ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್ ಪಂದ್ಯದ ಬಗ್ಗೆ ಆಸಕ್ತಿಕರ ಹೇಳಿಕೆ ನೀಡಿದ ವಿಲಿಯಮ್ಸನ್

Changing diapers and Watching Australia vs India, says Kane Williamson

ವೆಲ್ಲಿಂಗ್ಟನ್: ಪ್ರಸ್ತುತ ವಿಶ್ವದ ಶ್ರೇಷ್ಠ ಕ್ರಿಕೆಟಿಗರೆಂದರೆ ಅದು ಭಾರತದ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಟೆಸ್ಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್. ಇದರಲ್ಲಿ ಕೊಹ್ಲಿ ಸದ್ಯ ಪಿತೃತ್ವ ರಜೆ ಪಡೆದುಕೊಂಡಿದ್ದಾರೆ ಮತ್ತು ವಿಲಿಯಮ್ಸನ್ ಚೊಚ್ಚಲ (ಹೆಣ್ಣು) ಮಗುವಿಗೆ ತಂದೆಯಾಗಿದ್ದಾರೆ.

ಭಾರತದ ದೊಡ್ಡ ಶಕ್ತಿ ಏನೆಂದು ತಿಳಿಸಿದ ಆಸೀಸ್ ಕೋಚ್ ಲ್ಯಾಂಗರ್!ಭಾರತದ ದೊಡ್ಡ ಶಕ್ತಿ ಏನೆಂದು ತಿಳಿಸಿದ ಆಸೀಸ್ ಕೋಚ್ ಲ್ಯಾಂಗರ್!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆರಂಭಿಕ ಟೆಸ್ಟ್‌ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪಿತೃತ್ವದ ರಜೆ ಪಡೆದುಕೊಂಡಿದ್ದರು. ಇತ್ತ ಕೇನ್ ವಿಲಿಯಮ್ಸನ್, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ವೇಳೆ ರಜೆ ಪಡೆದುಕೊಂಡಿದ್ದಾರೆ. ಸದ್ಯ ಕೊಹ್ಲಿ ಮತ್ತು ವಿಲಿಯಮ್ಸನ್ ಇಬ್ಬರೂ ತಮ್ಮ ಕುಟುಂಬದ ಜೊತೆಗಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಕುತೂಹಲಕಾರಿ ಟೆಸ್ಟ್ ಸರಣಿ ನಡೆಯುತ್ತಿದೆ. ಕೇನ್ ವಿಲಿಯಮ್ಸನ್‌ಗೆ ಪಂದ್ಯ ವೀಕ್ಷಿಸಲು ಆಸೆಯಿದ್ದರೂ ಸಂಪೂರ್ಣವಾಗಿ ಪಂದ್ಯಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮಗುವಿನ ಪೋಷಣೆಯ ನಡುವೆ ಭಾರತ-ಆಸ್ಟ್ರೇಲಿಯಾ ಸರಣಿ ತಾನು ಹೇಗೆ ನೋಡುತ್ತಿದ್ದೇನೆ ಎಂದು ವಿಲಿಯಮ್ಸನ್ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ವಿಂಡೀಸ್ ಬೌಲಿಂಗ್ ದಿಗ್ಗಜ ಕಾರ್ಟ್ಲ್ಲಿ ಆಂಬ್ರೋಸ್: ವರದಿಇಂಗ್ಲೆಂಡ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ವಿಂಡೀಸ್ ಬೌಲಿಂಗ್ ದಿಗ್ಗಜ ಕಾರ್ಟ್ಲ್ಲಿ ಆಂಬ್ರೋಸ್: ವರದಿ

'ಭಾರತ-ಆಸ್ಟ್ರೇಲಿಯಾ ಸರಣಿಯ ಕೆಲ ಪಂದ್ಯಗಳನ್ನು ನಾನು ವೀಕ್ಷಿಸಿದ್ದೇನೆ. ಮಗುವಿಗೆ (ಬಾಟಲಿ) ಹಾಲು ಕುಡಿಸುವಾಗ, ಮಗುವಿನ ಗಲೀಜಾದ ಬಟ್ಟೆ ಬದಲಾಯಿಸುವಾಗ ಒಂದಿಷ್ಟು ಪಂದ್ಯ ನೋಡಿದ್ದೇನೆ. ಅದು ವೀಕ್ಷಿಸಲೇಬೇಕಾದ ಮುಖ್ಯ ಪಂದ್ಯವಾಗಿತ್ತು. ಆದರೆ ನನಗೆ ಸಂಪೂರ್ಣ ಪಂದ್ಯ ನೋಡಲಾಗಲಿಲ್ಲ,' ಎಂದು ವಿಲಿಯಮ್ಸನ್ ಹೇಳಿದ್ದಾರೆ.

Story first published: Thursday, January 7, 2021, 10:01 [IST]
Other articles published on Jan 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X