ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನ ಯಾವುದೇ ಯುಗದಲ್ಲೂ ಈ ಇಬ್ಬರು ವೇಗಿಗಳು ಗಣನೆಗೆ ಬರುತ್ತಾರೆ: ಬ್ರಿಯಾನ್ ಲಾರಾ

Bumrah and Archer could stand up and be counted in any era of cricket: Brian Lara

ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಈ ಬಾರಿಯ ಐಪಿಎಲ್‌ನಲ್ಲಿ ಕಾಮೆಂಟರಿ ಬಳಗದಲ್ಲಿದ್ದು ಪ್ರತಿ ಪಂದ್ಯವನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಟೂರ್ನಿ ಅಂತಿಮ ಘಟ್ಟದಲ್ಲಿ ಇಬ್ಬರು ವೇಗಿಗಳ ಬಗ್ಗೆ ಲಾರಾ ವಿಶೇಷ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರು ಯುವ ವೇಗಿಗಳು ಕ್ರಿಕೆಟ್‌ನ ಯಾವುದೇ ಯುಗದಲ್ಲೂ ಗಣನೆಗೆ ಬರುತ್ತಾರೆ ಎಂದಿದ್ದಾರೆ.

ದಿಗ್ಗಜ ಕ್ರಿಕೆಟಿಗ ಹೀಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ ಇಬ್ಬರು ಆಟಗಾರರಲ್ಲಿ ಓರ್ವ ಭಾರತೀಯ ವೇಗಿ ಎಂಬುದು ಹೆಮ್ಮೆಯ ಸಂಗತಿ. ಅಷ್ಟಕ್ಕೂ ಆ ಯುವ ವೇಗಿಗಳು ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಆಟಗಾರ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಣಕ್ಕಿಳಿಯುತ್ತಿರುವ ಜಸ್ಪ್ರೀತ್ ಬೂಮ್ರಾ ಹಾಗೂ ಇಂಗ್ಲೆಂಡ್ ತಂಡದ ವೇಗಿ ರಾಜಸ್ಥಾನ್ ತಂಡದ ವೇಗದ ಅಸ್ತ್ರ ಜೋಫ್ರಾ ಆರ್ಚರ್.

ಹೆಚ್ಚು ಕಾಲ ಬಯೋ ಬಬಲ್ಸ್‌ನಲ್ಲಿ ಉಳಿದುಕೊಳ್ಳೋದು ಕಷ್ಟ: ಕೊಹ್ಲಿಹೆಚ್ಚು ಕಾಲ ಬಯೋ ಬಬಲ್ಸ್‌ನಲ್ಲಿ ಉಳಿದುಕೊಳ್ಳೋದು ಕಷ್ಟ: ಕೊಹ್ಲಿ

ಬೂಮ್ರಾ ಹಾಗೂ ಆರ್ಚರ್ ವಿಚಾರದಲ್ಲಿ ನಾನು ಒಂದು ವಿಚಾರವನ್ನು ಸ್ಷ್ಟಪಡಿಸಬಲ್ಲೆ. ಈ ಇಬ್ಬರು ವೇಗಿಗಳು ಕ್ರಿಕೆಟ್‌ನ ಯಾವುದೇ ಯುಗದಲ್ಲೂ ಎದ್ದು ನಿಲ್ಲಬಲ್ಲವರಾಗಿದ್ದು ಪರಿಗಣನೆಗೆ ತೆಗೆದುಕೊಳ್ಳಬಲ್ಲ ವೇಗಿಗಳಾಗಿದ್ದಾರೆ. ಅದು 2000ದ ದಶಕವಾಗಿರಬಹುದು, 90ರ ದಶಕ, 80ರ ದಶಕ ಅಥವಾ 70ರ ದಶಕವಾಗಿರಬಹುದು. ಇತಿಹಾಸದಲ್ಲಿರುವ ಯಾರನ್ನೂ ಚಿಕ್ಕವರನ್ನಾಗಿಸುತ್ತಿಲ್ಲ. ಆದರೆ ನಾನು ಈ ಹಿಂಎ ನೋಡಿದ, ಆಡಿದ ಹಾಗೂ ಈಗ ನೀಡುತ್ತಿರುವ ಯಾವುದೇ ಯುಗದಲ್ಲಿ ಈ ಇಬ್ಬರು ವೇಗದ ಬೌಲಿಂಗ್‌ನ ಉನ್ನತ ಮಟ್ಟದಲ್ಲಿರುತ್ತಾರೆ ಎಂದು ಲಾರಾ ಬಣ್ಣಿಸಿದ್ದಾರೆ.

ನಾವು ಕೊನೆಯಲ್ಲಿ ಪಂದ್ಯ ಮುಗಿಸಿದ ರೀತಿ ಚೆನ್ನಾಗಿತ್ತು: ರೋಹಿತ್ ಶರ್ಮಾನಾವು ಕೊನೆಯಲ್ಲಿ ಪಂದ್ಯ ಮುಗಿಸಿದ ರೀತಿ ಚೆನ್ನಾಗಿತ್ತು: ರೋಹಿತ್ ಶರ್ಮಾ

ಇದೇ ಸಂದರ್ಭದಲ್ಲಿ ಬ್ರಿಯಾನ್ ಲಾರಾ ದಿಗ್ಗಜ ಭಾರತೀಯ ಕ್ರಿಕೆಟ್‌ನ ದಿಗ್ಗಜ ವೇಗಿಗಳನ್ನು ಉಲ್ಲೇಖಿಸಿದರು. ಜಸ್ಪ್ರೀತ್ ಬೂಮ್ರಾ ಅವರನ್ನು ಎದುರಿಸುವ ಬದಲಿಗೆ ನಾನು ಕಪಿಲ್‌ದೇವ್, ಜಾವಗಲ್ ಶ್ರೀನಾಥ್ ಅಥವಾ ಮನೋಜ್ ಪ್ರಭಾಕರ್ ಅವರನ್ನು ಎದುರಿಸಲು ಬಯಸುತ್ತೇನೆ ಎಂದಿದ್ದಾರೆ.

ಜಸ್ಪ್ರೀತ್ ಬೂಮ್ರಾ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚಿ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಡೆಲ್ಲಿ ವಿರುದ್ದದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬೂಮ್ರಾ 4 ವಿಕೆಟ್ ಪಡೆದು ಗೆಲುವನ್ನು ಸುಲಭವಾಗಿಸಿದರು. ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಕಣಕ್ಕಿಳಿದ ಜೋಫ್ರ ಆರ್ಚರ್ ಕೂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಯಶಸ್ಸು ಪಡೆದಿದ್ದಾರೆ.

Story first published: Friday, November 6, 2020, 15:40 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X