ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಇತಿಹಾಸದಲ್ಲೆ ಕೆಟ್ಟ ದಾಖಲೆ ಬರೆದ ಡಿ ವಿಲಿಯರ್ಸ್ ತಂಡ: ವೀಡಿಯೋ

Brisbane Heat register unwanted record in Big Bash League

ಬ್ರಿಸ್ಬೇನ್, ಜನವರಿ 20: ಈ ವರ್ಷದ ಬಿಗ್‌ ಬ್ಯಾಷ್‌ ಲೀಗ್‌ನ ಟಾಪ್ ತಂಡಗಳಲ್ಲಿ ಗುರುತಿಸಿಕೊಂಡ ತಂಡ ಬ್ರಿಸ್ಬೇನ್ ಹೀಟ್‌. ಆದರೆ ಇದೇ ತಂಡ ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದೆ. ಅತೀ ಕಡಿಮೆ ರನ್‌ಗೆ ಎಲ್ಲಾ ಹತ್ತು ವಿಕೆಟ್‌ಗಳನ್ನು ಬಲಿಕೊಟ್ಟ ತಂಡವಾಗಿ ಬ್ರಿಸ್ಬೇನ್ ಹೀಟ್‌ ಗುರುತಿಸಿಕೊಂಡಿದೆ.

ಭಾರತೀಯರ ವಿಶಿಷ್ಟ ಸಾಧನೆಗೆ ರೋಹಿತ್‌ಗೆ ಬೇಕು ಇನ್ನೆರಡು ಶತಕ!ಭಾರತೀಯರ ವಿಶಿಷ್ಟ ಸಾಧನೆಗೆ ರೋಹಿತ್‌ಗೆ ಬೇಕು ಇನ್ನೆರಡು ಶತಕ!

ಬ್ರಿಸ್ಬೇನ್‌ನ ದ ಗಬ್ಬಾದಲ್ಲಿ ಭಾನುವಾರ (ಜನವರಿ 19) ನಡೆದ ಬ್ರಿಸ್ಬೇನ್‌ ಹೀಟ್‌-ಮೆಲ್ಬರ್ನ್ ರೆನೆಗೇಡ್ಸ್ ನಡುವಿನ ಪಂದ್ಯದಲ್ಲಿ ಇಂಥದ್ದೊಂದು ಕೆಟ್ಟ ದಾಖಲೆ ನಿರ್ಮಾಣವಾಗಿದೆ. ಕ್ರಿಸ್‌ ಲಿನ್ (41 ರನ್), ಎಬಿ ಡಿವಿಲಿಯರ್ಸ್‌ನಂತ (2 ರನ್‌) ಬಲಿಷ್ಠರಿರುವ ಬ್ರಿಸ್ಬೇನ್ ಹೀಟ್‌, ಗೆಲ್ಲಬೇಕಿದ್ದ ಪಂದ್ಯದಲ್ಲಿ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿದೆ.

ಭಾರತ vs ಆಸ್ಟ್ರೇಲಿಯಾ: ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಭಾರತ vs ಆಸ್ಟ್ರೇಲಿಯಾ: ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮೆಲ್ಬರ್ನ್ ರೆನೆಗೇಡ್ಸ್‌, 20 ಓವರ್‌ಗೆ 6 ವಿಕೆಟ್‌ ಕಳೆದು 164 ರನ್‌ ಮಾಡಿತ್ತು. ಗುರಿ ಬೆನ್ನಟ್ಟಿದ್ದ ಬ್ರಿಸ್ಬೇನ್ ಹೀಟ್‌, ಸ್ಯಾಮ್ ಹೀಜ್ಲೆಟ್ ಸ್ಫೋಟಕ ಅರ್ಧ ಶತಕದೊಂದಿಗೆ (37 ಎಸೆತಕ್ಕೆ 56 ರನ್‌) ಪವರ್‌ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 84 ರನ್ ಕಲೆ ಹಾಕಿತ್ತು.

6ನೇ ಓವರ್‌ನ ಕೊನೆ ಎಸೆತದಿಂದ ಅಂದರೆ 5.6ನೇ ಓವರ್‌ನಿಂದ ಬ್ರಿಸ್ಬೇನ್‌ ಹೀಟ್‌ ವಿಕೆಟ್‌ಗಳು ಉರುಳಲಾರಂಭಿಸಿತು. 14.6ನೇ ಓವರ್ ವೇಳೆಗೆ ಬ್ರಿಸ್ಬೇನ್ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಅಂದರೆ ಕೇವಲ 36 ರನ್‌ಗೆ ಬ್ರಿಸ್ಬೇನ್‌ನ ಎಲ್ಲಾ 10 ವಿಕೆಟ್‌ ಪತನವಾಗಿದ್ದವು. 15 ಓವರ್‌ಗೆ ಸರ್ವ ತಪನ ಕಂಡು ಬ್ರಿಸ್ಬೇನ್‌ ಕೇವಲ 120 ರನ್‌ ಗಳಿಸಿ 44 ರನ್‌ನಿಂದ ತಲೆಬಾಗಿತು.

Story first published: Monday, January 20, 2020, 15:22 [IST]
Other articles published on Jan 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X