ಟ್ರಿನಿಡಾಡ್, ಅಕ್ಟೋಬರ್ 13: ಜೋನಾಥನ್ ಕಾರ್ಟರ್ ಅರ್ಧಶತಕದ ಕೊಡುಗೆಯೊಂದಿಗೆ ಟ್ರಿನಿಡಾಡ್ನಲ್ಲಿ ಶನಿವಾರ (ಅಕ್ಟೋಬರ್ 12) ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಫೈನಲ್ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧ ಬಾರ್ಬಡೋಸ್ ಟ್ರೈಡೆಂಟ್ಸ್ 27 ರನ್ ಜಯ ಗಳಿಸಿದೆ.
ಜಂಟಿ ಜೀವನಕ್ಕೆ ಪಾದಾರ್ಪಣೆ ಮಾಡಲು ಕರುಣ್ ನಾಯರ್-ಸನಾಯ ಸಜ್ಜು
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಗಯಾನಾ ಅಮೆಝಾನ್ ವಾರಿಯರ್ಸ್ ಇನ್ನಿಂಗ್ಸ್ನಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ನ ರೇಮನ್ ರೀಫರ್ ಮಾರಕ ಬೌಲಿಂಗ್ ದಾಳಿ ಬಾರ್ಬಡೋಸ್ ಗೆಲುವಿಗೆ ಕಾರಣವಾಯ್ತು. ಇದು ಬಾರ್ಬಡೋಸ್ ಟ್ರೈಡೆಂಟ್ಸ್ಗೆ ಲಭಿಸುತ್ತಿರುವ 2ನೇ ಸಿಪಿಎಲ್ ಟ್ರೋಫಿ.
ಪ್ರೊ ಕಬಡ್ಡಿ ಲೀಗ್: ಕುತೂಹಲಕಾರಿ ಪ್ಲೇ ಆಫ್ ಪಂದ್ಯಗಳ ಮಾಹಿತಿ, ವೇಳಾಪಟ್ಟಿ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾರ್ಬಡೋಸ್ ಟ್ರೈಡೆಂಟ್ಸ್, ಜಾನ್ಸನ್ ಚಾರ್ಲ್ಸ್ 39, ಅಲೆಕ್ಸ್ ಹೇಲ್ಸ್ 28, ಶಕೀಬ್ ಅಲ್ ಹಸನ್ 15, ಜೋನಾಥನ್ ಕಾರ್ಟರ್ ಅಜೇಯ 50, ಆ್ಯಶ್ಲೆ ನರ್ಸ್ 19 ರನ್ ಸೇರ್ಪಡೆಯೊಂದಿಗೆ 20 ಓವರ್ಗೆ 6 ವಿಕೆಟ್ ನಷ್ಟದಲ್ಲಿ 171 ರನ್ ಮಾಡಿತು.
ಸಾಲು ಸಾಲು ದಾಖಲೆ ಬರೆದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ!
ಗುರಿ ಬೆನ್ನತ್ತಿದ ಗಯಾನಾ ಅಮೆಝಾನ್ ವಾರಿಯರ್ಸ್, ಬ್ರಂಡನ್ ಕಿಂಗ್ 43, ನಿಕೋಲಸ್ ಪೂರನ್ 24, ಶೆರ್ಫೇನ್ ರುದರ್ಫೋರ್ಡ್ 15, ಕೀಮೋ ಪೌಲ್ 25 ರನ್ನೊಂದಿಗೆ 20 ಓವರ್ಗೆ 9 ವಿಕೆಟ್ ಕಳೆದು 144 ರನ್ ಬಾರಿಸಲಷ್ಟೇ ಶಕ್ತವಾಯ್ತು. ರೇಮನ್ ರೀಫರ್ 4, ಹ್ಯಾರಿ ಗರ್ನಿ ಮತ್ತು ಆ್ಯಶ್ಲೆ ನರ್ಸ್ ತಲಾ 2 ವಿಕೆಟ್ ಪಡೆದರು. ಜೋನಾಥನ್ ಪಂದ್ಯಶ್ರೇಷ್ಠ, ಹೇಡನ್ ವಾಲ್ಷ್ ಸರಣಿಶ್ರೇಷ್ಠರೆನಿಸಿದರು.