ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಾಹಿರ್ ಚಿಕ್ಕಮಗಳೂರಿಗೆ ಬಂದ್ಯಾನ: ತರ್ಲೆಗಳಿಗೆ ತಗಲಾಕ್ಕೊಂಡ ಬೌಲರ್!

Chennai Super Kings bowler Imran Tahir trolled in Social Media

ಕೋಲ್ಕತ್ತಾ, ಏಪ್ರಿಲ್ 15: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮ್ಯಾಚ್ ಇದ್ದರೆ ಮೈದಾನದಲ್ಲಿ ಎಂಎಸ್ ಧೋನಿ, ಡ್ವೇನ್ ಬ್ರಾವೋ, ಸುರೇಶ್ ರೈನಾ ಮೊದಲಾದವರು ಪ್ರಮುಖಾಕರ್ಷಣೆಯಾಗಿ ಕಾಣೋದು ಇದ್ದೇ ಇದೆ. ಆದರೆ ಇತ್ತೀಚೆಗೆ ಮತ್ತೊಬ್ಬರು ಗಮನ ಸೆಳೆಯುತ್ತಿದ್ದಾರೆ; ಅದು ಇಮ್ರಾನ್ ತಾಹಿರ್.

ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲರ್ ಇಮ್ರಾನ್ ತಾಹಿರ್‌ಗೆ ಈಗ 40ರ ಹರೆಯ. ಆದರೆ ಅವರ ಬೌಲಿಂಗ್ ಮತ್ತು ಪಂದ್ಯದ ವೇಳೆಯಲ್ಲಿನ ಜೋಶ್ ನೋಡಿದವರಿಗೆ ವಯಸ್ಸು ಬರೀ ಸಂಖ್ಯೆ ಮಾತ್ರ ಅನ್ನಿಸೋದಿದೆ. ಈ ಸಾರಿ ಚೆನ್ನೈ ಪರ ಆಡಿರುವ ಹೆಚ್ಚಿನ ಪಂದ್ಯಗಳಲ್ಲಿ ತಾಹಿರ್ ಉತ್ತಮ ಬೌಲಿಂಗ್ ಪ್ರದರ್ಶಿಸಿರುವುದೂ ಇದಕ್ಕೆ ನಿದರ್ಶನ.

ಧೋನಿ, ಗಂಗೂಲಿ, ಕೊಹ್ಲಿ ಇವರಲ್ಲಿ ಸೆಹ್ವಾಗ್ ನೆಚ್ಚಿನ ನಾಯಕ ಇವರಂತೆ!ಧೋನಿ, ಗಂಗೂಲಿ, ಕೊಹ್ಲಿ ಇವರಲ್ಲಿ ಸೆಹ್ವಾಗ್ ನೆಚ್ಚಿನ ನಾಯಕ ಇವರಂತೆ!

ಇವೆಲ್ಲದಕ್ಕಿಂತ ಹೆಚ್ಚಾಗಿ ವಿಕೆಟ್ ಲಭಿಸಿದಾಗ ತಾಹೀರ್ ಸಂಭ್ರಮಿಸುವ ಪರಿಯಿದೆಯಲ್ಲ? ಅದು ಕಂಡವರನ್ನು ನಗಿಸಿಬಿಡುತ್ತದೆ. ವಿಕೆಟ್ ಉರುಳುತ್ತಲೇ ಮೈದಾನದ ಆ ತುದಿಯಿಂದ ಈ ತುದಿವರೆಗೆ ಓಡಾಡಿ ಕುಣಿದಾಡುವ ತಾಹಿರ್ ಸಂಭ್ರಮ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್‌ಗಳಿಗೆ ತುತ್ತಾಗಿದೆ.

ಒಂದು ರೌಂಡು ನಕ್ಕ ಬರೋಣ ಬನ್ನಿ

ಒಂದು ರೌಂಡು ನಕ್ಕ ಬರೋಣ ಬನ್ನಿ

ವಿಕೆಟ್ ಲಭಿಸಿದಾಗ ತಾಹಿರ್ ಸಂಭ್ರಮಿಸುವುದನ್ನು ಸಾಮಾಜಿಕ ಜಾಲತಾಣಿಗರು ಟ್ರೋಲ್ ಮಾಡಿದ್ದಾರೆ. ಅಂದ್ಹಾಗೆ ಇದು ಪ್ರತಿಭಾನ್ವಿತ ಬೌಲರ್‌ ತಾಹಿರ್‌ಗೆ ಜಾಲತಾಣಿಗರು ಮಾಡುತ್ತಿರುವ ವ್ಯಂಗ್ಯ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ನಗಲು ಇದೊಂದು ಚಂದದ ನೆಪವಷ್ಟೇ. ತಾಹಿರ್ ಸಾಧನೆಗಳನ್ನು ಮೆಲಕು ಹಾಕುತ್ತಾ ಹಾಗೇ ಒಂದು ರೌಂಡು ನಕ್ಕು ಬರೋಣ ಬನ್ನಿ (ಗಮನಿಸಿ: ಇಲ್ಲಿ ಸ್ಲೈಡ್‌ನಲ್ಲಿರೋ ಚಿತ್ರವನ್ನು ಮತ್ತೆ ಕೆಳಗೆ ಸಾಲುಗಳಲ್ಲಿ ವಿವರಿಸುವ ಗೋಜಿಗೆ ಹೋಗಿಲ್ಲ, ಬದಲಿಗೆ ಚಿತ್ರ ಕೆಳಗೆ ತಾಹಿರ್ ಸಾಧನೆಯ ಅಂಕಿ-ಅಂಶಗಳಿವೆ).

ಜನಿಸಿದ್ದು ಪಾಕಿಸ್ತಾನದಲ್ಲಿ

ಜನಿಸಿದ್ದು ಪಾಕಿಸ್ತಾನದಲ್ಲಿ

ಚೆನ್ನೈ ಪರ ವಿಕೆಟ್ ಲಭಿಸಿದಾಗ ಮೈದಾನದುದ್ದಕ್ಕೂ ಓಡಾಡಿ ಟ್ರೋಲ್‌ಗೀಡಾಗಿದ್ದಾರಲ್ಲ? ಈ ತಾಹಿರ್ ಜನಿಸಿದ್ದು ಪಾಕಿಸ್ಥಾನದಲ್ಲಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸುತ್ತಿದ್ದಾರೆ. ಬರೀ ಪ್ರತಿನಿಧಿಸುತ್ತಿರೋದಷ್ಟೇ ಅಲ್ಲ, ಆಫ್ರಿಕಾ ತಂಡದಲ್ಲಿ ಅಪಾಯಕಾರಿ ಬೌಲರ್‌ಗಳ ಸಾಲಿನಲ್ಲೂ ತಾಹಿರ್ ಗುರುತಿಸಿಕೊಂಡಿದ್ದಾರೆ.

ಮಾರಕ ಬೌಲರ್ ತಾಹಿರ್

ಮಾರಕ ಬೌಲರ್ ತಾಹಿರ್

ದಕ್ಷಿಣ ಆಫ್ರಿಕಾ ಪರ ಕೇವಲ 20 ಟೆಸ್ಟ್ ಪಂದ್ಯಗಳನ್ನಾಡಿರುವ ತಾಹಿರ್ 57 ವಿಕೆಟ್ ಪಡೆದಿದ್ದಾರೆ. ಇನ್ನು 98 ಏಕದಿನ ಇನ್ನಿಂಗ್ಸ್‌ಗಳಲ್ಲಿ 162 ವಿಕೆಟ್, 38 ಅಂತಾರಾಷ್ಟ್ರೀಯ ಟಿ20ಗಳಲ್ಲಿ 6.73 ಎಕಾನಮಿಯಂತೆ 63 ವಿಕೆಟ್ ಉರುಳಿಸಿದ್ದಾರೆ.

ನಗುವಿಗೆ ನೆಪವಾದ ಬೌಲರ್

ನಗುವಿಗೆ ನೆಪವಾದ ಬೌಲರ್

ಕ್ರಿಕೆಟ್ ಪಂದ್ಯಾಟಗಳ ವೇಳೆ ವಿಕೆಟ್ ಲಭಿಸಿದಾಗ ಮೈದಾನದ ತುಂಬೆಲ್ಲ ಓಡಾಡಿ ಸಂಭ್ರಮಿಸುವ ಇಮ್ರಾನ್ ತಾಹಿರ್ ಇತರ ಆಟಗಾರರೊಂದಿಗೆ ಅಷ್ಟೇ ಆತ್ಮೀಯವಾಗಿ ಬೆರೆಯುವ ಪ್ರೀತಿಯ ಆಟಗಾರ. ಆದರೂ ತಾಹಿರ್ ಈ ಸಂಭ್ರಮದ ಓಡಾಟವನ್ನು ಉತ್ತರ ಕರ್ನಾಟಕ ಮಂದಿ ಫೇಸ್ಬುಕ್ ಪೇಜ್ ತಮಾಷೆಯ ವಸ್ತುವನ್ನಾಗಿ ಎತ್ತಿಕೊಂಡು ನಗಿಸುವ ಪ್ರಯತ್ನ ಮಾಡಿದೆ.

ಗೇಮ್ ಚೇಂಜರ್ ಆಗಿ ಮಿಂಚಿದ ಇಮ್ರಾನ್

ಗೇಮ್ ಚೇಂಜರ್ ಆಗಿ ಮಿಂಚಿದ ಇಮ್ರಾನ್

ಭಾನುವಾರ (ಏಪ್ರಿಲ್ 14) ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಕೆಕೆಆರ್-ಸಿಎಸ್‌ಕೆ ಪಂದ್ಯದಲ್ಲಿ ತಾಹಿರ್ 4 ಓವರ್‌ ಎಸೆದು 27 ರನ್‌ ನೀಡಿ ಕೆಕೆಆರ್ 4 ವಿಕೆಟ್‌ಗಳನ್ನು ಕೆಡವಿದ್ದರು. ತಾಹಿರ್ ಬೌಲಿಂಗ್ ಬೆಂಬಲ ಚೆನ್ನೈಗೆ ಈ ಪಂದ್ಯದಲ್ಲಿ 5 ವಿಕೆಟ್ ಜಯ ಸಾಧಿಸಲು ನೆರವಾಗಿದ್ದು ಸುಳ್ಳಲ್ಲ. ಪಂದ್ಯದಲ್ಲಿ ತಾಹಿರ್ ಗೇಮ್ ಚೇಂಜರ್ ಮತ್ತು ಪಂದ್ಯಶ್ರೇಷ್ಠ ಎರಡೂ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.

ನಿಜಕ್ಕೂ ಪ್ರತಿಭಾನ್ವಿತ ಬೌಲರ್

ನಿಜಕ್ಕೂ ಪ್ರತಿಭಾನ್ವಿತ ಬೌಲರ್

ಮೊದಲೇ ಹೇಳಿದಂತೆ ತಾಹಿರ್ ನಾವೆಲ್ಲ ನಗಲು ಚಂದದ ನೆಪವಾಗಿದ್ದಾರೆ ಎಂಬುದನ್ನಷ್ಟೇ ಬಿಟ್ಟರೆ ಇಮ್ರಾನ್ ನಿಜಕ್ಕೂ ಪ್ರತಿಭಾನ್ವಿತ ಬೌಲರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಗಮ್ಮತ್ತಿನ ವಿಚಾರವೆಂದರೆ ನಾವಿಂದು ನೋಡಿ ನಗುತ್ತಿರುವ ಇದೇ ತಾಹಿರ್ ಸದ್ಯಕ್ಕೆ ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ಗಾಗಿ ಮೊದಲ ಸ್ಥಾನವನ್ನು ಕಾಗಿಸೋ ರಬಾಡಾ ಜೊತೆ ಹಂಚಿಕೊಂಡಿದ್ದಾರೆ!

ಅತ್ಯಧಿಕ ವಿಕೆಟ್‌ಗಾಗಿ ಮೊದಲ ಸ್ಥಾನ

ಅತ್ಯಧಿಕ ವಿಕೆಟ್‌ಗಾಗಿ ಮೊದಲ ಸ್ಥಾನ

2019ರ ಐಪಿಎಲ್ ನಲ್ಲಿ ಸದ್ಯಕ್ಕೆ (14 ಏಪ್ರಿಲ್ 19ರ ವರೆಗಿನ ಪಂದ್ಯಗಳನ್ನು ಪರಿಗಣಿಸಿದರೆ) ಚೆನ್ನೈ ಸೂಪರ್‌ ಕಿಂಗ್ಸ್‌ನ ಇಮ್ರಾನ್ ತಾಹಿರ್ ಮತ್ತು ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಕಾಗಿಸೋ ರಬಾಡಾ ಇಬ್ಬರೂ ಮೊದಲ ಸ್ಥಾನದಲ್ಲಿದ್ದಾರೆ. ಇಬ್ಬರೂ ತಲಾ 13 ವಿಕೆಟ್‌ ಸಾಧನೆ ಹೊಂದಿದ್ದಾರೆ. ತಾಹಿರ್ 8 ಪಂದ್ಯಗಳಲ್ಲಿ ಈ ಸಾಧನೆ ಮೆರೆದಿದ್ದರೆ, ರಬಾಡಾ 7 ಪಂದ್ಯಗಳಲ್ಲಿ ಈ ಸಾಧನೆ ತೋರಿದ್ದಾರೆ.

Story first published: Monday, April 15, 2019, 1:36 [IST]
Other articles published on Apr 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X