ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಕ್ರಿಕೆಟರ್ ಜೋಸ್ ಬಟ್ಲರ್‌ಗೆ ಮಾಜಿ ವೇಗಿ ಡ್ಯಾರೆನ್ ಗೌಫ್ ಎಚ್ಚರಿಕೆ

Buttler has got two Test matches to save his career: Darren Gough

ಲಂಡನ್, ಜುಲೈ 13: ಫಾರ್ಮ್ ಕಳೆದುಕೊಂಡಿರುವ ಅನುಭವಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್‌ ಜೋಸ್ ಬಟ್ಲರ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ವೇಗಿ ಡ್ಯಾರೆನ್ ಗೌಫ್ ಅಭಿಪ್ರಾಯಪಟ್ಟಿದ್ದಾರೆ.

ಅವಿಸ್ಮರಣೀಯ ನ್ಯಾಟ್‌ವೆಸ್ಟ್ ಫೈನಲ್ ಗೆಲುವಿನ ಸಂಭ್ರಮಕ್ಕೆ ಇಂದಿಗೆ 18 ವರ್ಷಅವಿಸ್ಮರಣೀಯ ನ್ಯಾಟ್‌ವೆಸ್ಟ್ ಫೈನಲ್ ಗೆಲುವಿನ ಸಂಭ್ರಮಕ್ಕೆ ಇಂದಿಗೆ 18 ವರ್ಷ

ಕಳೆದ 12 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 50 ರನ್ ಕೂಡ ಬಾರಿಸದ ಜೋಸ್ ಬಟ್ಲರ್, 4ನೇ ಇನ್ನಿಂಗ್ಸ್‌ನಲ್ಲಿ ಪಂದ್ಯ ಗೆಲುವಿನ 95 ರನ್ ಬಾರಿಸಿದ್ದ ವೆಸ್ಟ್ ಇಂಡೀಸ್‌ನ ಜರ್ಮೈನ್ ಬ್ಲ್ಯಾಕ್‌ವುಡ್ ಅವರನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಆಡಿಸದಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಟ್ಲರ್ 35+9 ರನ್ ಬಾರಿಸಿದ್ದರು.

12ರ ಹರೆಯದ ಬಾಲಕನ ಬಂಧನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜೋಫ್ರಾ ಆರ್ಚರ್12ರ ಹರೆಯದ ಬಾಲಕನ ಬಂಧನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜೋಫ್ರಾ ಆರ್ಚರ್

'ನನ್ನ ಪ್ರಕಾರ ತನ್ನ ವೃತ್ತಿ ಜೀವನವನ್ನು ಉಳಿಸಿಕೊಳ್ಳಲು ಬಟ್ಲರ್ ಅವರಿಗಿನ್ನೂ ಎರಡು ಟೆಸ್ಟ್ ಪಂದ್ಯಗಳಿವೆ. ಅವರಿಗೆ ಭಯಂಕರ ಪ್ರತಿಭೆಯಿದೆ. ಯುವ ಆಟಗಾರರು ನೋಡಿ ಕಲಿಯುವಂತ ಆಟ ಬಟ್ಲರ್ ಅವರಲ್ಲಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಹೀಗೇ ಪದೇ ಪದೇ ಬೇಗನೆ ಔಟ್ ಆಗೋದನ್ನೇ ಮುಂದುವರೆಸಲಾಗೋಲ್ಲ. ಬಟ್ಲರ್ ಈಗ ಅದನ್ನೇ ಮಾಡುತ್ತಿದ್ದಾರೆ,' ಎಂದು ಗೌಫ್ ಹೇಳಿದ್ದಾರೆ.

ಗವಾಸ್ಕರ್ ನೀಡಿದ ಸಣ್ಣ ಸಲಹೆ ವೃತ್ತಿ ಬದುಕಿನಲ್ಲಿ ದೊಡ್ಡ ಪಾತ್ರವಹಿಸಿತು: ಇನ್ಜಮಾಮ್ ಉಲ್ ಹಕ್ಗವಾಸ್ಕರ್ ನೀಡಿದ ಸಣ್ಣ ಸಲಹೆ ವೃತ್ತಿ ಬದುಕಿನಲ್ಲಿ ದೊಡ್ಡ ಪಾತ್ರವಹಿಸಿತು: ಇನ್ಜಮಾಮ್ ಉಲ್ ಹಕ್

ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಜೊತೆ ಮಾತನಾಡಿದ ಡ್ಯಾರೆನ್ ಗೌಫ್ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗೌಫ್ ಇಂಗ್ಲೆಂಡ್ ಪರ 58 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ದಾಖಲೆ ಹೊಂದಿದ್ದಾರೆ. ಅಂದ್ಹಾಗೆ, ವೆಸ್ಟ್ ಇಂಡೀಸ್ ವಿರುದ್ಧದ ಕಳಪೆ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್‌ನಲ್ಲಿ 4 ವಿಕೆಟ್ ಸೋಲನುಭವಿಸಿದೆ. ಇದೇ ಕಾರಣಕ್ಕೆ ಗೌಫ್ ಇಂಗ್ಲೆಂಡ್ ತಂಡದ ಅನುಭವಿ ಆಟಗಾರನನ್ನು ಎಚ್ಚರಿಸಿದ್ದಾರೆ.

Story first published: Tuesday, July 14, 2020, 9:44 [IST]
Other articles published on Jul 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X