ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಮಾಜಿ ನಾಯಕ ಅಜರುದ್ಧೀನ್ ವಿರುದ್ಧ ವಂಚನೆ ಪ್ರಕರಣ ದಾಖಲು

ವಂಚನೆ ಪ್ರಕರಣದಲ್ಲಿ ದಾಖಲಾಯ್ತು FIR | Azar | FIR | Oneindia Kannada
Case Filed Against Mohammed Azharuddin For Cheating Travel Agent

ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ಧೀನ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಔರಂಗಾಬಾದ್ ಮೂಲದ ಟ್ರಾವೆಲ್ ಏಜೆನ್ಸಿ ಕಂಪನಿಗೆ ವಂಚನೆಯನ್ನು ಎಸಗಲಾಗಿದ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮದ್ ಅಜರುದ್ಧೀನ್ ಸೇರಿದಂತೆ ಮೂವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ಡ್ಯಾನಿಶ್ ಟೂರ್ಸ್ ಮತ್ತು ಟ್ರಾವೆಲ್ಸ್‌ನ ಮಾಲೀಕ ಮೊಹಮದ್ ಶಹಾಬ್ ಎಂಬವರು ಈ ದೂರನ್ನು ನೀಡಿದ್ದು 20.96 ಲಕ್ಷ ರೂಪಾಯಿಯ ವಂಚನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಾರಾಷ್ಟ್ರದ ಔರಂಗಾಬಾದ್‌ನ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಹಮದ್ ಅಜರುದ್ಧೀನ್ ಪ್ರತಿಕ್ರಿಯಿಸಿದ್ದು ಈ ಆರೋಪ ಸುಳ್ಳು ಎಂದಿದ್ದಾರೆ. ಈ ಆರೋಪ ಅಸಂಬದ್ಧವಾಗಿದ್ದು ನನ್ನ ವಿರುದ್ಧ ಸುಳ್ಳು ಪ್ರಕರನವನ್ನು ದಾಖಲಿಸಲಾಗಿದೆ ಎಂದಿದ್ದಾರೆ. ಈ ಬಗ್ಗೆ ಕಾನೂನು ಹೋರಾಟವನ್ನು ಮಾಡುವುದಾಗಿಯೂ ಮೊಹಮ್ಮದ್ ಅಜರುದ್ಧೀನ್ ತಿಳಿಸಿದ್ದಾರೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಜರುದ್ಧೀನ್ ಹೇಳಿದ್ದಾರೆ.

ಅಜರುದ್ಧೀನ್ ಸಹಾಯಕ ಮುಜೀಬ್ ಖಾನ್ ಅವರ ಮನವಿ ಮಾಡಿ ಹಲವು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಸೀಟ್ ಕಾಯ್ದಿರಿಸಿದ್ದರು. ಅದರ ಮೌಲ್ಯ 20.96ಲಕ್ಷವಾಗಿದೆ. ಈ ವರೆಗೂ ಈ ಮೊತ್ತ ಪಾವತಿಯಾಗಿಲ್ಲ ಎಂದು ಶಹಾಬ್ ಆರೋಪವನ್ನು ಮಾಡಿದ್ದಾರೆ.

Story first published: Friday, January 24, 2020, 13:08 [IST]
Other articles published on Jan 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X