ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅರುಣಾಂಚಲ ವಿರುದ್ಧ 10ಕ್ಕೆ 10 ವಿಕೆಟ್‌ ಉರುಳಿಸಿದ ಚಂಡೀಗಢ ಆಟಗಾರ್ತಿ

Chandigarhs Kashvee Gautam takes all 10 wickets against Arunachal Pradesh

ಆಂಧ್ರಪ್ರದೇಶ, ಫೆಬ್ರವರಿ 26: ಆಂಧ್ರಪ್ರದೇಶದ ಕಡಪಾದಲ್ಲಿ ನಡೆಯುತ್ತಿರುವ ಮಹಿಳಾ ಅಂಡರ್ 19 ಒನ್ ಡೇ ಟ್ರೋಫಿ ಟೂರ್ನಿಯಲ್ಲಿ ಚಂಡೀಗಢದ ಆಟಗಾರ್ತಿ ಕೇಶವೀ ಗೌತಮ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅರುಣಾಂಚಲ ವಿರುದ್ಧದ ಪಂದ್ಯದಲ್ಲಿ ಕೇಶವೀ ಎದುರಾಳಿ ತಂಡದ ಹತ್ತೂ ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದಾರೆ.

ಏಷ್ಯಾ XI vs ವಿಶ್ವ XI ಸರಣಿಗೆ ತಂಡಗಳು ಪ್ರಕಟ, 6 ಭಾರತೀಯರಿಗೆ ಸ್ಥಾನಏಷ್ಯಾ XI vs ವಿಶ್ವ XI ಸರಣಿಗೆ ತಂಡಗಳು ಪ್ರಕಟ, 6 ಭಾರತೀಯರಿಗೆ ಸ್ಥಾನ

ಮಂಗಳವಾರ (ಫೆಬ್ರವರಿ 25) ನಡೆದ ಪಂದ್ಯದಲ್ಲಿ ಅರುಣಾಂಚಲ ಮತ್ತು ಚಂಡೀಗಢ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮಧ್ಯಮ ವೇಗಿ ಕೇಶವೀ, ಅರುಣಾಂಚಲದ ಎಲ್ಲಾ ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಇದಕ್ಕೂ ಹಿಂದಿನ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧವೂ ಕೇಶವೀ 7 ವಿಕೆಟ್‌ ಮುರಿದು ಹುಬ್ಬೇರಿಸುವಂತೆ ಮಾಡಿದ್ದರು.

ಈಗಿನ್ನೂ 16ರ ಹರೆಯದವರಾಗಿರುವ ಕೇಶವೀ, ಚಂಡೀಗಢ 26ರ ವಲಯದಲ್ಲಿರುವ ಗೌರ್ನಮೆಂಟ್ ಸೀನಿಯರ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿನಿ. ಈಕೆಗೆ ತನ್ನ ಮಹಿಳಾ ಸಹ ಆಟಗಾರ್ತಿಯರಿಗೆ ಚೆಂಡೆಸೆಯೋದು ಅಷ್ಟು ಖುಷಿಕೊಡೋಲ್ಲವಂತೆ. ಆದರೆ ಹುಡುಗರಿಗೆ ಬೌಲಿಂಗ್‌ ಮಾಡಿ ವಿಕೆಟ್ ಪಡೆದಾಗ ಈಕೆಗೆ ಹೆಚ್ಚು ಖುಷಿಯಂತೆ.

ಬಾಂಗ್ಲಾದೇಶದ ಪರವಾಗಿ ಹೊಸ ಮೈಲಿಗಲ್ಲು ನೆಟ್ಟ ಮುಷ್ಫೀಕರ್ ರಹೀಮ್ಬಾಂಗ್ಲಾದೇಶದ ಪರವಾಗಿ ಹೊಸ ಮೈಲಿಗಲ್ಲು ನೆಟ್ಟ ಮುಷ್ಫೀಕರ್ ರಹೀಮ್

ಅಂದ್ಹಾಗೆ ಇದೇ ಪಂದ್ಯದಲ್ಲಿ ಕೇಶವೀ ಗೌತಮ್ ಹ್ಯಾಟ್ರಿಕ್ ವಿಕೆಟ್‌ ಸಾಧನೆ ಕೂಡ ಮೆರೆದಿದ್ದಾರೆ. ಫೆಬ್ರವರಿ 25ರಂದು ಮೊದಲು ಬ್ಯಾಟಿಂಗ್ ಮಾಡಿದ್ದ ಚಂಡೀಗಢ ತಂಡ 186 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಅರುಣಾಂಚಲ ಪ್ರದೇಶ ತಂಡ, ಕೇವಲ 25 ರನ್ನಿಗೆ ಸರ್ವಪತನ ಕಂಡು 161 ರನ್‌ನಿಂದ ಸೋತಿತು.

Story first published: Wednesday, February 26, 2020, 11:06 [IST]
Other articles published on Feb 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X