ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಗೆ ಮುಂದಾದ ಸೂಪರ್ ಸ್ಟಾರ್!

By ಕ್ರೀಡಾಡೆಸ್ಕ್

ಐಪಿಎಲ್ 2021 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಗೆ ಟಾಲಿವುಡ್ ಸೂಪರ್ ಸ್ಟಾರ್ ಮುಂದಾಗಿರುವ ಸುದ್ದಿ ಬಂದಿತ್ತು. ಆದರೆ, ಇದು ಏಪ್ರಿಲ್ ಫೂಲ್ ಮಾಡಲು ಕೆಲ ಮಾಧ್ಯಮಗಳು ಮಾಡಿರುವ ತಂತ್ರ ಎಂದು ಅಲ್ಲು ಅರ್ಜುನ್ ಪರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಕಳೆದ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಹೊಸ ಫ್ರಾಂಚೈಸಿಯ ಓನರ್ ಆಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಹೊಸ ತಂಡ ಸೇರ್ಪಡೆಯಾಗದ ಕಾರಣ ಸುದ್ದಿ ಕೂಡಾ ಬೌಂಡರಿ ಹೊರಗೆ ಉಳಿಯಿತು. ಈಗ ವಾರ್ನರ್ ಪಡೆಯ ಮೇಲೆ ಸ್ಟಾರ್ ನಟ ಅಲ್ಲು ಅರ್ಜುನ್ ಕಣ್ಣಿಟ್ಟಿದ್ದಾರೆ ಎಂಬ ಸುದ್ದಿಯಿಂದ ಅಭಿಮಾನಿಗಳು ಥ್ರಿಲ್ ಆಗಿದ್ದರು.

ಏಪ್ರಿಲ್ 9ರಿಂದ ಚೆನ್ನೈ, ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೆಣಸಲಿದೆ.

ಸಿನಿಮಾ ರಂಗದವರು ಐಪಿಎಲ್ ಫ್ರಾಂಚೈಸಿ ಜೊತೆ ಒಡನಾಟ

ಸಿನಿಮಾ ರಂಗದವರು ಐಪಿಎಲ್ ಫ್ರಾಂಚೈಸಿ ಜೊತೆ ಒಡನಾಟ

ಸಿನಿಮಾ ರಂಗದವರು ಐಪಿಎಲ್ ಫ್ರಾಂಚೈಸಿ ಜೊತೆ ಒಡನಾಟ ಹೊಂದಿರುವುದು ಹೊಸ ವಿಷಯವೇನಲ್ಲ. ಬಾಲಿವುಡ್ ನಟ ಸಲ್ಮಾನ್ ಖಾನ್ ಅಥವಾ ಅವರ ಸೋದರರು ಐಪಿಎಲ್ ತಂಡ ಹೊಂದಲು ಬಯಸಿದ್ದಾರೆ ಸುದ್ದಿಯಿದೆ. ಶ್ರೀಲಂಕಾ ಲೀಗ್‌ನಲ್ಲಿ ಇವರು ಹೂಡಿಕೆ ಮಾಡಿದ್ದಾರೆ. ಶಾರುಖ್ ಖಾನ್ ಜೂಹಿ ಚಾವ್ಲಾ, ಪ್ರೀತಿ ಜಿಂಟಾ ಈಗಾಗಲೇ ಐಪಿಎಲ್ ಫ್ರಾಂಚೈಸಿ ಜೊತೆ ಗುರುತಿಸಿಕೊಂಡಿದ್ದಾರೆ. ಸದ್ಯ ಶಿಲ್ಪಾ ಶೆಟ್ಟಿ ಅವರು ಫ್ರಾಂಚೈಸಿ ವ್ಯವಹಾರದಿಂದ ದೂರ ಉಳಿದಿದ್ದಾರೆ.

ಹೊಸ ತಂಡ ಸೇರ್ಪಡೆಯಾಗುತ್ತಿಲ್ಲ

ಹೊಸ ತಂಡ ಸೇರ್ಪಡೆಯಾಗುತ್ತಿಲ್ಲ

ಕೆಲ ಸೀಸನ್ ನಂತರ ಕೆಲವು ತಂಡಗಳು ಮಾಯವಾಗಿವೆ ಅಥವಾ ಬೇರೆ ಹೆಸರಿನಲ್ಲಿ ಅಸ್ತಿತ್ವ ಉಳಿಸಿಕೊಂಡಿವೆ. ಕೊಚ್ಚಿ ಟಸ್ಕರ್ಸ್ ತಂಡ 2011 ರ ಒಂದು ಐಪಿಎಲ್‌ ಸರಣಿಯಲ್ಲಿ ಮಾತ್ರವೇ ಆಡಿತು. ಪುಣೆ ವಾರಿಯರ್ಸ್ ತಂಡವು 2011 ರಿಂದ 2013 , ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವು 2016 ರಿಂದ 2018, ಗುಜರಾತ್ ಲಯನ್ಸ್ 2016 ರಿಂದ 2018 ರ ವರೆಗೆ ಆಡಿತ್ತು. ಡೆಕ್ಕನ್ ಚಾರ್ಜರ್ಸ್ ತಂಡವು 2008 ರಿಂದ 2012ರ ತನಕ ಆಡಿತ್ತು. ನಂತರ ಇದೇ ತಂಡ ಸನ್‌ರೈಸರ್ಸ್ ಹೈದರಾಬಾದ್ ಆಗಿ ಬದಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೇರಳದಿಂದ ಕೊಚ್ಚಿ ಟಸ್ಕರ್ಸ್, ಗುಜರಾತ್ ರಾಜ್ಯದಿಂದ ಗುಜರಾತ್ ಲಯನ್ಸ್, ಮಹಾರಾಷ್ಟ್ರದಿಂದ ಪುಣೆ ವಾರಿಯರ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡಗಳು ಐಪಿಎಲ್‌ನಲ್ಲಿ ಆಡಿವೆ. ಈ ಮೂರು ತಂಡಗಳಲ್ಲಿ ಒಂದಕ್ಕೆ ಮತ್ತೆ ಅವಕಾಶ ದೊರಕುವ ಸಾಧ್ಯತೆ ಇದೆ ಎಂಬ ಸುದ್ದಿಯಿತ್ತು.

ಮಾರನ್ ಬ್ರದರ್ಸ್ ಜೊತೆ ಅರ್ಜುನ್ ಮಾತುಕತೆ

ಮಾರನ್ ಬ್ರದರ್ಸ್ ಜೊತೆ ಅರ್ಜುನ್ ಮಾತುಕತೆ

ಹೈದರಾಬಾದ್ ಮೂಲದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೆನ್ನೈನ ಕಳಾನಿಧಿ ಮಾರನ್ ಸೋದರರು ಹಣ ಹೂಡಿದ್ದಾರೆ. ಸನ್ ಸಮೂಹ ಸಂಸ್ಥೆಯ ಒಡೆತನದ ಈ ತಂಡದಲ್ಲಿ ಹೂಡಿಕೆ ಮಾಡಲು ನಟ ಅಲ್ಲು ಅರ್ಜುನ್ ಮುಂದಾಗಿದ್ದು ,ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿದೆ. ಅಲ್ಲು ಅರ್ಜುನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಜೊತೆ ನಟಿಸುತ್ತಿರುವ ಪುಷ್ಪ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಪ್ರಚಾರ ಕಾರ್ಯದಲ್ಲಿ ಅರ್ಜುನ್ ನಿರತರಾಗಿದ್ದಾರೆ. ಆದರೆ, ಸಮಯ ಸಿಕ್ಕಾಗ ಕ್ರಿಕೆಟ್ ಮೈದಾನಕ್ಕೆ ಬಂದು ನೆಚ್ಚಿನ ಹೈದರಾಬಾದ್ ತಂಡವನ್ನು ಪ್ರೋತ್ಸಾಹಿಸುವುದನ್ನು ಮಾತ್ರ ಮರೆಯುವುದಿಲ್ಲ.

ಅಲ್ಲು ಅರ್ಜುನ್ ಡ್ಯಾನ್ಸ್ ವಾರ್ನರ್ ಸ್ಟೆಪ್ಸ್

ಅಲ್ಲು ಅರ್ಜುನ್ ಡ್ಯಾನ್ಸ್ ವಾರ್ನರ್ ಸ್ಟೆಪ್ಸ್

ಅಲ್ಲು ಅರ್ಜುನ್ ನರ್ತಿಸಿರುವ ಬುಟ್ಟ ಬೊಮ್ಮಾ ಹಾಡಿಗೆ ಹಲವು ಬಾರಿ ಹೆಜ್ಜೆ ಹಾಕಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ಒಂದು ದಿನ ಅರ್ಜುನ್ ಜೊತೆಗೆ ಇದೇ ಹಾಡಿಗೆ ಸ್ಟೆಪ್ ಹಾಕಲಿ ಎಂಬುದು ಅಭಿಮಾನಿಗಳ ಬಯಕೆಯಾಗಿದೆ. ಕೊವಿಡ್ 19 ಮಾರ್ಗಸೂಚಿ ನಡುವೆ ಪಂದ್ಯಗಳು ನಡೆಯುತ್ತಿದ್ದು, ಈ ವೇಳೆ ಸೆಲೆಬ್ರಿಟಿಗಳ ಭೇಟಿ ಕೂಡಾ ನಿರ್ಬಂಧಿಸಲಾಗಿದೆ. ಆದರೆ, ವಿಶೇಷ ಸಂದರ್ಭದಲ್ಲಿ ಇದೇ ಹಾಡಿಗೆ ಅರ್ಜುನ್ ಜೊತೆ ಕುಣಿಯುವುದಾಗಿ ವಾರ್ನರ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಕ್ರೇಜ್ ಹುಟ್ಟು ಹಾಕಿರುವ ವಾರ್ನರ್ ಡ್ಯಾನ್ಸ್ ಮತ್ತೊಮ್ಮೆ ನೋಡಲು ಅಭಿಮಾನಿಗಳಂತೂ ಸದಾ ಸಿದ್ಧ ಎನ್ನಬಹುದು.

Story first published: Friday, April 2, 2021, 13:47 [IST]
Other articles published on Apr 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X