ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್‌ಗೆ ಟ್ರಿಪಲ್‌ ಎಚ್‌ ಅನಿರೀಕ್ಷಿತ ಗಿಫ್ಟ್‌!

Champions England receive unexpected gift from WWE COO Triple H

ಲಂಡನ್, ಜುಲೈ 19: ಐಸಿಸಿ ವಿಶ್ವಕಪ್ 2019ರ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ವಿರುವಿನೊಂದಿಗೆ ವಿಜೇತ ತಂಡವಾಗಿ ಮೂಡಿಬಂದ ಇಂಗ್ಲೆಂಡ್ ಚೊಚ್ಚಲ ಬಾರಿಗೆ ಟ್ರೋಫಿ ಜಯಿಸಿತ್ತು. ಜಿದ್ದಾಜಿದ್ದಿ ಪಂದ್ಯದಲ್ಲಿ ಟ್ರೋಫಿ ತನ್ನದಾಗಿಸಿಕೊಂಡ ಆತಿಥೇಯ ಇಂಗ್ಲೆಂಡ್‌ಗೆ ಡಬ್ಲ್ಯೂಡಬ್ಲ್ಯೂಇ ಮುಖ್ಯ ಕಾರ್ಯಾಚರಣಾಧಿಕಾರಿ (ಸಿಒಒ) ಟ್ರಿಪಲ್ ಎಚ್‌ ಅನಿರೀಕ್ಷಿತ ಗಿಫ್ಟ್ ರವಾನಿಸಿದ್ದಾರೆ.

ಸ್ಲೋ ಓವರ್‌ ರೇಟ್‌: ಇನ್ಮುಂದೆ ನಾಯಕನಿಗೆ ನಿಷೇಧ ಹೇರೋಹಾಗಿಲ್ಲ!ಸ್ಲೋ ಓವರ್‌ ರೇಟ್‌: ಇನ್ಮುಂದೆ ನಾಯಕನಿಗೆ ನಿಷೇಧ ಹೇರೋಹಾಗಿಲ್ಲ!

ಲಂಡನ್‌ನ ಲಾರ್ಡ್ಸ್‌ನಲ್ಲಿ ಭಾನುವಾರ (ಜುಲೈ 14) ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಸೂಪರ್ ಓವರ್‌ನಲ್ಲಿ ಮತ್ತೆ ಫಲಿತಾಂಶ ಟೈ ಎನಿಸಿತು. ಆದರೆ ಬೌಂಡರಿ ಸಂಖ್ಯೆಗಳ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು.

ಚೊಚ್ಚಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದ ಇಂಗ್ಲೆಂಡ್‌ಗೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ 14 ಬಾರಿಯ ವಿಶ್ವಚಾಂಪಿಯನ್ ಟ್ರಿಪಲ್ ಎಚ್ ಟ್ವಿಟರ್‌ನಲ್ಲಿ 'ಅತ್ಯದ್ಭುತ ಪಂದ್ಯಾಟದಲ್ಲಿ, ಸ್ಫೂರ್ತಿದಾಯಕ ಫೈನಲ್‌ನಲ್ಲಿ ಯೋಗ್ಯ ಚಾಂಪಿಯನ್‌ಗಳ ತಂಡ ಸೆಣಸಾಡಿದ್ದವು. ಇಂಗ್ಲೆಂಡ್ ತಂಡಕ್ಕೆ ಶುಭಾಶಯಗಳು. ಈ ಚಾಂಪಿಯನ್‌ಷಿಪ್‌ ಈಗ ನಿಮ್ಮದು' ಎಂದು ಚಾಂಪಿಯನ್‌ಷಿಪ್ ಬೆಲ್ಟಿನ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾದ ಭವಿಷ್ಯದ ಮೂವರು ಕೀಪರ್‌ಗಳ ಹೆಸರಿಸಿದ ಗಂಭೀರ್ಟೀಮ್ ಇಂಡಿಯಾದ ಭವಿಷ್ಯದ ಮೂವರು ಕೀಪರ್‌ಗಳ ಹೆಸರಿಸಿದ ಗಂಭೀರ್

ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್-ಇಂಗ್ಲೆಂಡ್ ಎರಡೂ ತಂಡಗಳೂ 241 ರನ್ ಬಾರಿಸಿ ಟೈ ಮಾಡಿಕೊಂಡಿದ್ದವು. ಸೂಪರ್‌ ಓವರ್‌ ಕೂಡ 15 ರನ್‌ಗಳಿಂದ ಸಮಬಲಗೊಂಡಿತ್ತು. ಹೀಗಾಗಿ ಬೌಂಡರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಯ್ತು. ಆಗ ಬೌಂಡರಿ ಸಂಖ್ಯೆಗಳು ಹೆಚ್ಚಿದ್ದ ಇಂಗ್ಲೆಂಡ್ ಗೆದ್ದಿತ್ತು.

Story first published: Friday, July 19, 2019, 19:41 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X