ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾ

Angelo Mathews 2019

ಕೊಲಂಬೊ, ಆಗಸ್ಟ್‌ 09: ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಆತಿಥೇಯ ಶ್ರೀಲಂಕಾ ತಂಡ ಶುಕ್ರವಾರ ತಂಡ ಪ್ರಕಟಿಸಿದ್ದು, ಅನುಭವಿ ಆಟಗಾರರಾದ ದಿನೇಶ್‌ ಚಾಂದಿಮಾಲ್‌ ಮತ್ತು ಏಂಜಲೊ ಮ್ಯಾಥ್ಯೂಸ್‌ಗೆ ಮರಳಿ ಅವಕಾಶ ನೀಡಿದೆ. ಪ್ರಥಮ ಟೆಸ್ಟ್‌ ಆಗಸ್ಟ್‌ 14ರಂದು ಗಾಲೆಯಲ್ಲಿ ಆರಂಭವಾಗಲಿದೆ.

ಮ್ಯಾಥ್ಯೂಸ್‌ ಮತ್ತು ಚಾಂದಿಮಾಲ್‌ ಹೊರತಾಗಿ ಅಖಿಲ ಧನಂಜಯ ಮತ್ತು ನಿರೋಶನ್‌ ಡಿಕ್ವೆಲ್ಲಾ ಕೂಡ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ಐಸಿಸಿಯ ಮಹತ್ವಾಕಾಂಕ್ಷೀಯ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಲಂಕಾ ಮತ್ತು ಕಿವೀಸ್‌ ತಂಡಗಳು ತಮ್ಮ ಅಭಿಯಾನ ಆರಂಭಿಸಲು ಸಜ್ಜಾಗಿವೆ.

ಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾ

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ನೀಡಿದ್ದ ಕಳಾಹೀನ ಪ್ರದರ್ಶನ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದಿಂದ ಸ್ಥಾನ ಕಳೆದುಕೊಂಡು ಕಳೆದ ಆರು ತಿಂಗಳಿಂದ ಹೊರಗುಳಿದಿದ್ದ ಚಾಂದಿಮಾಲ್‌ ಇದೀಗ ಮರಳಿ ಅವಕಾಶ ಪಡೆದಿದ್ದಾರೆ. ಮತ್ತೊಂದೆಡೆ ತೊಡೆ ಭಾಗದ ಸ್ನಾಯು ಸೆಳೆತದ ಸಮಸ್ಯೆ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದ ಮ್ಯಾಥ್ಯೂಸ್‌ ಇದೀಗ ಸಂಪೂರ್ಣ ಫಿಟ್ನೆಸ್‌ನೊಂದಿಗೆ ತಂಡ ಸೇರಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ದಿಮುತ್‌ ಕರುಣಾರತ್ನೆ ಸಾರಥ್ಯದ ಶ್ರೀಲಂಕಾ ತಂಡ ಟೆಸ್ಟ್‌ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.

ಗ್ಲೋಬಲ್‌ ಟಿ20ಯಲ್ಲಿ ಯುವರಾಜ್‌ ಸಿಂಗ್‌ರ ಪಂದ್ಯ ತಡವಾಗಿ ಶುರುವಾಗಿದ್ದೇಕೆ?ಗ್ಲೋಬಲ್‌ ಟಿ20ಯಲ್ಲಿ ಯುವರಾಜ್‌ ಸಿಂಗ್‌ರ ಪಂದ್ಯ ತಡವಾಗಿ ಶುರುವಾಗಿದ್ದೇಕೆ?

ಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ ಸಲುವಾಗಿ ಶ್ರೀಲಂಕಾ ಕಳೆದ ಬುಧವಾರ 22 ಆಟಗಾರರ ಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ ಅಂತಿಮ 15 ಆಟಗಾರರನ್ನು ಹೆಸರಿಸಿದ್ದು, ಕಸುನ್‌ ರಜಿತ, ಅಸಿತಾ ಫರ್ನಾಂಡೊ, ಧನುಷ್ಕಾ ಗುಣತಿಲಕ, ಶೆಹಾನ್‌ ಜಯಸೂರ್ಯ, ಚಾಮಿಕಾ ಕರುಣಾರತ್ನೆ, ದಿಲ್ರುವನ್‌ ಪೆರೆರಾ ಮತ್ತು ಏಂಜಲೊ ಪೆರೆರಾ ಅವರನ್ನು ಕೈಬಿಟ್ಟಿದೆ.

ಸಂಗೀತಾ ಫೋಗಾಟ್‌ರನ್ನು ವರಿಸಲಿದ್ದಾರಂತೆ ಕುಸ್ತಿಪಟು ಬಜರಂಗ್‌ ಪೂನಿಯಾ

ಪ್ರಥಮ ಟೆಸ್ಟ್‌ ಪಂದ್ಯಕ್ಕೆ ಶ್ರೀಲಂಕಾ ತಂಡ ಇಂತಿದೆ

ದಿಮುತ್‌ ಕರುಣಾರತ್ನೆ (ನಾಯಕ) ಏಂಜಲೊ ಮ್ಯಾಥ್ಯೂಸ್‌, ದಿನೇಶ್‌ ಚಾಂದಿಮಾಲ್‌, ಲಾಹಿರು ತಿರಿಮನ್ನೆ, ಕುಶಲ್‌ ಮೆಂಡಿಸ್‌, ಕುಶಲ್‌ ಪೆರೆರಾ, ನಿರೋಶನ್‌ ಡಿಕ್ವೆಲ್ಲಾ, ಧನಂಜಯ ಡಿ'ಸಿಲ್ವಾ, ಅಖಿಲ ಧನಂಜಯ, ಎಲ್‌. ಎಂಬುಲ್ದೆನಿಯಾ, ಸುರಂಗ ಲಕ್ಮಲ್‌, ಲಾಹಿರು ಕುಮಾರ, ಒಶಾದ ಫರ್ನಾಂಡೊ, ಲಕ್ಷಣ್‌ ಸಂದಕನ್‌, ವಿಶ್ವ ಫರ್ನಾಂಡೊ.

Story first published: Friday, August 9, 2019, 16:05 [IST]
Other articles published on Aug 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X