ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆಸ್‌ ಒಲಿಂಪಿಯಾಡ್ 2022: ಚೆನ್ನೈನಲ್ಲಿ ಸಾಗರದೊಳಗೆ ಚೆಸ್‌ ಆಡಿದ 'ತಂಬಿ'

Under water chess

ಚೆನ್ನೈ ಮಹಾಬಲಿಪುರಂನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್‌ ಸ್ಪರ್ಧೆಯು ಬಹು ಯಶಸ್ವಿಯಾಗಿ ನಡೆಯುತ್ತಿದೆ. ಜುಲೈ 28ರಿಂದ ಪ್ರಾರಂಭಗೊಂಡಿರುವ ಒಲಿಂಪಿಯಾಡ್ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ. ಮಾಮಲ್ಲಪುರಂನ ಪೂಂಜೇರಿ ಗ್ರಾಮದಲ್ಲಿ ನಡೆಯುತ್ತಿರುವ ಒಲಿಂಪಿಯಾಡ್‌ ಪ್ರಚಾರಕ್ಕೆ ತಮಿಳುನಾಡು ಸರ್ಕಾರ ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದೆ.

ತಮಿಳುನಾಡಿನ ಪೆರಂಪುರದ ಖಾಸಗಿ ಶಾಲೆಯ ವಿದ್ಯಾರ್ಥಿಗಳು 6400 ಚದರ ಅಡಿಯ ಬೃಹತ್ ಚೆಸ್ ಬೋರ್ಡ್ ಸಿದ್ಧಪಡಿಸಿದ್ದರು. 32 ವಿದ್ಯಾರ್ಥಿಗಳು ಚದುರಂಗದ ವೇಷ ಧರಿಸಿ ಆಕರ್ಷಕರಾಗಿದ್ದರು. ಇದಲ್ಲದೆ ಆರು ಅಡಿ ಅಗಲದ ಮ್ಯಾಸ್ಕಾಟ್ ತಂಬಿಯ ಕಟೌಟ್ ಅನ್ನು ಸಹ ಸಿದ್ಧಪಡಿಸಿದರು. ಮ್ಯಾಸ್ಕಾಟ್ ತಂಬಿ ಎಂಬ ಕುದುರೆಯ ರೂಪದಲ್ಲಿರುವ ಬೊಂಬೆಗಳು, ಚೆನ್ನೈನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸ್ವಾಗತಿಸುವುದನ್ನು ಕಾಣಬಹುದು. ನೇಪಿಯರ್ ಸೇತುವೆಯನ್ನು ಚೆಸ್ ಬೋರ್ಡ್‌ನಂತೆ ಕಪ್ಪು ಮತ್ತು ಬಿಳಿ ಬಣ್ಣ ಬಳಿಯಲಾಗಿದೆ.

Commonwealth Games Day 4 Live: ಮೂರು ವಿಭಾಗಗಳಲ್ಲಿ ಭಾರತ ಪದಕ ಗೆಲ್ಲುವುದು ಬಹುತೇಕ ಖಚಿತCommonwealth Games Day 4 Live: ಮೂರು ವಿಭಾಗಗಳಲ್ಲಿ ಭಾರತ ಪದಕ ಗೆಲ್ಲುವುದು ಬಹುತೇಕ ಖಚಿತ

ಇದರ ಜೊತೆಗ ಭರ್ಜರಿ ಉದ್ಘಾಟನಾ ಸಮಾರಂಭದೊಂದಿಗೆ ಚೆಸ್ ಒಲಿಂಪಿಯಾಡ್‌ಗೆ ಕೈ ಹಾಕಿದ್ದ ಚೆನ್ನೈ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಟೂರ್ನಿಯನ್ನ ಮತ್ತಷ್ಟು ಯಶಸ್ವಿಗೊಳಿಸಲು ಈಗಾಗಲೇ ಹಲವು ಪ್ರಯತ್ನ ಮಾಡಿದ್ದು ಇದರ ಸಾಲಿಗೆ ಸಮುದ್ರದ ಆಳದಲ್ಲಿ ಮುಳುಗು ತಜ್ಞರು ಚೆಸ್‌ ಆಡಿ ಸಾಹಸ ಮೆರೆದಿದ್ದಾರೆ.

ಸ್ಕೂಬಾ ಡೈವಿಂಗ್ ತರಬೇತುದಾರ ಎಸ್.ಬಿ.ಅರವಿಂದ ತರುಣಶ್ರೀ ಮಾತನಾಡಿ, ಚೆಸ್ ನಮ್ಮ ಹೆಮ್ಮೆ. ನಾವು ಅದನ್ನು ಆಚರಿಸುತ್ತಿದ್ದೇವೆ. ಕಲಾ ನಿರ್ದೇಶಕ ಸರ್ಬಾನನ್ ತಂಬಿಯ ಪ್ರತಿಕೃತಿ ಮಾಡಿದರು. ಭಾರೀ ನಾಣ್ಯಗಳನ್ನು ಚದುರಂಗದ ತುಂಡುಗಳಾಗಿ ಬಳಸಲಾಗುತ್ತದೆ. ಸ್ಟಂಟ್ ಸಮಯದಲ್ಲಿ ಯಾವುದೇ ಪ್ಲಾಸ್ಟಿಕ್ ಬಳಸಲಾಗುವುದಿಲ್ಲ. ಜಲ ಮಾಲಿನ್ಯದ ಅಪಾಯವಿಲ್ಲ ಎಂದಿದ್ದಾರೆ.

ವಿಶಿಷ್ಟವಾಗಿ ಚೆಸ್‌ ಆಡಲು ಪ್ರಯತ್ನಿಸಿರುವ ಮತ್ತೊಂದು ವಿಡಿಯೋ ಜನಪ್ರಿಯವಾಗಿದೆ. ಇದನ್ನು ಚೆಸ್ ಒಲಿಂಪಿಯಾಡ್ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಚೆಸ್ ಬೋರ್ಡ್ ಶೈಲಿಯ ವೇದಿಕೆಯಲ್ಲಿ ಶಾಸ್ತ್ರೀಯ, ಜಾನಪದ ನೃತ್ಯ ಮತ್ತು ಸಮರ ಕಲೆಗಳ ಕಲಾವಿದರು ನೃತ್ಯ ಸಂಯೋಜನೆಯ ಮೂಲಕ ವಿವಿಧ ಪ್ರದರ್ಶನಗಳನ್ನು ಪ್ರಸ್ತುತಪಡಿಸಿದರು. ಇದರಿಂದ ಚೆಸ್‌ನ ವಿವಿಧ ತುಣುಕುಗಳು ಜೀವಂತವಾಗಿರುವಂತೆ ತೋರುತ್ತದೆ. ಪುದುಕೊಟ್ಟೈ ಜಿಲ್ಲೆಯ ಪರವಾಗಿ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೆಕಾಯ್ ಆಟಕ್ಕೆ ನಡುಗಿದ ಭಾರತ, ಇವತ್ತು ಸೇಡು ತೀರಿಸಿಕೊಳ್ಳುತ್ತಾರೆ!! | Oneindia Kannada

ಮೊದಲ ಮೂರು ದಿನಗಳಲ್ಲಿ ಭಾರತದ ಎಲ್ಲಾ 6 ತಂಡಗಳು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದವು. ಹೆಚ್ಚಿನ ಪ್ರಶಸ್ತಿ ಗೆಲ್ಲುವ ಭರವಸೆಯೊಂದಿಗೆ ಸ್ಪರ್ಧಾಳುಗಳು ಮುನ್ನಡೆಯುತ್ತಿದ್ದಾರೆ.

Story first published: Tuesday, August 2, 2022, 10:07 [IST]
Other articles published on Aug 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X