ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವಿ ಹಾದಿಯಲ್ಲಿ ಮತ್ತೊಬ್ಬ ಕ್ರಿಕೆಟರ್ : ಕ್ಯಾನ್ಸರ್ ಗೆದ್ದು ಶತಕ ಬಾರಿಸಿದ ಕಮಲ್

Cancer Survivor Kamal Singh Hits Century On Debut For Uttarakhand

ಟೀಮ್ ಇಂಡಿಯಾದ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ ಅದೆಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿದ ಸಾಹಸಿ. ಟೀಮ್ ಇಂಡಿಯಾ 2011ರ ವಿಶ್ವಕಪ್‌ನಲ್ಲಿ ಆಲ್‌ರೌಂಡ್ ಪ್ರದರ್ಶನದಿಂದ ಟೀಮ್ ಇಂಡಿಯಾಗೆ ಎರಡನೇ ವಿಶ್ವಕಪ್ ಗೆಲ್ಲಿಸಿಕೊಟ್ಟ ಕೆಚ್ಚೆದೆಯ ವೀರ. ಆದರೆ ಅಂತಾ ಯುವರಾಜ್‌ಗೆ ಕ್ಯಾನ್ಸರ್ ಬಾಧಿಸಿ ಅಕ್ಷರಶಃ ಸಾವಿನ ದವಡೆಗೆ ನೂಕಿ ಬಿಟ್ಟಿತ್ತು.

ಟೀಮ್ ಇಂಡಿಯಾದ ಆಟಗಾರರು ವಿಶ್ವಕಪ್‌ ಗೆಲುವಿನ ಸಂಭ್ರಮದಲ್ಲಿದ್ದರೆ ಆ ಗೆಲುವಿಗೆ ಕಾರಣವಾಗಿದ್ದ ಯುವಿ ಸಾವಿನೊಂದಿಗೆ ಹೋರಾಡಲು ನಿರ್ಧರಿಸಿದ್ದರು. ಆ ಹೋರಾಟದಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ಯುವಿ ಯಶಸ್ವಿಯೂ ಆದರು. ಮತ್ತೆ ಕ್ರಿಕೆಟ್ ಅಂಗಳದಲ್ಲಿ ಯುವಿ ಕಾಣಿಸಿಕೊಂಡು ಮಿಂಚಿದ್ದಾರೆ.

ಬಾಂಗ್ಲಾದಲ್ಲಿ ಏಷ್ಯಾ XI vs ವಿಶ್ವ XI: ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿಬಾಂಗ್ಲಾದಲ್ಲಿ ಏಷ್ಯಾ XI vs ವಿಶ್ವ XI: ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ

ಇದೀಗ ಮತ್ತೊಬ್ಬ ಸಿಂಗ್ ಅದೇ ಹಾದಿಯಲ್ಲಿದ್ದಾರೆ. ರಣಜಿ ಆಟಗಾರನೊಬ್ಬ ಬ್ಲಡ್‌ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಮತ್ತೆ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಆಡಿದ ಮೊದಲ ರಣಜಿ ಪಂದ್ಯದಲ್ಲೇ ಶತಕವನ್ನೂ ಬಾರಿಸಿ ಸ್ಪೂರ್ತಿಯಾಗಿದ್ದಾರೆ.

ಯಾರು ಆ ಆಟಗಾರ

ಯಾರು ಆ ಆಟಗಾರ

ಬ್ಲಡ್ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಆ ಅಪ್ರತಿಮ ಛಲಗಾರನ ಹೆಸರೇ ಕಮಲ್ ಸಿಂಗ್. ಉತ್ತರಾಖಂಡ್ ರಣಜಿ ತಂಡದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಮಹಾಮಾರಿಯ ವಿರುದ್ಧ ಹೋರಾಡಿ ಗೆದ್ದ ಕಮಲ್ ರಣಜಿ ಯ ಮೊದಲ ಪಂದ್ಯದಲ್ಲಿ ಭರ್ಜರಿ 101 ರನ್ ಗಳಿಸಿದ್ದಾರೆ. ಈ ಮೂಲಕ ಕ್ರಿಕೆಟ್‌ ಲೋಕದಲ್ಲಿ ಸಂಚಲನಕ್ಕೆ ಕಾರಣರಾಗಿದ್ದಾರೆ. ಯುವರಾಜ್ ಸಿಂಗ್ ಹೋರಾಟವನ್ನು ನೆನಪಿಸಿದ್ದಾರೆ.

ಮೂರುವರೆ ವರ್ಷ ಕ್ಯಾನ್ಸರ್ ವಿರುದ್ಧ ಕಾದಾಟ

ಮೂರುವರೆ ವರ್ಷ ಕ್ಯಾನ್ಸರ್ ವಿರುದ್ಧ ಕಾದಾಟ

ಕಮಲ್ ಸಿಂಗ್‌ಗೆ ಸದ್ಯ ವಯಸ್ಸು ಕೇವಲ 18. ಆತನಿಗೆ ಹದಿನಾಲ್ಕೂವರೆ ವರ್ಷದವನಾಗಿದ್ದಾಗ ಆತನಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಅದು ಕೂಡ ಲುಕೇಮಿಯಾ. ಹೀಗಾಗಿ ಕ್ರಿಕೆಟರ್ ಆಗುವ ಕಮಲ್ ಕನಸಿಗೆ ದೊಡ್ಡ ಹೊಡೆತ ಬೀಳುತ್ತದೆ. ಸತತ ಮೂರೂವರೆವರ್ಷ ಚಿಕಿತ್ಸೆಗೆ ಒಳಗಾಗಿ ಒಳಗಾದರು. ಎದೆಗುಂದದ ಕಮಲ್ ಗೆದ್ದು ಬಂದಿದ್ದಾರೆ.

ಕ್ಯಾನ್ಸರ್ ವಿಷಯವನ್ನು ಮುಚ್ಚಿಟ್ಟಿದ್ದ ಪೋಷಕರು

ಕ್ಯಾನ್ಸರ್ ವಿಷಯವನ್ನು ಮುಚ್ಚಿಟ್ಟಿದ್ದ ಪೋಷಕರು

ಕಮಲ್ ಸಿಂಗ್ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟರ್ ಆಗಬೇಕೆಂದು ಕನಸು ಕಂಡ ಹುಡುಗ. ಆದರೆ ಆಗಾಗ ಆರೋಗ್ಯದಲ್ಲಿ ದೊಡ್ಡ ಏರುಪೇರಾಗುತ್ತಿತ್ತು. ವೈದ್ಯಕೀಯ ಪರೀಕ್ಷೆಯಯಲ್ಲಿ ಕಮಲ್ ಸಿಂಗ್‌ಗೆ ಬ್ಲಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಮಗನಿಗೆ ತಿಳಿಸಿದೆ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ನೀಡಲು ಮುಂದಾದರು. ಹೀಗಾಗಿ ಲುಕೇಮಿಯಾ ಇರುವ ವಿಚಾರ ಕಮಲ್ ಸಿಂಗ್‌ಗೆ ತಿಳಿದಿರಲೇ ಇಲ್ಲ.

ಸೆಕೆಂಡ್ ಸ್ಟೇಜ್ನಲ್ಲಿ ಪತ್ತೆ

ಸೆಕೆಂಡ್ ಸ್ಟೇಜ್ನಲ್ಲಿ ಪತ್ತೆ

ಕಮಲ್‌ಗೆ ಬ್ಲಡ್ ಕ್ಯಾನ್ಸರ್ ಇರುವ ವಿಚಾರ ಗೊತ್ತಾದಾಗ ಅದು ಎರಡನೇ ಹಂತದಲ್ಲಿತ್ತು. ವೈದ್ಯರು ಕಮಲ್ ಪೋಷಕರಿಗೆ ಅಭಯವನ್ನು ನೀಡಿದರು. ಇನ್ನೂ ಚಿಕ್ಕ ವಯಸ್ಸಾಗಿರುವುದರಿಂದ ಕಮಲ್ ಶೀಘ್ರ ಗುಣಮುಖರಾಗುತ್ತಾರೆ ಎಂಬ ಭರವಸೆ ನೀಡಿದರು. ವೈದ್ಯರ ನಿರೀಕ್ಷೆಗೂ ಮೀರಿ ಕಮಲ್ ಚೇತರಿಸಿಕೊಂಡಿದ್ದಾರೆ.

ಯುವಿಗೂ ಕಮಲ್‌ಗೂ ಸಾಮ್ಯತೆ

ಯುವಿಗೂ ಕಮಲ್‌ಗೂ ಸಾಮ್ಯತೆ

ಕ್ಯಾನ್ಸರ್ ವಿರುದ್ಧ ಹೋರಾಡಿದ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್‌ಗೂ ಕಮಲ್‌ಗೂ ಸಾಕಷ್ಟು ಸಾಮ್ಯತೆಗಳು ಕಂಡುಬರುತ್ತದೆ. ಯುವರಾಜ್ ಸಿಂಗ್‌ರಂತೆಯೇ ಕಮಲ್ ಕೂಡ ಎಡಗೈ ಆಟಗಾರ. ಸ್ಪೋಟಕವಾಗಿ ಆಡಬಲ್ಲ ಸಾಮರ್ಥ್ಯವನ್ನು ಕಮಲ್ ಹೊಂದಿದ್ದಾರೆ.

ಕನ್ನಡಿಗ ಗಿರೀಶ್ ಹೋರಾಟವೂ ಸ್ಪೂರ್ತಿ

ಕನ್ನಡಿಗ ಗಿರೀಶ್ ಹೋರಾಟವೂ ಸ್ಪೂರ್ತಿ

ಕ್ಯಾನ್ಸರ್ ಹೋರಾಟದಲ್ಲಿ ಗೆದ್ದ ಮತ್ತೊಬ್ಬ ಕ್ರೀಡಾಪಟುವೂ ಇಲ್ಲಿ ಸ್ಪೂರ್ತಿ ನೀಡುತ್ತಾರೆ. ಅದು ಬೇರೆ ಯಾರೂ ಅಲ್ಲ, ಕಿಕ್ ಬಾಕ್ಸರ್ ಕನ್ನಡಿಗ ಗಿರೀಶ್ ಗೌಡ. ಇದೇ ರೀತಿ ಕ್ಯಾನ್ಸರ್ ವಿರುದ್ಧ ಹೋರಾಟವನ್ನು ಮಾಡಿದ ಗೆದ್ದ ಬಂದ ಕ್ರೀಡಾ ಪಡು ಗಿರೀಶ್. ಕ್ಯಾನ್ಸರ್‌ ವಿರುದ್ಧ ಗೆದ್ದು ಬಳಿಕ 201-19ನೇ ಸಾಲಿನ ನ್ಯಾಶನಲ್ ಫೆಡರೇಶನ್ ಕಪ್ ಗೆದ್ದು ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

Story first published: Sunday, February 16, 2020, 13:28 [IST]
Other articles published on Feb 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X