ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದೇಶಿ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಮಿಂಚಬಲ್ಲರೇ? ಡೇನಿಯಲ್ ವೆಟ್ಟೋರಿ ಪ್ರಶ್ನೆ!

Daniell Vettori

ಕಾನ್ಪುರ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಿ, ಮುಂಬೈ ಟೆಸ್ಟ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್ ಕುರಿತು ನ್ಯೂಜಿಲೆಂಡ್ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಕುತೂಹಲಕಾರಿಯಾದ ಪ್ರಶ್ನೆ ಹೊರಹಾಕಿದ್ದಾರೆ.

ಭಾರತದ ಪಿಚ್‌ಗಳಲ್ಲಿ ಅಬ್ಬರಿಸಿದ ಅಕ್ಷರ್ ಪಟೇಲ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನ ತಬ್ಬಿಬ್ಬಾಗಿಸುತ್ತಾರೆ. ಭಾರತದ ವಿಕೆಟ್‌ಗಳಲ್ಲಿ ಅತ್ಯಂತ ಚಾಣಾಕ್ಷ್ಯ ರೀತಿಯಲ್ಲಿ ಸ್ಪಿನ್ ದಾಳಿ ನಡೆಸುವ ಅಕ್ಷರ್ ಪಟೇಲ್, ವಿದೇಶಿ ಪಿಚ್‌ಗಳಲ್ಲಿ ಯಾವ ರೀತಿಯಲ್ಲಿ ಸಫಲರಾಗಲಿದ್ದಾರೆ ಎಂಬುದನ್ನ ನೋಡಬೇಕಿದೆ ಎಂದು ವೆಟ್ಟೋರಿ ಹೇಳಿದ್ದಾರೆ.

ಎಡಗೈ ಸ್ಪಿನ್ನರ್ ಅಕ್ಷರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ಆರಂಭ ಪಡೆದಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ ಚೊಚ್ಚಲ ಸರಣಿಯಲ್ಲಿ 3 ಟೆಸ್ಟ್‌ಗಳಲ್ಲಿ 27 ವಿಕೆಟ್‌ಗಳನ್ನು ಪಡೆದರು. ಇನ್ನು ನ್ಯೂಜಿಲೆಂಡ್ ವಿರುದ್ಧ ನಿಧಾನಗತಿಯ ಕಾನ್ಪುರ ಪಿಚ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದರು. ಅಕ್ಷರ್ ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣಿಸುವುದು ಕೂಡ ಕನ್ಫರ್ಮ್‌ ಆಗಿದೆ.

ಅಕ್ಸರ್ ಪಟೇಲ್ ಅವರ ರೌಂಡ್ ಆರ್ಮ್ ಆ್ಯಕ್ಷನ್ ಮತ್ತು ಬೌಲಿಂಗ್ ಶೈಲಿಯು ಭಾರತೀಯ ಪರಿಸ್ಥಿತಿಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದು ಡೇನಿಯಲ್ ವೆಟ್ಟೋರಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಾರತದ ಹೊರಗೆ ಪಟೇಲ್‌ಗೆ ಅವಕಾಶ ಸಿಕ್ಕರೆ ಗುಜರಾತ್ ಸ್ಪಿನ್ನರ್‌ನ ಯಾವ ರೀತಿ ಪ್ರದರ್ಶನ ನೀಡಬಲ್ಲರು ಎಂಬುದನ್ನ ವೀಕ್ಷಿಸಲಿದ್ದೇನೆ ಎಂದು ಹೇಳಿದ್ದಾರೆ.

ಅಕ್ಷರ್‌ನನ್ನ ಹೊಗಳಿರುವ ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಅಕ್ಷರ್ ಪಟೇಲ್ ಅವರನ್ನು ಹೊಗಳಿದ್ದಾರೆ. ನ್ಯೂಜಿಲೆಂಡ್ ಸರಣಿಯ ಮುಕ್ತಾಯದ ನಂತರ, ಭಾರತವು 1-0 ಅಂತರದಲ್ಲಿ ಗೆದ್ದುಕೊಂಡಿತು. ಈ ಬಳಿಕ ಅಕ್ಷರ್ ಪಟೇಲ್ ಕುರಿತು ಹೊಗಳಿದ ಕೊಹ್ಲಿ, ಪಟೇಲ್ ಟೆಸ್ಟ್‌ ಕ್ರಿಕೆಟ್‌ಗೆ ಎಂಟ್ರಿಗೂ ಮೊದಲ ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈತ ವಿವಿಧ ಸ್ವರೂಪಗಳಿಗೆ ಹೊಂದಿಕೊಳ್ಳುವ ಆಲ್ ರೌಂಡರ್ ಎಂದು ಶ್ಲಾಘಿಸಿದರು.

Axar patel

"ಅಕ್ಸರ್ ನಿಸ್ಸಂಶಯವಾಗಿ ಆಲ್ ರೌಂಡ್ ಕ್ರಿಕೆಟಿಗ. ಅವರ ಕೌಶಲ್ಯವು ಅವರು ಆಡುವ ಯಾವುದೇ ತಂಡಕ್ಕೆ ಉತ್ತಮ ಸಮತೋಲನವನ್ನು ಒದಗಿಸುತ್ತವೆ. ಅವರು ಇಷ್ಟು ದಿನ ಟಿ20 ಸ್ವರೂಪದಲ್ಲಿ ಮತ್ತು ಟೆಸ್ಟ್‌ಗಳಲ್ಲಿ ಅವರಿಗೆ ಅವಕಾಶ ನೀಡಿದಾಗ ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ನೋಡಿದ್ದೇವೆ. ಒಳ್ಳೆಯ ವಿಷಯವೆಂದರೆ ಅವರು ತಮ್ಮ ಆಟವನ್ನು ಫಾರ್ಮೆಟ್‌ಗೆ ತಕ್ಕಂತೆ ಅಗತ್ಯಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ, ಇದು ಉತ್ತಮ ಸಂಕೇತವೆಂದು ನಾನು ಭಾವಿಸುತ್ತೇನೆ "ಎಂದು ಕೊಹ್ಲಿ ಹೇಳಿದರು.

ಟೀಂ ಇಂಡಿಯಾ ಮುಂದಿನ ದಿನಗಳಲ್ಲಿ 3 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ನಡೆಸಲಿದೆ. ಡಿಸೆಂಬರ್ 26 ರಂದು ಸೆಂಚುರಿಯನ್ ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ. ಕಳೆದ ಶನಿವಾರ ಕೊಲ್ಕತ್ತಾದಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟೀಮ್ ಇಂಡಿಯಾ ಟೆಸ್ಟ್‌ ಸರಣಿಯನ್ನ ಆರಂಭವನ್ನು ದೃಢಪಡಿಸಿತು.

ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ | Oneindia kannada

ಮೊದಲ ಟೆಸ್ಟ್ ಡಿಸೆಂಬರ್ 26 ರಂದು ಪ್ರಾರಂಭವಾಗುತ್ತದೆ. ಈ ಮೊದಲು ವೇಳಾಪಟ್ಟಿಯ ಪ್ರಕಾರ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ 9 ದಿನಗಳ ಮೊದಲು (ಡಿಸೆಂಬರ್ 17) ಪ್ರಾರಂಭವಾಗಬೇಕಿತ್ತು. ಭಾರತವು ಮೂಲತಃ ನಿಗದಿತ ಸಮಯಕ್ಕಿಂತ ಒಂದು ವಾರದ ನಂತರ ದಕ್ಷಿಣ ಆಫ್ರಿಕಾಗೆ ತೆರಳಿದೆ. ಜೊತೆಗೆ ಬಾಕ್ಸಿಂಗ್ ಡೇ ಟೆಸ್ಟ್‌ನೊಂದಿಗೆ ಸರಣಿ ಪ್ರಾರಂಭವಾಗುತ್ತದೆ, ಜನವರಿಯಲ್ಲಿ ಇನ್ನೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತದೆ. ಟಿ20 ಸರಣಿ ಕುರಿತಾಗಿ ಮುಂದಿನ ದಿನಗಳಲ್ಲಿ ವೇಳಾಪಟ್ಟಿ ಬಿಡುಗಡೆಯಾಗಲಿದೆ.

Story first published: Monday, December 6, 2021, 21:42 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X