ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಂಕಡ್‌ ಬದಲು ರನ್‌ಔಟ್‌ ಎಂದರೆ ಸಾಕು: ಹರ್ಷ ಭೋಗ್ಲೆ

r ashwin mankads joes buttler

ಬೆಂಗಳೂರು, ಏಪ್ರಿಲ್‌ 18: ಮಂಕಡ್‌ ಎನ್ನುವ ಬದಲು ರನ್‌ಔಟ್‌ ಎಂದು ಕರೆಯಬಹುದಲ್ಲವೇ ಎಂದು ಕ್ರಿಕೆಟ್‌ ತಜ್ಞ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಟ್ವೀಟ್‌ ಮೂಲಕ ವಿನಂತಿಸಿದ್ದಾರೆ.

"ವಿನೂ ಮಂಕಡ್‌ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ. ಅವರು ಬಿಲ್‌ ಬ್ರೌನ್‌ ಅವರನ್ನು ನಿಯಮಗಳ ಅನುಸಾರದಲ್ಲೇ ರನ್‌ಔಟ್‌ ಮಾಡಿದ್ದರು. ಸರ್‌ ಡಾನ್‌ ಬ್ರಾಡ್‌ಮನ್‌ಗೂ ಇದರಲ್ಲಿ ಯಾವುದೇ ತಪ್ಪು ಕಂಡಿರಲಿಲ್ಲ. ಮಂಕಡಿಂಗ್‌ ಎಂದು ಕರೆದರೆ ಅಗೌರವ ಸೂಚಿಸಿದಂತಾಗುತ್ತದೆ. ಅವರ ಕುಟುಂಬದವರಿಗೂ ಇದರಿದ ನೋವಾಗುತ್ತದೆ. ಹೀಗಾಗಿ ಕೇವಲ ರನ್‌ಔಟ್‌ ಎಂದರಷ್ಟೇ ಸಾಕಲ್ಲವೆ,'' ಎಂದು ಹರ್ಷ ಟ್ವೀಟ್‌ ಮಾಡಿದ್ದಾರೆ.

 'ಮಾಂಕೆಡೆಡ್‌' ಎಂದರೇನು? ಅಶ್ವಿನ್ ಮಾಡಿದ್ದು ಸರಿಯೋ, ತಪ್ಪೋ? 'ಮಾಂಕೆಡೆಡ್‌' ಎಂದರೇನು? ಅಶ್ವಿನ್ ಮಾಡಿದ್ದು ಸರಿಯೋ, ತಪ್ಪೋ?

ನಾನ್‌ಸ್ಟ್ರೈಕ್‌ ಬ್ಯಾಟ್ಸ್‌ಮನ್‌ ಕ್ರೀಸ್‌ನಿಂದ ಹೊರಗಿದ್ದಾಗ ಬೌಲರ್‌ ಚೆಂಡನ್ನು ಎಸೆಯುವ ಮುನ್ನ ಎಚ್ಚೆತ್ತು ರನ್‌ಔಟ್‌ ಮಾಡುವುದು ಕ್ರಿಕೆಟ್‌ ನಿಯಮಗಳ ಪ್ರಕಾರ ಸರಿ.

ಈ ರೀತಿ ನಾನ್‌ ಸ್ಟ್ರೈಕ್‌ ಬ್ಯಾಟ್ಸ್‌ಮನ್‌ಗೆ ಮೊದಲ ಬಾರಿ ಪೆವಿಲಿಯನ್‌ ದಾರಿ ತೋರಿಸಿದ್ದು ಭಾರತದ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ವಿನೂ ಮಂಕಡ್‌ ಅವರು. ಅಂದಿನಿಂದ ಈ ರೀತಿಯ ರನ್‌ಔಟ್‌ಗೆ ಮಂಕಡಿಂಗ್‌ ಎಂದೇ ಕರೆಯಲಾಗುತ್ತಿದೆ.

'ಮಂಕಡಿಂಗ್' ಔಟ್ ವಿವಾದ - ಮೌನ ಮುರಿದ ಜೋಸ್ ಬಟ್ಲರ್'ಮಂಕಡಿಂಗ್' ಔಟ್ ವಿವಾದ - ಮೌನ ಮುರಿದ ಜೋಸ್ ಬಟ್ಲರ್

ಇತ್ತೀಚೆನ ದಿನಗಗಳಲ್ಲಿ ಮಂಕಡಿಂಗ್‌ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು ಎಂಬ ವಾದಗಳಿವೆ. ಪ್ರಸಕ್ತ ಐಪಿಎಲ್‌ ವೇಳೆಯೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ರಾಜಸ್ಥಾನ ರಾಯಲ್ಸ್‌ ನಡುವಣ ಪಂದ್ಯದಲ್ಲಿ ಕಿಂಗ್ಸ್‌ ತಂಡದ ಬೌಲರ್‌ ಆರ್‌. ಅಶ್ವಿನ್‌ ರಾಯಲ್ಸ್‌ನ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಅವರನ್ನು ಮಂಕಡಿಂಗ್‌ ಮೂಲಕ ಔಟ್‌ ಮಾಡಿದ್ದರು.

ಬಟ್ಲರ್ 'ಮಂಕಡ್ ರನೌಟ್' ಬಗ್ಗೆ ಗ್ರೇಟ್ ವಾಲ್ ರಾಹುಲ್ ಮಾತು ಕೇಳಿ!ಬಟ್ಲರ್ 'ಮಂಕಡ್ ರನೌಟ್' ಬಗ್ಗೆ ಗ್ರೇಟ್ ವಾಲ್ ರಾಹುಲ್ ಮಾತು ಕೇಳಿ!

ಅಶ್ವಿನ್‌ ಕ್ರೀಡಾ ಸ್ಫೂರ್ತಿ ಮೆರೆಯದೆ ಬಟ್ಲರ್‌ ಅವರನ್ನು ರನ್‌ಔಟ್‌ ಮಾಡಿದರು ಎಂದು ಹಲವರು ಟೀಕಿಸಿದರೆ, ಇದು ಕ್ರಿಕೆಟ್‌ ನಿಯಮಗಳ ಪ್ರಕಾರ ಸರಿ ಎಂದು ಮತ್ತೂ ಹಲವರು ಅಶ್ವಿನ್‌ಗೆ ಬೆಂಬಲಿಸಿದ್ದರು. ಬಳಿಕ ಅಶ್ವಿನ್‌ ಕೂಡ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

Story first published: Thursday, April 18, 2019, 13:53 [IST]
Other articles published on Apr 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X