ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ವಿಜಯ್ ಹಝಾರೆ ನಡೆಯಲ್ಲ

Chances only for Ranji Trophy and Syed Mushtaq Ali T20 in this season

ನವದೆಹಲಿ, ಆಗಸ್ಟ್ 9: ಈ ಸೀಸನ್‌ನಲ್ಲಿ ಬರೀ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಮಾತ್ರ ಕಾಣ ಸಿಗಲಿದೆ. ಹಿರಿಯ ಆಟಗಾರರ ಮಟ್ಟದಲ್ಲಿ ನಡೆಯುವ ದೇಸಿ ಟೂರ್ನಿಗಳಲ್ಲಿ ಕೇವಲ ಇವೆರಡಷ್ಟೇ ನಡೆಯಲಿದೆ. ಕೊರೊನಾವೈರಸ್ ಕಾರಣ ಉಳಿದ ಪ್ರಮುಖ ದೇಸಿ ಟೂರ್ನಿಗಳು ನಡೆಯುತ್ತಿಲ್ಲ ಎನ್ನಲಾಗುತ್ತಿದೆ.

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳುಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

ಸಾಮಾನ್ಯವಾಗಿ ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ದೇಸೀ ಕ್ರಿಕೆಟ್ ಟೂರ್ನಿಗಳು ಆರಂಭವಾಗುತ್ತವೆ. ಆದರೆ ಈ ಬಾರಿ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾವೈರಸ್‌ನಿಂದಾಗಿ ಸೆಪ್ಟೆಂಬರ್‌ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಹೀಗಾಗಿ ದೇಸೀ ಕ್ರಿಕೆಟ್‌ ಟೂರ್ನಿಗಳನ್ನು ನಡೆಸಲು ತೊಂದರೆಯಾಗಿದೆ.

ಹಿಂದು ಅನ್ನೋ ಕಾರಣಕ್ಕೆ ಪಿಸಿಬಿ ನನ್ನನ್ನು ಮೂಲೆಗುಂಪು ಮಾಡುತ್ತಿದೆ: ಕನೇರಿಯಾಹಿಂದು ಅನ್ನೋ ಕಾರಣಕ್ಕೆ ಪಿಸಿಬಿ ನನ್ನನ್ನು ಮೂಲೆಗುಂಪು ಮಾಡುತ್ತಿದೆ: ಕನೇರಿಯಾ

ಎಂದಿನಂತೆ ಸೆಪ್ಟೆಂಬರ್‌ನಲ್ಲಿ ದೇಸೀ ಕ್ರಿಕೆಟ್‌ ಟೂರ್ನಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ, ಈ ಸೀಸನ್‌ನಲ್ಲಿ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳನ್ನು ಕೈ ಬಿಡಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಜೋಸ್ ಬಟ್ಲರ್-ಕ್ರಿಸ್ ವೋಕ್ಸ್ ಅರ್ಧಶತಕ, ಇಂಗ್ಲೆಂಡ್‌ಗೆ 3 ವಿಕೆಟ್ ಜಯಜೋಸ್ ಬಟ್ಲರ್-ಕ್ರಿಸ್ ವೋಕ್ಸ್ ಅರ್ಧಶತಕ, ಇಂಗ್ಲೆಂಡ್‌ಗೆ 3 ವಿಕೆಟ್ ಜಯ

ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ, ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ರೂಪಿಸಿರುವಂತೆ, ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ಅಂದರೆ ನವೆಂಬರ್ 19ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಮುಷ್ತಾಕ್ ಅಲಿ ಟ್ರೋಫಿ ಡಿಸೆಂಬರ್ 7ರಂದು ಕೊನೆಗೊಂಡರೆ ಡಿಸೆಂಬರ್ 13ರಿಂದ ರಣಜಿ ಟ್ರೋಫಿ ಶುರುವಾಗಲಿದೆ.

Story first published: Sunday, August 9, 2020, 9:41 [IST]
Other articles published on Aug 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X