತಿದ್ದರು. ಇದು ಅವರನ್ನು ಕಟ್ಟಿಹಾಕಲು ಕಷ್ಟ ಪಡುವಂತೆ ಮಾಡುತ್ತಿತ್ತು ಎಂದು ಮೆಕ್‌ಗ್ರಾಥ್ ಹೇಳಿದ್ದಾರೆ.

ಸಣ್ಣ ಅವಕಾಶವೂ ಬೌಲರ್‌ಗೆ ಸಿಗುತ್ತಿರಲಿಲ್ಲ

ಸಣ್ಣ ಅವಕಾಶವೂ ಬೌಲರ್‌ಗೆ ಸಿಗುತ್ತಿರಲಿಲ್ಲ

ಬ್ರಿಯಾನ್ ಲಾರಾ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸುತ್ತಿದ್ದರು. ಒಂದು ಸಣ್ಣ ಅವಕಾಶವನ್ನೂ ಎದುರಾಳಿ ಬೌಲರ್‌ಗೆ ನೀಡುತ್ತಿರಲಿಲ್ಲ. ಬೌಲರ್‌ಗಳು ಯಾವ ರೀತಿ ಬೌಲಿಂಗ್ ಮಾಡಬೇಕೆಂದು ಚಿಂತಿಸುವಂತೆ ಮಾಡುತ್ತಿತ್ತು ಎಂದು ಮೆಕ್‌ಗ್ರಾಥ್ ಹೇಳಿದ್ದಾರೆ.

ಸಚಿನ್‌ಗೆ ಬೌಲಿಂಗ್ ಸುಲಭವಲ್ಲ

ಸಚಿನ್‌ಗೆ ಬೌಲಿಂಗ್ ಸುಲಭವಲ್ಲ

ಹಾಗಂತ ಸಚಿನ್‌ಗೆ ಬೌಲಿಂಗ್ ಸುಲಭವಿರಲಿಲ್ಲ ಎಂಬ ಮಾತನ್ನೂ ಮೆಕ್‌ಗ್ರಾಥ್ ಒಪ್ಪಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿದ್ದ ಇನ್ನೋರ್ವ ಲೆಜೆಂಡ್ ಸ್ಪಿನ್ನರ್ ಶೇನ್ ವಾರ್ನ್ ಇದ್ದರೂ ವೇಗ ಮತ್ತು ಸ್ಪಿನ್ ಬೌಲಿಂಗ್‌ಅನ್ನು ಗುರಿಯಿಟ್ಟು ದಂಡಿಸುತ್ತಿದ್ದರು ಎಂಬ ಮಾತನ್ನು ಮೆಕ್‌ಗ್ರಾಥ್ ಹೇಳಿದ್ದಾರೆ.

ಮೆಕ್‌ಗ್ರಾಥ್ ಹೆಸರಿನಲ್ಲಿದೆ ವಿಶಿಷ್ಟ ದಾಖಲೆ

ಮೆಕ್‌ಗ್ರಾಥ್ ಹೆಸರಿನಲ್ಲಿದೆ ವಿಶಿಷ್ಟ ದಾಖಲೆ

ಗ್ಲೆನ್ ಮೆಕ್‌ಗ್ರಾಥ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 563 ವಿಕೆಟ್‌ಅನ್ನು ಪಡೆದುಕೊಂಡಿದ್ದಾರೆ. ಸಿಡ್ನಿಯಲ್ಲಿ ನಡೆದ ಟೆಸ್ಟ್ ವೃತ್ತಿ ಜೀವನದ ಕೊನೆಯ ಪಂದ್ಯದ ಅಂತಿಮ ಎಸೆತದಲ್ಲಿ ವಿಕೆಟ್ ಪಡೆದುಕೊಂಡು ಸಾಧನೆ ಮಾಡಿದ್ದಾರೆ. ವಿಶಿಷ್ಟ ಅಂದರೆ ಟಿ20 ಕ್ರಿಕೆಟ್‌ನಲ್ಲೂ ಅಂತಿಮ ಪಂದ್ಯದ ಅಂತಿಮ ಎಸೆತದಲ್ಲಿ ವಿಕೆಟ್ ಪಡೆದುಕೊಂಡಿದ್ದಾರೆ ಮೆಕ್‌ಗ್ರಾಥ್. ಟಿ20ಯಲ್ಲಿ ಅಂತಿಮ ಬಲಿಯಾದ ಆಟಗಾರ ಪಾಲ್ ಕಾಲಿಂಗ್‌ವುಡ್.

ಭಾರತಕ್ಕೆ ಬಂದಿರುವ ಆಸಿಸ್ ಲೆಜೆಂಡ್

ಭಾರತಕ್ಕೆ ಬಂದಿರುವ ಆಸಿಸ್ ಲೆಜೆಂಡ್

ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಮೆಕ್‌ಗ್ರಾಥ್ ಖಾಸಗಿ ಪತ್ರಿಕೆಯ ಜೊತೆಗೆ ನಡೆಸಿದ ಸಂದರ್ಶನದಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ಮೆಕ್‌ಗ್ರಾಥ್ ತಮ್ಮ ಆಟದ ದಿನಗಳ ಮೆಲುಕಿನ ಜೊತೆಗೆ ಪ್ರಸ್ತುತ ಕ್ರಿಕೆಟ್ ಬೆಳವಣಿಗೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Story first published: Saturday, February 29, 2020, 10:13 [IST]
Other articles published on Feb 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X