ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬುಮ್ರಾ ಬೌಲಿಂಗ್‌ ಬಗ್ಗೆ ಡೇನಿಯಲ್‌ ವೆಟೊರಿ ಹೇಳಿದ್ದೇನು ಗೊತ್ತಾ?

Bumrah is unplayable at this stage: Daniel Vettori

ಮ್ಯಾಂಚೆಸ್ಟರ್‌, ಜುಲೈ 08: ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ತಮ್ಮ ನಿಖರತೆ ಮತ್ತು ಡೆಡ್ಲಿ ಯಾರ್ಕರ್‌ಗಳ ಮೂಲಕ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಸದ್ಯ ಏಕದಿನ ಕ್ರಿಕೆಟ್‌ನ ನಂ.1 ಬೌಲರ್‌ ಆಗಿರುವ ಜಸ್‌ಪ್ರೀತ್‌ ಬುಮ್ರಾ ಎದುರು ಬ್ಯಾಟ್‌ ಬೀಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಇದೀಗ ಸೆಮಿಫೈನಲ್ಸ್‌ ಹಂತದಲ್ಲಿ ಭಾರತ-ನ್ಯೂಜಿಲೆಂಡ್‌ ಪೈಪೋಟಿ ನಡೆಸುತ್ತಿದ್ದು, ಕಿವೀಸ್‌ನ ಮಾಜಿ ಸ್ಟಾರ್‌ ಆಲ್‌ರೌಂಡರ್‌ ಡೇನಿಯೆಲ್‌ ವೆಟೋರಿ ಭಾರತದ ಸ್ಟಾರ್‌ ಬೌಲರ್‌ ಕುರಿತಾಗಿ ಮಾತನಾಡಿದ್ದಾರೆ.

ಇಂಡೊ-ಕಿವೀಸ್‌ ಸೆಮಿಫೈನಲ್‌ಗೆ ಮಳೆ ಅಡ್ಡಿ ಪಡಿಸಿದರೆ ಏನಾಗುತ್ತದೆ?ಇಂಡೊ-ಕಿವೀಸ್‌ ಸೆಮಿಫೈನಲ್‌ಗೆ ಮಳೆ ಅಡ್ಡಿ ಪಡಿಸಿದರೆ ಏನಾಗುತ್ತದೆ?

ಬುಮ್ರಾ ಸದ್ಯ ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು (17) ವಿಕೆಟ್‌ ಪಡೆದ ಬೌಲರ್‌ ಆಗಿದ್ದಾರೆ. ಕೇವಲ ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ (26 ವಿಕೆಟ್‌, 9 ಪಂದ್ಯ ) ಮತ್ತು ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್‌ ರೆಹಮಾನ್‌ (20 ವಿಕೆಟ್‌, 8 ಪಂದ್ಯ), ಮಾತ್ರವೇ ಬುಮ್ರಾಗಿಂತಲು ಮುಂದಿದ್ದಾರೆ. ಪಾಕಿಸ್ತಾನದ ಮೊಹಮ್ಮದ್‌ ಆಮಿರ್‌ ಮತ್ತು ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌ ಕೂಡ 17 ವಿಕೆಟ್‌ ಪಡೆದು ಅತಿ ಹೆಚ್ಚು ವಿಕೆಟ್‌ ಪಡೆದವರ ಪೈಕಿ ಬುಮ್ರಾ ಜೊತೆಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ಸೆಮಿಫೈನಲ್ಸ್‌ನಲ್ಲಿ ಭಾರತ ವಿರುದ್ಧ ಕಿವೀಸ್‌ ತನ್ನ ಪ್ರಮುಖ ಅಸ್ತ್ರದ ಬಳಕೆ!ಸೆಮಿಫೈನಲ್ಸ್‌ನಲ್ಲಿ ಭಾರತ ವಿರುದ್ಧ ಕಿವೀಸ್‌ ತನ್ನ ಪ್ರಮುಖ ಅಸ್ತ್ರದ ಬಳಕೆ!

ಇನ್ನು ಬುಮ್ರಾ ಬೌಲಿಂಗ್‌ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಟೂರ್ನಿಯಲ್ಲಿ ಅತಿ ಹೆಚ್ಚು ಮೇಡಿನ್‌ ಓವರ್‌ಗಳನ್ನು (8) ಏಸೆದಿದ್ದಾರೆ. ಜೋಫ್ರಾ ಆರ್ಚರ್‌ ಕೂಡ ಇದೇ ಸಾಧನೆ ಮಾಡಿದ್ದಾರೆ.

"ಜಸ್‌ಪ್ರೀತ್‌ ಬುಮ್ರಾ ಎದುರು ಈ ಸಂದರ್ಭದಲ್ಲಿ ಆಡುವುದು ಅಸಾಧ್ಯದಂತಿದೆ. ಇಂಗ್ಲೆಂಡ್‌ ವಿರುದ್ಧ ಭಾರತ ಸೋತರೂ ಆ ಪಂದ್ಯದಲ್ಲಿ ಬುಮ್ರಾ ಬೌಲಿಂಗ್‌ ಭರ್ಜರಿಯಾಗಿತ್ತು. ಹೀಗಾಗಿ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಬುಮ್ರಾ ಬದಲಾಗಿ ಬೇರೆ ಬೌಲರ್‌ಗಳನ್ನು ಗುರಿಯನ್ನಾಗಿಸಿಕೊಂಡರು. ಆದರೂ, ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಭಾರತ ಶಮಿ ಅವರನ್ನು ಆಡಿಸುತ್ತದೆ ಎಂಬ ವಿಶ್ವಾಸವಿದೆ. ಕಿವೀಸ್‌ ವಿರುದ್ಧ ಶಮಿ ಉತ್ತಮ ಪ್ರದರ್ಶನ ಹೊಂದಿದ್ದಾರೆ,'' ಎಂದು ಬುಮ್ರಾ ಬೌಲಿಂಗ್‌ ಕುರಿತಾಗಿ ವೆಟೋರಿ ಮಾತನಾಡಿದ್ದಾರೆ.

Story first published: Monday, July 8, 2019, 19:10 [IST]
Other articles published on Jul 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X