ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ Rankingನಲ್ಲಿ ಸ್ಮಿತ್ ಮೀರಿಸಲು ಕೊಹ್ಲಿಗಿದು ಸುವರ್ಣಾವಕಾಶ!

Chance for Virat Kohli to replace Steve Smith as No 1 Test batsman

ಬರ್ಮಿಂಗ್ ಹ್ಯಾಮ್, ಜುಲೈ 31: ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಮೀರಿಸಲು ಟೀಮ್ ಇಂಡಿಯಾ ನಾಯಕ ಕೊಹ್ಲಿಗಿದು ಸುವರ್ಣಾವಕಾಶ. ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ನಲ್ಲಿ ಬುಧವಾರ (ಆಗಸ್ಟ್ 1) ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಮಿತ್ ಮೀರಿಸಲು ಕೊಹ್ಲಿಗೆ ಅವಕಾಶವಿದೆ.

ಬ್ಯಾಟಿಂಗ್ ನಲ್ಲಿ ಕೊಹ್ಲಿಯನ್ನೇ ಮೀರಿಸಿದ್ದಾರೆ ಬೌಲರ್ ಭುವನೇಶ್ವರ್!ಬ್ಯಾಟಿಂಗ್ ನಲ್ಲಿ ಕೊಹ್ಲಿಯನ್ನೇ ಮೀರಿಸಿದ್ದಾರೆ ಬೌಲರ್ ಭುವನೇಶ್ವರ್!

ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು 12 ತಿಂಗಳ ನಿಷೇಧಕ್ಕೀಡಾಗಿರುವ ಸ್ಮಿತ್, ಸದ್ಯ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಕೊಹ್ಲಿಗಿಂತ 26 ಪಾಯಿಂಟ್ ಮುಂದಿದ್ದಾರೆ. ಸ್ಮಿತ್ ಒಟ್ಟು 929 ರೇಟಿಂಗ್ ಪಾಯಿಂಟ್ ನಿಂದ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 903 ಪಾಯಿಂಟ್ ನಿಂದ ದ್ವಿತೀಯ ಸ್ಥಾನದಲ್ಲಿದ್ದಾರೆ.

ವಿಶೇಷವೆಂದರೆ ಈಗಿನ ರ್ಯಾಂಕಿನಲ್ಲಿ ಇಂಗ್ಲೆಂಡ್ ಮತ್ತು ಭಾರತ ಎರಡೂ ತಂಡಗಳಲ್ಲಿ ತಲಾ ಐದೈದು ಮಂದಿ ಬ್ಯಾಟ್ಸ್ಮನ್ ಗಳು ಅಗ್ರ 50ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾಗಿ ಇಂಗ್ಲೆಂಡ್-ಭಾರತ ಎರಡೂ ಬಲಿಷ್ಟ ತಂಡಗಳೆ.

ಭಾರತದ ಚೇತೇಶ್ವರ್ ಪೂಜಾರ ಪ್ರಸ್ತುತ ಟೆಸ್ಟ್ ರ್ಯಾಂಕಿಂಗ್ ನಲ್ಲಿ 6ನೇ ಸ್ಥಾನದಲ್ಲಿದ್ದರೆ, ಲೋಕೇಶ್ ರಾಹುಲ್ 18ನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಮುರಳಿ ವಿಜಯ್ 23, ಶಿಖರ್ ಧವನ್ 24, ಇಂಗ್ಲೆಂಡ್ ನ ಜೋ ರೂಟ್ 3ನೇ ಸ್ಥಾನ (855 ಅಂಕ), ಅಲಸ್ಟೇರ್ ಕುಕ್ 13ನೇ, ಜಾನಿ ಬೇರ್ಸ್ಟೋವ್ 16ನೇ, ಬೆನ್ ಸ್ಟೋಕ್ಸ್ 28 ಮತ್ತು ಮೋಯೀನ್ ಆಲಿ 43ನೇ ಸ್ಥಾನದಲ್ಲಿದ್ದಾರೆ.

ಜೊತೆಗ ಇಂಗ್ಲೆಂಡ್ ಮತ್ತು ಭಾರತದ ಎರಡೂ ತಂಡಗಳ ಬೌಲರ್ ಗಳೂ ಇದೇ ಸರಣಿಯಲ್ಲಿ ತಮ್ಮ ತಮ್ಮ ರ್ಯಾಂಕಿಂಗ್ ಉತ್ತಮ ಪಡಿಸಿಕೊಳ್ಳುವತ್ತಲೂ ದೃಷ್ಟಿನಟ್ಟಿದ್ದಾರೆ. ಐಸಿಸಿ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ಜೇಮ್ಸ್ ಆ್ಯಂಡರ್ಸನ್ ಮತ್ತು 12ನೇ ಸ್ಥಾನದಲ್ಲಿರುವ ಸ್ಟುವರ್ಟ್ ಬ್ರಾಡ್ ಇದರಲ್ಲಿ ಪ್ರಮುಖರು.

ಭಾರತದ ಆರು ಬೌಲರ್ ಗಳು 30ರೊಳಗಿನ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷ. ರವೀಂದ್ರ ಜಡೇಜಾ 3ನೇ, ರವಿಚಂದ್ರನ್ ಅಶ್ವಿನ್ 5ನೇ, ಮೊಹಮ್ಮದ್ ಶಮಿ 17ನೇ, ಭುವನೇಶ್ವರ್ ಕುಮಾರ್ 25ನೇ, ಇಶಾಂತ್ ಶರ್ಮಾ 26ನೇ, ಉಮೇಶ್ ಯಾದವ್ 28ನೇ ಸ್ಥಾನದಲ್ಲಿದ್ದಾರೆ.

Story first published: Tuesday, July 31, 2018, 12:03 [IST]
Other articles published on Jul 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X