ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!

Cant Single Rishabh Pant Out in Collective Failure: Virat Kohli

ಕ್ರೈಸ್ಟ್‌ಚರ್ಚ್, ಮಾರ್ಚ್ 2: ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ನ್ಯೂಜಿಲೆಂಡ್-ಭಾರತ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ 7 ವಿಕೆಟ್ ಸೋಲನುಭವಿಸಿದೆ. ಇದರೊಂದಿಗೆ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೊಹ್ಲಿ ಪಡೆ ಮತ್ತೆ ವೈಟ್‌ವಾಷ್ ಮುಖಭಂಗ ಅನುಭವಿಸುವಂತಾಗಿದೆ. ಅಷ್ಟೇ ಅಲ್ಲ, ಕಿವೀಸ್ ವಿರುದ್ಧದ ಟೆಸ್ಟ್ ಸರಣಿ ಸೋಲು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲೂ ಭಾರತಕ್ಕೆ ಹೊಡೆತ ನೀಡಿದೆ.

ಕೊಹ್ಲಿ ವೈಫಲ್ಯವೇ ದೊಡ್ಡ ಸಮಸ್ಯೆ ಎಂದು ಹೇಳಿಕೆ ನೀಡಿದ ವಿವಿಎಸ್ ಲಕ್ಷ್ಮಣ್ಕೊಹ್ಲಿ ವೈಫಲ್ಯವೇ ದೊಡ್ಡ ಸಮಸ್ಯೆ ಎಂದು ಹೇಳಿಕೆ ನೀಡಿದ ವಿವಿಎಸ್ ಲಕ್ಷ್ಮಣ್

ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಕ್ರಿಕೆಟ್ ತಂಡ ಅಲ್ಲಿ ಐದು ಪಂದ್ಯಗಳ ಟಿ20 ಸರಣಿಯ ಮೂಲಕ ಪ್ರವಾಸ ಸರಣಿ ಆರಂಭಿಸಿತ್ತು. ಟಿ20 ಸರಣಿಯಲ್ಲಿ ಐದಕ್ಕೆ ಐದೂ ಪಂದ್ಯಗಳನ್ನೂ ಗೆದ್ದು ಬೀಗಿತ್ತು. ಅದಾಗಿ ಏಕದಿನ ಸರಣಿಯಲ್ಲಿ ಮೂರೂ ಪಂದ್ಯಗಳನ್ನು ಸೋತಿತು. ಮತ್ತೆ ಟೆಸ್ಟ್ ನಲ್ಲೂ ಭಾರತಕ್ಕೆ ಗೆಲುವು ಒಲಿಯಲಿಲ್ಲ.

ರಣಜಿ: ಫೈನಲ್ ತಲುಪಲು ಕರ್ನಾಟಕ ತಂಡಕ್ಕೆ 352 ರನ್‌ಗಳ ಗುರಿರಣಜಿ: ಫೈನಲ್ ತಲುಪಲು ಕರ್ನಾಟಕ ತಂಡಕ್ಕೆ 352 ರನ್‌ಗಳ ಗುರಿ

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತಿದ್ದಕ್ಕೆ ರಿಷಭ್ ಪಂತ್ ಕಾರಣಾನಾ? ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತಕ್ಕೆ ಬಿದ್ದಿರುವ ಹೊಡೆತದ ಕುರಿತೂ ಇಲ್ಲಿ ಮಾಹಿತಿಯಿದೆ.

ಪಂತ್‌ ಗಳಿಸಿದ್ದು ಕೇವಲ 60 ರನ್

ಪಂತ್‌ ಗಳಿಸಿದ್ದು ಕೇವಲ 60 ರನ್

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಯುವ ಬಿರುಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಎರಡು ಪಂದ್ಯ(4 ಇನ್ನಿಂಗ್ಸ್‌)ಗಳಲ್ಲೂ ಆಡಿದ್ದರು. ಆದರೆ ಈ ನಾಲ್ಕೂ ಇನ್ನಿಂಗ್ಸ್‌ಗಳಲ್ಲೂ ಪಂತ್‌ ಗಳಿಸಿದ್ದು ಕೇವಲ 60 ರನ್ (19, 25, 12, 4 ರನ್) ಮಾತ್ರ.

ಚಾನ್ಸ್ ಕೊಟ್ಟರೂ ಬಳಸಿಕೊಳ್ಳುತ್ತಿಲ್ಲ

ಚಾನ್ಸ್ ಕೊಟ್ಟರೂ ಬಳಸಿಕೊಳ್ಳುತ್ತಿಲ್ಲ

ಪಂತ್‌ಗೆ ಬಹಳಷ್ಟು ಪಂದ್ಯಗಳಲ್ಲಿ ಚಾನ್ಸ್‌ ಕೊಡುತ್ತಿದ್ದರೂ ಪಂತ್‌ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಗಮನಾರ್ಹ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಕ್ರಿಕೆಟ್‌ ಜಗತ್ತು ಪಂತ್‌ ಅವರತ್ತ ಬೊಟ್ಟು ಮಾಡಿ ಮಾತಾಡುತ್ತಿದೆ. ಹೀಗಾಗಿಯೇ ಪಂತ್‌ಗೆ ಪದೇ ಪದೇ ಅವಕಾಶ ನೀಡುತ್ತಿರುವ ಬಗ್ಗೆ ವಿವರಣೆ ನೀಡಿ ಕೊಹ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

'ಪಂತ್‌ ಶ್ರಮವಹಿಸುತ್ತಿದ್ದಾರೆ'

'ಪಂತ್‌ ಶ್ರಮವಹಿಸುತ್ತಿದ್ದಾರೆ'

'ತವರಿನ ಸರಣಿ ಮತ್ತು ವಿದೇಶಿ ಸರಣಿಗಳಲ್ಲೂ ನಾವು ಪಂತ್‌ಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದೇವೆ. ಆದರೆ ಪಂತ್ ಅಷ್ಟೇನೂ ಆಡುತ್ತಿಲ್ಲ. ಹಾಗಂತ ಆತ ನಿಜಕ್ಕೂ ಶ್ರಮವಹಿಸಿ ಅಭ್ಯಾಸ ನಡೆಸಿದ್ದಾನೆ. ಹೀಗಿರುವಾಗ ಆತನ ಬದಲು ಬೇರೆಯವರಿಗೆ ಯಾವಾಗ ಅವಕಾಶ ನೀಡಲು ಸರಿಯಾದ ಸಮಯ ಯಾವುದು ಅನ್ನುವುದನ್ನು ತಿಳಿದುಕೊಳ್ಳುವ ಅಗತ್ಯವಿದೆ,' ಎಂದು ಕೊಹ್ಲಿ, ಪಂತ್‌ ಅವರ ಪರ ವಹಿಸಿ ಮಾತನಾಡಿದ್ದಾರೆ.

ಸೋಲಿಗೆ ನಿಜವಾದ ಕಾರಣ

ಸೋಲಿಗೆ ನಿಜವಾದ ಕಾರಣ

ಮಾತು ಮುಂದುವರೆಸಿದ ಕೊಹ್ಲಿ, 'ಒಟ್ಟಾರೆಯಾಗಿ ಹೇಳೋದಾದ್ರೆ ನಾವ್ಯಾರೂ ಈ ಟೆಸ್ಟ್ ಸರಣಿಯಲ್ಲಿ ಸರಿಯಾಗಿ ಆಡಲಿಲ್ಲ. ಸೋಲಿಗೆ ಪಂತ್‌ ಒಬ್ಬನನ್ನೇ ಗುರಿ ಮಾಡುವುದು ಸರಿಯಲ್ಲ. ಆತನನ್ನು ನಾವೊಂದು ತಂಡವಾಗಿ ಪರಿಗಣಿಸಿದ್ದೇವೆ. ಅದು ಬ್ಯಾಟಿಂಗ್ ತಂಡ ಅಥವಾ ಇಡೀ ತಂಡ ಏನೇ ಇರಲಿ. ಸೋಲಿಗೆ ತಂಡ ಕಾರಣವೇ ಹೊರತು ಅವರೊಬ್ಬರೇ ಅಲ್ಲ, ಎಂದು ಕೊಹ್ಲಿ ವಿವರಿಸಿದರು.

ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಹಿನ್ನಡೆ

ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಹಿನ್ನಡೆ

ಕಿವೀಸ್ ಟೆಸ್ಟ್ ಸರಣಿಗೂ ಮುನ್ನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಭರ್ಜರಿ ಮುನ್ನಡೆಯಲ್ಲಿತ್ತು. ಆದರೆ ನ್ಯೂಜಿಲೆಂಡ್ ಎದುರಿನ ಸೋಲಿನಿಂದಾಗಿ ಈಗ ಭಾರತ ಎರಡು ಪಂದ್ಯ ಸೋತಂತಾಗಿದೆ. ಒಟ್ಟು 4 ಸರಣಿಗಳಲ್ಲಿ (9 ಪಂದ್ಯಗಳು) 7 ಪಂದ್ಯಗಳನ್ನು ಗೆದ್ದು 2 ಪಂದ್ಯಗಳನ್ನು ಸೋತಿದೆ. ಸದ್ಯ 360 ಪಾಯಿಂಟ್ಸ್‌ನಿಂದ ಭಾರತ ಅಂಕಪಟ್ಟಿಯ ಮೊದಲ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ (296 ಪಾಯಿಂಟ್ಸ್), ತೃತೀಯ ಸ್ಥಾನದಲ್ಲಿ ನ್ಯೂಜಿಲೆಂಡ್ (180) ಇದೆ.

Story first published: Monday, March 2, 2020, 18:20 [IST]
Other articles published on Mar 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X