ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾರ್ನರ್, ಸ್ಮಿತ್ ನಿಷೇಧ ಹಿಂತೆಗೆತ? ಭಾರತ ವಿರುದ್ಧಕ್ಕೆ ಆಡಲು ಸಜ್ಜು

CA to consider lifting ban on Steve Smith, David Warner

ಮೆಲ್ಬೋರ್ನ್, ನವೆಂಬರ್ 07: ಚೆಂಡು ವಿರೂಪ ಪ್ರಕರಣದಲಿ ತಪ್ಪಿತಸ್ಥರಾಗಿರುವ ಮಾಜಿ ನಾಯಕ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಕೆಮರೂನ್ ಬ್ಯಾನ್ ಕ್ರಾಫ್ಟ್ ಅವರ ಮೇಲಿನ ನಿಷೇಧವನ್ನು ಶೀಘ್ರವೇ ಹಿಂತೆಗೆದುಕೊಳ್ಳುವುದಾಗಿ ಕ್ರಿಕೆಟ್ ಅಸ್ಟ್ರೇಲಿಯಾ ಹೇಳಿದೆ. ಹೀಗಾಗಿ, ಭಾರತ ವಿರುದ್ಧದ ಸರಣಿಗೆ ಈ ಇಬ್ಬರು ಆಟಗಾರರು ಆಯ್ಕೆಗೆ ಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ (ಎಸಿಎ) ನಿಂದ ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಡ ಬಂದಿದೆ. ಹೀಗಾಗಿ, ನಿರ್ವಹಣಾ ಸಮಿತಿಯ ಸಿಇಒ ಕೆವಿನ್ ರಾಬರ್ಟ್ಸ್ ಇಂದು(ನವೆಂಬರ್ 07) ಹೇಳಿದ್ದಾರೆ.

'ಸ್ಮಿತ್, ವಾರ್ನರ್ ಚೆಂಡು ವಿರೂಪದ ತಪ್ಪಿಗೆ ಕ್ರಿಕೆಟ್ ಮಂಡಳಿಯ ಒತ್ತಡ ಕಾರಣ''ಸ್ಮಿತ್, ವಾರ್ನರ್ ಚೆಂಡು ವಿರೂಪದ ತಪ್ಪಿಗೆ ಕ್ರಿಕೆಟ್ ಮಂಡಳಿಯ ಒತ್ತಡ ಕಾರಣ'

ನಾಯಕ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ಅವರಿಗೆ 12 ತಿಂಗಳುಗಳ ಕಾಲ ಅಮಾನತು ಮಾಡಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ದಕ್ಷಿಣ ಅಫ್ರಿಕಾದಲ್ಲಿ ಚೆಂಡು ವಿರೂಪಗೊಳಿಸಿದ ಘಟನೆಯಲ್ಲಿ ಭಾಗಿಯಾಗಿದ್ದರು.

ವಾರ್ನರ್‌ ಮಗುವನ್ನು ಬಲಿ ತೆಗೆದುಕೊಂಡ ಚೆಂಡು ವಿರೂಪ ಪ್ರಕರಣ

ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ ಅವರಿಗೆ 9 ತಿಂಗಳುಕಾಲ ನಿಷೇಧ ಹೇರಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲದೆ, ಶೆಫೀಲ್ಡ್ ಶೀಲ್ಡ್ ಹಾಗೂ ಬಿಗ್ ಬ್ಯಾಶ್ ಟ್ವೆಂಟಿ20 ಲೀಗ್ ನಲ್ಲೂ ಪಾಲ್ಗೊಳ್ಳುವಂತಿಲ್ಲ.

ನಿಷೇಧ ಹಿಂತೆಗೆತ ಏಕೆ?: ಸತತವಾಗಿ ಏಕದಿನ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿದೆ. ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲೂ ಗೆಲುವಿನ ಲಯಕ್ಕೆ ಮರಳಲು ಆಗದೆ ಆಸ್ಟ್ರೇಲಿಯಾ ತಿಣುಕಾಡಿದೆ.

ಮೋಸದಾಟ ಇನ್ನು ಸುಲಭವಲ್ಲ: 'ಚೆಂಡು ವಿರೂಪ'ಕ್ಕಿದೆ ಕಠಿಣ ಶಿಕ್ಷೆ!ಮೋಸದಾಟ ಇನ್ನು ಸುಲಭವಲ್ಲ: 'ಚೆಂಡು ವಿರೂಪ'ಕ್ಕಿದೆ ಕಠಿಣ ಶಿಕ್ಷೆ!

ಅರೋನ್ ಫಿಂಚ್ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ 5-0ರಲ್ಲಿ ವೈಟ್ ವಾಶ್ ಮಾಡಿಕೊಂಡ ಆಸೀಸ್ ತಂಡಕ್ಕೆ ದಕ್ಷಿಣ ಆಫ್ರಿಕಾ ಕೂಡಾ ಸೋಲುಣಿಸಿದೆ. ಸತತವಾಗಿ 7 ಪಂದ್ಯಗಳನ್ನು ಆಸ್ಟ್ರೇಲಿಯಾ ಕಳೆದುಕೊಂಡಿದೆ. ಹೀಗಾಗಿ, ಸ್ಮಿತ್ ಹಾಗೂ ವಾರ್ನರ್ ಮೇಲಿನ ನಿಷೇಧ ಹಿಂತೆಗೆದು, ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮನಸ್ಸು ಮಾಡಿದೆ.

Story first published: Wednesday, November 7, 2018, 20:55 [IST]
Other articles published on Nov 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X