ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಮೊಟೆರಾ'ದಲ್ಲಿ ಆಡಲು ಕಾತರನಾಗಿದ್ದೇನೆ: ಹಿಟ್‌ಮ್ಯಾನ್ ರೋಹಿತ್ ಟ್ವೀಟ್

Cant wait to play at Motera Stadium, tweets Rohit Sharma

ನವದೆಹಲಿ, ಫೆಬ್ರವರಿ 19: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲು ಬಹಳ ಕಾತರನಾಗಿದ್ದೇನೆ ಎಂದು ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೇಳಿದ್ದಾರೆ. ಸ್ಟೇಡಿಯಂ ಸಂಪೂರ್ಣ ಸಿದ್ಧಗೊಂಡಿದ್ದು, ಫೆಬ್ರವರಿ 24ರಂದು ಉದ್ಘಾಟನೆಗೊಳ್ಳುವುದರಲ್ಲಿದೆ.

52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!

'ಈ ಸ್ಟೇಡಿಯಂ ಬಗ್ಗೆ ತುಂಬಾ ಕೇಳಿದ್ದೆ, ನೋಡಲು ತುಂಬಾ ಚೆನ್ನಾಗಿದೆ. ಇಲ್ಲಿ ಆಡಲು ಕಾತರನಾಗಿದ್ದೇನೆ,' ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ. ರೋಹಿತ್ ಒಬ್ಬರೇ ಅಲ್ಲ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ಬೃಹತ್ ಸ್ಟೇಡಿಯಂಗೆ ಮೆಚ್ಚಿಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.

'ಮೊಟೆರಾ' ಎಂದು ಹೆಸರಿಸಲಾಗಿರುವ ಈ ಸ್ಟೇಡಿಯಂ 1,10,000ಕ್ಕೂ ಹೆಚ್ಚಿನ ಆಸನ ವ್ಯವಸ್ಥೆ ಹೊಂದಿರಲಿದೆ. ಈ ಸ್ಟೇಡಿಯಂ, ವಿಶ್ವದ ಅತೀ ದೊಡ್ಡ ಸ್ಟೇಡಿಯಂ ಎಂದು ಹೆಸರುವಾಸಿಯಾಗಿದ್ದ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಅನ್ನು ಹಿಂದಿಕ್ಕಿದೆ.

 ಟೀ ಇಂಡಿಯಾದಲ್ಲಿ ಈ ಆಟಗಾರ ಇರುವುದೇ ಕೊಹ್ಲಿಯ ದೊಡ್ಡ ಅದೃಷ್ಟ: ಸ್ಟೀವ್ ವಾ ಟೀ ಇಂಡಿಯಾದಲ್ಲಿ ಈ ಆಟಗಾರ ಇರುವುದೇ ಕೊಹ್ಲಿಯ ದೊಡ್ಡ ಅದೃಷ್ಟ: ಸ್ಟೀವ್ ವಾ

ಅಹಮದಾಬಾದ್‌ನಲ್ಲಿರುವ ಈ ಸ್ಟೇಡಿಯಂ ಅನ್ನು 1982ರಲ್ಲೇ ನಿರ್ಮಿಸಲಾಗಿತ್ತು. ಆಗ ಈ ಸ್ಟೇಡಿಯಂನಲ್ಲಿ 49,000 ಆಸನ ವ್ಯವಸ್ಥೆಯಿತ್ತು. ಈಗ ಇದೇ ಸ್ಟೇಡಿಯಂ ಅನ್ನು ಬೃಹತ್ ಗಾತ್ರದಲ್ಲಿ ಪುನರ್ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಭಾರತದ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದ್ದ, ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂ (66,000 ಆಸನ ವ್ಯವಸ್ಥೆ) ಅನ್ನೂ ಕೂಡ ಮೊಟೆರಾ ಹಿಂದಿಕ್ಕಿದೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೆಬ್ರವರಿ 24ರ ಮಧ್ಯಾಹ್ನದೊಳಗಾಗಿ ಅಹಮದಾಬಾದ್‌ಗೆ ತಲುಪಲಿದ್ದಾರೆ. ಈ ವೇಳೆ ಮೊಟೆರಾ ಸ್ಟೇಡಿಯಂನಲ್ಲಿ ಸುಮಾರು 1,00,000 ಜನರ ಸಭೆಯನ್ನುದ್ದೇಶಿಸಿ ಟ್ರಂಪ್‌ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ರೋಹಿತ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಗಾಯದ ಕಾರಣಕ್ಕಾಗಿ ನ್ಯೂಜಿಲೆಂಡ್‌ ವಿರುದ್ಧಧ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಶರ್ಮಾ ಹೊರ ಬಿದ್ದಿದ್ದರು.

Story first published: Wednesday, February 19, 2020, 23:07 [IST]
Other articles published on Feb 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X