ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್ಪ್ರೀತ್ ಬೂಮ್ರಾ ಪಾಕ್ ವೇಗಿ ಶಾಹಿನ್ ಅಫ್ರಿದಿಯ ಹತ್ತಿರಕ್ಕೂ ಬರಲ್ಲ ಎಂದ ಪಾಕ್ ಮಾಜಿ ಕ್ರಿಕೆಟಿಗ

Bumrah vs Shaheen: Pakistan former cricketer said Indian pacer Not Even Close To pakistan young cricketer

ವಿಶ್ವ ಕ್ರಿಕೆಟ್‌ನ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಅತ್ಯಂತ ಪರಿಣಾಮಕಾರಿ ಬೌಲರ್‌ಗಲು ಎನಿಸಿಕೊಂಡಿದ್ದಾರೆ. ಗಾಯದಿಂದಾಗಿ ಜಸ್ಪ್ರೀತ್ ಬೂಮ್ರಾ ತಂಡದಿಂದ ಪ್ರಸ್ತುತ ಹೊರಗುಳಿದಿದ್ದರೆ ಶಾಹೀನ್ ಅಫ್ರಿದಿ ಕೂಡ ಕೆಲ ಕಾಲ ಗಾಯದ ಸಮಸ್ಯೆಗೆ ಒಳಗಾಗಿದ್ದರಾದರೂ ಸದ್ಯ ಕಮ್‌ಬ್ಯಾಕ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅಂಕಿಅಂಶಗಳಿಗೆ ವಿರುದ್ಧವಾಗಿ ಅಬ್ದುಲ್ ರಜಾಕ್ ನೀಡಿರುವ ಹೇಳಿಕೆ ಭಾರತೀಯ ಅಭಿಮಾನಿಗಳನ್ನು ಕೆಣಕುವಂತೆ ಮಾಡಿದೆ.

U-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾU-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ

ಬೂಮ್ರಾ ಹಾಗೂ ಶಾಹೀನ್ ಅಂಕಿಅಂಶಗಳು ಹೇಳುವುದೇನು?

ಬೂಮ್ರಾ ಹಾಗೂ ಶಾಹೀನ್ ಅಂಕಿಅಂಶಗಳು ಹೇಳುವುದೇನು?

29ರ ಹರೆಯದ ಜಸ್ಪ್ರೀತ್ ಬೂಮ್ರ 30 ಟೆಸ್ಟ್‌ಗಳಲ್ಲಿ 128 ವಿಕೆಟ್‌ಗಳನ್ನು ಪಡೆದಿದ್ದು 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್‌ಗಳನ್ನು ಕೆಡವಿದ್ದಾರೆ. 60 ಟಿ20 ಪಂದ್ಯಗಳಲ್ಲಿ ಆಡಿರುವ ಭಾರತದ ವೇಗಿ 70 ವಿಕೆಟ್ ಉರುಳಿಸಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದ 22ರ ಹರೆಯದ ಎಡಗೈ ವೇಗಿ ಶಾಹೀನ್ ಅಫ್ರಿದಿ 25 ಟೆಸ್ಟ್‌ಗಳಲ್ಲಿ 99 ವಿಕೆಟ್‌ಗಳನ್ನು ಪಡೆದಿದುಕೊಂಡಿದ್ದರೆ 32 ಏಕದಿನ ಪಂದ್ಯಗಳಲ್ಲಿ 62 ವಿಕೆಟ್‌ಗಳನ್ನು ಮತ್ತು 47 T20 ಪಂದ್ಯಗಳಲ್ಲಿ 58 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಇಬ್ಬರು ವೇಗಿಗಳು ಕೂಡ ಬಹುತೇಕ ಒಂದೇ ರೀತಿಯ ಅಂಕಿಅಂಶಗಳನ್ನು ಹೊಂದಿದ್ದರು ಕೂಡ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ವಿಚಿತ್ರ ಹೇಳಿಕೆ ನೀಡಿದ್ದಾರೆ.

"ಶಾಹೀನ್ ಬಹಳ ಅದ್ಭುತ ವೇಗಿ"

ಪಾಕಿಸ್ತಾನದ ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್, ಪಾಕಿಸ್ತಾನದ ಯುವ ವೇಗಿಯ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಶಾಹಿನ್ ಬಹಳ ಅದ್ಭುತವಾದ ಆಟಗಾರ. ಬೂಮ್ರಾ ಆತನ ಸಮೀಪಕ್ಕೂ ಬರುವುದಿಲ್ಲ" ಎಂದಿದ್ದಾರೆ ಅಬ್ದುಲ್ ರಜಾಕ್. ಇನ್ನು ಇದೇ ಸಂದರ್ಭದಲ್ಲಿ ನಸೀಮ್ ಶಾ, ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಈ ಮೂವರಲ್ಲಿ ಯಾರು ಉತ್ತಮ ಎಂದು ಕೇಳಿದಾಗ, ಈ ಮೂವರು ಕೂಡ ಅದ್ಭುತವಾದ ವೇಗಿಗಳು ಎಂದು ಉತ್ತರ ನೀಡಿದ್ದಾರೆ.

ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್‌ಗೆ ಬಂಪರ್ ಸಾಧ್ಯತೆ

ಆಸಿಸ್ ವಿರುದ್ಧದ ಮೊದಲೆರಡು ಪಂದ್ಯಗಳಿಗಿಲ್ಲ ಬೂಮ್ರಾ

ಆಸಿಸ್ ವಿರುದ್ಧದ ಮೊದಲೆರಡು ಪಂದ್ಯಗಳಿಗಿಲ್ಲ ಬೂಮ್ರಾ

ಇನ್ನು ಗಾಯದಿಂದಾಗಿ ಸುದೀರ್ಘ ಕಾಲದಿಂದ ಭಾರತ ತಂಡದಿಂದ ಹೊರಗುಳಿದಿರುವ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೂ ಆಯ್ಕೆಯಾಗಿಲ್ಲ. ಆದರೆ ಈ ಬಹುನಿರೀಕ್ಷಿತ ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಬೂಮ್ರಾ ಆಯ್ಕೆಯಾಗುವ ಬಗ್ಗೆ ನಿರೀಕ್ಷೆಗಳು ಇದೆ. ಸದ್ಯ ಬೂಮ್ರಾ ಗಾಯದಿಂದ ಚೇತರಿಸಿಕೊಂಡಿದ್ದು ಫಿಟ್‌ನೆಸ್ ಬಗ್ಗೆ ಎನ್‌ಸಿಎಯಿಂದ ಗ್ರೀನ್‌ಸಿಗ್ನಲ್ ಪಡೆದುಕೊಳ್ಳಬೇಕಿದೆ.

ಬೂಮ್ರಾ ಬಗ್ಗೆ ಮಾಹಿತಿ ನೀಡಿದ ನಾಯಕ ರೋಹಿತ್

ಬೂಮ್ರಾ ಬಗ್ಗೆ ಮಾಹಿತಿ ನೀಡಿದ ನಾಯಕ ರೋಹಿತ್

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಬೂಮ್ರಾ ಲಭ್ಯತೆಯ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಬೂಮ್ರಾ ಬಗ್ಗೆ ನನಗೆ ಖಚಿತ ಮಾಹಿತಿ ತಿಳಿದಿಲ್ಲ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಖಚಿತವಾಗಿ ಅವರು ಆಡುವುದಿಲ್ಲ. ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಅವರು ಲಭ್ಯವಾಗಲಿದ್ದಾರೆ ಎಂಬ ವಿಶ್ವಾಸವನ್ನು ನಾನು ಹೊಂದಿದ್ದೇನೆ. ಆತನ ವಿಚಾರವಾಗಿ ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಾದ ಬಳಿಕವೂ ನಾವು ಸಾಕಷ್ಟು ಕ್ರಿಕೆಟ್ ಆಡಲಿದ್ದೇವೆ" ಎಂದು ನಾಯಕ ರೋಹಿತ್ ಶರ್ಮಾ ಹೇಳಿಕೆ ನೀಡಿದ್ದರು.

Story first published: Monday, January 30, 2023, 14:10 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X