ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ದಶಕದಲ್ಲಿ ನನ್ನ ಪಾಲಿಗೆ ಏನೆಲ್ಲಾ ಇರಲಿದೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ: ಸ್ಟೀವ್ ಸ್ಮಿತ್

Can’t wait to see what the next decade has in store for me’ says Steve Smith

ಆಸ್ಟ್ರೇಲಿಯಾದ ಬ್ಯಾಟಿಂಗ್ ತಾರೆ ಸ್ಟೀವ್ ಸ್ಮಿತ್ ಐಸಿಸಿ ದಶಕದ ಟೆಸ್ಟ್ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದು ಈ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಟೀವ್ ಸ್ಮಿತ್ ಹೃದಯಸ್ಪರ್ಶಿ ಸಂದೇಶವನ್ನು ಪ್ರಕಟಿಸಿದ್ದು ಈ ಗೌರವವನ್ನು ಪಡೆಯಲು ನಾನು ವಿನಮ್ರನಾಗಿದ್ದೇನೆ ಎಂದಿದ್ದಾರೆ.

ಸ್ಟೀವ್ ಸ್ಮಿತ್ ತಮಗೆ ಸಂದ ಗೌರವದ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. "ದಶಕದ ಟೆಸ್ಟ್ ಆಟಗಾರ ಎಂಬ ಗೌರವವನ್ನು ಪಡೆದುಕೊಳ್ಳಲು ನಾನು ವಿನಮ್ರನಾಗಿದ್ದೇನೆ. ನನ್ನ ವೃತ್ತಿ ಬದುಕಿನಲ್ಲಿ ಈವರೆಗೆ ನನ್ನ ಸಾಧನೆಗೆ ಕಾರಣರಾದ ಎಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್

ಸಾಕಷ್ಟು ಕಲಿತುಕೊಂಡಿದ್ದೇನೆ

ಸಾಕಷ್ಟು ಕಲಿತುಕೊಂಡಿದ್ದೇನೆ

ಸ್ಟೀವ್ ಸ್ಮಿತ್ ಮುಂದುವರಿದು ಮಾತನಾಡುತ್ತಾ "ನಾನು ಸಾಕಷ್ಟು ತಮಾಷೆಯ ಹಾಗೂ ಸವಾಲಿನ ಕ್ಷಣಗಳನ್ನು ಎದುರಿಸಿದ್ದೇನೆ. ಅದರ ಮೂಲಕ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ಈಗ ಮುಂದಿನ ದಶಕದಲ್ಲಿ ನನ್ನ ಪಾಲಿಗೆ ಏನೆಲ್ಲಾ ನಿಗದಿಯಾಗಿದೆ ಎಂಬುದನ್ನು ನೋಡಲು ಕಾತರನಾಗಿದ್ದೇನೆ" ಎಂದು ಸ್ಟೀವ್ ಸ್ಮಿತ್ ಟ್ವೀಟ್‌ನಲ್ಲಿಹೇಳೀಕೊಂಡಿದ್ದಾರೆ.

ಟೆಸ್ಟ್‌ನಲ್ಲಿ ಸ್ಮಿತ್ ಸಾಧನೆ

ಟೆಸ್ಟ್‌ನಲ್ಲಿ ಸ್ಮಿತ್ ಸಾಧನೆ

ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನ ಆಧುನಿಕ ಕಾಲದ ಶ್ರೇಷ್ಠ ಆಟಗಾರನಾಗಿದ್ದಾರೆ. ಈ ದಶಕದಲ್ಲಿ ಸ್ಟೀವ್ ಸ್ಮಿತ್ ಅವರ ಟೆಸ್ಟ್ ಸಾಧನೆ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದೆ. ಈ ದಶಕದ ಅವಧಿಯಲ್ಲಿ ಸ್ಟೀವ್ ಸ್ಮಿತ್ 69 ಟೆಸ್ಟ್ ಪಂದ್ಯಗಳಲ್ಲಿ 7040 ರನ್ ಗಳಿಸಿದ್ದು 65.79ರ ಸರಾಸರಿಯನ್ನು ಹೊಂದಿದ್ದಾರೆ. 26 ಶತಕ, 28 ಅರ್ಧ ಶತಕ ಹಾಗೂ ಮೂರು ಆ್ಯಶಸ್ ದ್ವಿಶತಕಗಳಲ್ಲಿ ದಾಖಲಿಸಿದ್ದಾರೆ.

ಭಾರತದ ವಿರುದ್ಧ ಟೆಸ್ಟ್‌ನಲ್ಲಿ ವಿಫಲ

ಭಾರತದ ವಿರುದ್ಧ ಟೆಸ್ಟ್‌ನಲ್ಲಿ ವಿಫಲ

ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ಸಾಕಷ್ಟು ಸರಣಿ ಗೆಲುವುಗಳಲ್ಲಿ ಭಾಗಿಯಾಗಿದ್ದು 2019ರ ಆ್ಯಶಸ್ ಸರಣಿ ಅವರ ವೃತ್ತಿ ಜೀವನದ ಅತ್ಯುತ್ತಮ ಸರಣಿ ಎಂದು ಕರೆಯಲಾಗುತ್ತಿದೆ. 12 ತಿಂಗಳ ನಿಷೇಧದ ಬಳಿಕ ಮರಳಿದ ಸ್ಮಿತ್ ಈ ಸರಣಿಯಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 774 ರನ್ ಬಾರಿಸಿದ್ದರು. ಸದ್ಯ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸ್ಮಿತ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

Story first published: Friday, January 1, 2021, 0:14 [IST]
Other articles published on Jan 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X