ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದ T20 ಮ್ಯಾಕ್ಸ್‌ ಸೀರಿಸ್ ಆಡಲಿರುವ ಚೇತನ್ ಸಕಾರಿಯಾ ಮತ್ತು ಮುಕೇಶ್ ಚೌಧರಿ

Chetan sakariya and mukesh

ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಚೇತನ್ ಸಕಾರಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ಸೀಮರ್ ಮುಕೇಶ್‌ ಚೌಧರಿ ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಮ್ಯಾಕ್ಸ್‌ ಸೀರಿಸ್‌ನಲ್ಲಿ ಭಾಗವಹಿಸಲು ಸಹಿ ಮಾಡಿರುವುದಾಗಿ ವರದಿಯಾಗಿದೆ.

ಆಗಸ್ಟ್‌ನಲ್ಲಿ 18ರಂದು ಪ್ರಾರಂಭಗೊಳ್ಳಲಿರುವ ಆಸ್ಟ್ರೇಲಿಯಾದ ಟಿ20 ಮ್ಯಾಕ್ಸ್‌ ಸರಣಿಯಲ್ಲಿ ಐಪಿಎಲ್‌ ಈ ಎರಡು ವೇಗಿಗಳು ಅವಕಾಶ ಪಡೆಯುವ ಮೂಲಕ ಸಾಕಷ್ಟು ಖುಷಿ ವ್ಯಕ್ತಪಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುವ ಮೊದಲು ಚೇತನ್ ಸಕಾರಿಯಾ ರಾಜಸ್ತಾನ್‌ ರಾಯಲ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಇನ್ನು ಮುಕೇಶ್‌ ಚೌಧರಿ ಈ ವರ್ಷವಷ್ಟೇ ಚೆನ್ನೈ ಸೂಪರ್ ಕಿಂಗ್ಸ್‌ ಪರ ಚೊಚ್ಚಲ ಐಪಿಎಲ್ ಸೀಸನ್ ಆಡಿದ್ದಾರೆ.

ಸನ್‌ಶೈನ್‌ ಕೋಸ್ಟ್ ಪರ ಕಣಕ್ಕಿಳಿಯಲಿರುವ ಸಕಾರಿಯಾ

ಸನ್‌ಶೈನ್‌ ಕೋಸ್ಟ್ ಪರ ಕಣಕ್ಕಿಳಿಯಲಿರುವ ಸಕಾರಿಯಾ

ಆಸ್ಟ್ರೇಲಿಯಾದ ಮ್ಯಾಕ್ಸ್ ಟಿ20 ಸರಣಿಯಲ್ಲಿ ಸನ್‌ಶೈನ್ ಕೋಸ್ಟ್‌ ಪರ ಚೇತನ್ ಸಕಾರಿಯಾ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದೇ ವೇಳೆಯಲ್ಲಿ ಮುಕೇಶ್ ಚೌಧರಿ ವೈನ್ನಮ್-ಮ್ಯಾನ್ಲಿ ಪರ ಅಖಾಡಕ್ಕಿಳಿಯಲು ಮುಂದಾಗಿದ್ದಾರೆ.

ಎಂಆರ್‌ಎಫ್‌ ಪೇಸ್ ಫೌಂಡೇಶನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಡುವಿನ ವಿನಿಮಯ ಉಪಕ್ರಮದ ಭಾಗವಾಗಿ, ಜೋಡಿಯು ಈ ಟಿ20 ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ ಮತ್ತು ಬುಪಾ ರಾಷ್ಟ್ರೀಯ ಕ್ರಿಕೆಟ್ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತದೆ ಮತ್ತು ಪ್ರಿ ಸೀಸನ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ಬುಲ್ಸ್ ನೊಂದಿಗೆ ಸಹಕಾರ ಹೊಂದಿದೆ.

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಸಂಭಾವ್ಯ ಸ್ಕ್ವಾಡ್‌

ಕಳೆದ 20 ವರ್ಷಗಳಿಂದ ಆಟಗಾರರ ವಹಿವಾಟು ನಡೆಯುತ್ತಿದೆ!

"ಎಂಆರ್‌ಎಫ್‌ ಪೇಸ್ ಫೌಂಡೇಶನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಡುವಿನ ಆಟಗಾರ ಮತ್ತು ಕೋಚಿಂಗ್ ವಿನಿಮಯವು ಸುಮಾರು 20 ವರ್ಷಗಳಿಂದ ಜಾರಿಯಲ್ಲಿದೆ, ಕೋವಿಡ್‌ ಕಾರಣದಿಂದಾಗಿ ವಿರಾಮಗೊಂಡ ಸಂಬಂಧವನ್ನು ಇಬ್ಬರು ಭಾರತೀಯ ಆಟಗಾರರು ಪುನರಾರಂಭಿಸಿದ್ದಾರೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.

T20 World Cup: ಭಾರತದ ಈ ಇಬ್ಬರು ಸ್ಟಾರ್‌ಗಳು ಟಿ20 ವಿಶ್ವಕಪ್ ತಂಡದಲ್ಲಿರಬೇಕು; ರಿಕಿ ಪಾಂಟಿಂಗ್

ಟಿ20ಯಲ್ಲಿ ಯುವ ಪ್ರತಿಭೆಗಳಾಗಿ ಗುರುತಿಸಿಕೊಂಡಿರುವ ಬೌಲರ್ಸ್‌

ಟಿ20ಯಲ್ಲಿ ಯುವ ಪ್ರತಿಭೆಗಳಾಗಿ ಗುರುತಿಸಿಕೊಂಡಿರುವ ಬೌಲರ್ಸ್‌

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಲಟ್ಸ್‌ ಪರ ಆಡುವ ಚೇತನ್ ಸಕಾರಿಯಾ ಭಾರತ ಪರ ಒಡಿಐ ಮತ್ತು T20 ಪಂದ್ಯಗಳನ್ನು ಸಹ ಆಡಿದ್ದಾರೆ. ಇದುವರೆಗೂ ಈ ಬೌಲರ್‌ ಐಪಿಎಲ್‌ ಸೇರಿದಂತೆ ಒಟ್ಟಾರೆ 41 ಟಿ20 ಪಂದ್ಯಗಳನ್ನ ಆಡಿದ್ದಾರೆ.

ಕಳೆದ ಶ್ರೀಲಂಕಾ ವಿರುದ್ದದ ಪ್ರವಾಸದಲ್ಲಿ ಭಾರತ ಪರ ಆಡಿದ್ದ ಚೇತನ್ ಸಕಾರಿಯಾ, ಮತ್ತೆ ಅವಕಾಶ ಪಡೆಯಲು ಆಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಚೊಚ್ಚಲ ಸೀಸನ್‌ನಲ್ಲಿ ಸಿಎಸ್‌ಕೆ ಪರ ಮಿಂಚಿದ ಮುಕೇಶ್ ಚೌಧರಿ 25 ಟಿ20 ಪಂದ್ಯಗಳನ್ನಾಡಿದ್ದು 32 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಇನ್ನೂ ಭಾರತದ ಪರ ಆಡಲು ಮುಕೇಶ್ ಚೌಧರಿಗೆ ಅವಕಾಶ ಸಿಕ್ಕಿಲ್ಲ.

ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಎಂಆರ್‌ಎಫ್ ಪೇಸ್ ಫೌಂಡೇಶನ್ ನಡುವೆ ಆಟಗಾರರ ವಹಿವಾಟು ನಡೆಸುತ್ತಿರುವುದು ಇದೇ ಮೊದಲಲ್ಲ. 20 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ, ಎರಡು ಸಂಸ್ಥೆಗಳು ಆಟಗಾರರನ್ನು ವ್ಯಾಪಾರ ಮಾಡಿವೆ. ಆದರೆ 2019 ರ ನಂತರ ಕೋವಿಡ್-19 ಕಾರಣದಿಂದಾಗಿ ಏಕಾಏಕಿ ಈ ಕ್ರಮವನ್ನ ಕೈಬಿಡಲಾಯಿತು.

Story first published: Saturday, July 23, 2022, 10:00 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X