ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಎದುರು ಚೆನ್ನೈಗೆ ಸೋಲು, ಧೋನಿ ಆಡದಿದ್ರೆ ಸೋಲು ಮಾಮೂಲು?!

ಧೋನಿ ಇರೋವರೆಗೂ ಮಾತ್ರ ಚೆನೈ ಹವಾ..! ಇಲ್ಲಾ ಅಂದ್ರೆ..? | Oneindia Kannada
Chennai vs Mumbai, 44th Match - Live Cricket Score

ಚೆನ್ನೈ, ಏಪ್ರಿಲ್ 26: ನಾಯಕ ಎಂಎಸ್ ಧೋನಿ ಆಡದ ಪಂದ್ಯದಲ್ಲಿ ಸೋಲು ಮಾಮೂಲು ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಸಾರಿ ಹೇಳಿದೆ. ಚೆನ್ನೈಯ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 26) ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ಎದುರು 46 ರನ್ ಸೋಲನುಭವಿಸಿದೆ. ಇದೇ ಐಪಿಎಲ್‌ನಲ್ಲಿ ಧೋನಿ ಇಲ್ಲದೆ ಸಿಎಸ್‌ಕೆ ಅನುಭವಿಸಿದ ಎರಡನೇ ಸೋಲಿದು.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್‌ಗೆ ಕ್ವಿಂಟನ್ ಡಿ ಕಾಕ್ 15, ಎವಿನ್ ಲೆವಿಸ್ 32, ರೋಹಿತ್ ಶರ್ಮಾ 67 (48 ಎಸೆತ), ಹಾರ್ದಿಕ್ ಪಾಂಡ್ಯ 23 ರನ್ ಸೇರಿಸಿದರು. ಎಂಐ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತು.

ಪಂದ್ಯದ Live Score ಕೆಳಗಿದೆ

1
45920

ಗುರಿ ಬೆನ್ನತ್ತಿದ ಚೆನ್ನೈ ತಂಡ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಳ್ಳಲಾರಂಭಿಸಿತು. ಶೇನ್ ವ್ಯಾಟ್ಸನ್ 8, ಸುರೇಶ್ ರೈನಾ 2, ಅಂಬಾಟಿ ರಾಯುಡು 0, ಕೇದಾರ್ ಜಾಧವ್ 6 ಹೀಗೆ ಸಿಎಸ್‌ಕೆ ಸಾಲಾಗಿ ವಿಕೆಟ್ ಒಪ್ಪಿಸಿತು. ತಂಡದ ಪರ ಕೊಂಚ ಕೊಸರಾಡಿದವರೆಂದರೆ ಮುರಳಿ ವಿಜಯ್, ಡ್ವೇನ್ ಬ್ರಾವೋ ಮತ್ತು ಮಿಚೆಲ್ ಸ್ಯಾಂಟ್ನರ್ ಮಾತ್ರ.

ಕ್ರಿಕೆಟ್‌: ಸುಂದರಂ ರವಿ ವಿಶ್ವಕಪ್‌ನಲ್ಲಿ ಭಾರತದ ಏಕೈಕ ಅಂಪೈರ್‌ಕ್ರಿಕೆಟ್‌: ಸುಂದರಂ ರವಿ ವಿಶ್ವಕಪ್‌ನಲ್ಲಿ ಭಾರತದ ಏಕೈಕ ಅಂಪೈರ್‌

ವಿಜಯ್ 38, ಬ್ರಾವೋ 20, ಸ್ಯಾಂಟ್ನರ್ 22 ರನ್‌ ಸೇರಿಸಿದ್ದರಿಂದ ಚೆನ್ನೈ 17.4 ಓವರ್‌ಗೆ ಸರ್ವ ಪತನ ಕಂಡು 109 ರನ್ ಪೇರಿಸಲಷ್ಟೇ ಶಕ್ತವಾಯ್ತು. ಸಿಎಸ್‌ಕೆ ಇನ್ನಿಂಗ್ಸ್‌ ವೇಳೆ ಲಸಿತ್ ಮಾಲಿಂಗ 37 ರನ್‌ಗೆ 4, ಕೃನಾಲ್ ಪಾಂಡ್ಯ 7 ರನ್‌ಗೆ 2 ಮತ್ತು ಜಸ್‌ಪ್ರೀತ್ ಬೂಮ್ರಾ 10 ರನ್‌ಗೆ 2 ವಿಕೆಟ್ ಪಡೆದು ಎದುರಾಳಿಯನ್ನು ಕಾಡಿದರು.

ಈ ಸೀಸನ್‌ನಲ್ಲಿ ಡೆಲ್ಲಿಯ ಉತ್ತಮ ಪ್ರದರ್ಶನಕ್ಕೆ ಕಾರಣ ಹೇಳಿದ ಪಾಂಟಿಂಗ್ಈ ಸೀಸನ್‌ನಲ್ಲಿ ಡೆಲ್ಲಿಯ ಉತ್ತಮ ಪ್ರದರ್ಶನಕ್ಕೆ ಕಾರಣ ಹೇಳಿದ ಪಾಂಟಿಂಗ್

ಜ್ವರದ ಕಾರಣ ಸಿಎಸ್‌ಕೆ ಎಂದಿನ ನಾಯಕ ಧೋನಿ ಈ ಪಂದ್ಯದಲ್ಲಿ ಆಡಿರಲಿಲ್ಲ. ಸುರೇಶ್ ರೈನಾ ತಂಡದ ನಾಯಕತ್ವ ವಹಿಸಿದ್ದರು. ವಿಶೇಷವೆಂದರೆ ಈ ಪಂದ್ಯದಲ್ಲೂ ಸಿಎಸ್‌ಕೆ ಸುಲಭವಾಗಿ ಶರಣಾಗಿದೆ. ಕಾಕತಾಳೀಯವೆಂಬಂತೆ ಹಿಂದೆ ಹೈದರಾಬಾದ್ ವಿರುದ್ಧವೂ ಧೋನಿ ಅನುಪಸ್ಥಿತಿಯಲ್ಲಿ ಚೆನ್ನೈ ಸೋತಿತ್ತು.

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಕಂಚಿಗೆ ವಿನೇಶ್‌ ಫೋಗಾಟ್‌ ತೃಪ್ತಿಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಕಂಚಿಗೆ ವಿನೇಶ್‌ ಫೋಗಾಟ್‌ ತೃಪ್ತಿ

ಮುಂಬೈ ಇಂಡಿಯನ್ಸ್ ತಂಡ: ಕ್ವಿಂಟನ್ ಡಿ ಕಾಕ್ (ಸಿ), ಎವಿನ್ ಲೆವಿಸ್, ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಅನುಕೂಲ್ ರಾಯ್, ರಾಹುಲ್ ಚಾಹರ್, ಲಸಿತ್ ಮಾಲಿಂಗ, ಜಸ್‌ಪ್ರೀತ್‌ ಬೂಮ್ರಾ.

ಚೆನ್ನೈ ಸೂಪರ್‌ ಕಿಂಗ್ಸ್ ತಂಡ: ಶೇನ್ ವ್ಯಾಟ್ಸನ್, ಮುರಳಿ ವಿಜಯ್, ಸುರೇಶ್ ರೈನಾ (ಸಿ), ಅಂಬಾಟಿ ರಾಯುಡು (ವಿಕೆ), ಧ್ರವ್ ಶೋರೆ, ಕೇದಾರ್ ಜಾಧವ್, ಡ್ವೇಯ್ನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.

Story first published: Friday, April 26, 2019, 23:53 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X