ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತನ್ ಸಕಾರಿಯಾ ತಂದೆಗೆ ಕೊರೊನಾ, ರಾಜಸ್ಥಾನ್‌ನಿಂದ ನೆರವು

Chetan Sakariyas Father Tested positive for COVID-19, RR has made his Payment

ಜೈಪುರ್: ರಾಜಸ್ಥಾನ್ ರಾಯಲ್ಸ್ ಯುವ ವೇಗಿ ಚೇತನ್ ಸಕಾರಿಯಾ ತಂದೆಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಇದೇ ವೇಳೆ ರಾಜಸ್ಥಾನ್ ಫ್ರಾಂಚೈಸಿಯಿಂದ ಚೇತನ್‌ಗೆ ಆರ್ಥಿಕ ನೆರವು ಲಭಿಸಿದೆ. ಈ ಸಮಾಧಾನವನ್ನು ಸಕಾರಿಯಾ ಹೇಳಿಕೊಂಡಿದ್ದಾರೆ.

ಪತ್ನಿ ಹುಟ್ಟುಹಬ್ಬಕ್ಕೆ ಬುಮ್ರಾ ವಿಶ್ ; ಟ್ರೋಲ್ ಮಾಡಿದ ನೀಶಮ್ಪತ್ನಿ ಹುಟ್ಟುಹಬ್ಬಕ್ಕೆ ಬುಮ್ರಾ ವಿಶ್ ; ಟ್ರೋಲ್ ಮಾಡಿದ ನೀಶಮ್

ತಂದೆಗೆ ಕೋವಿಡ್ ಪಾಸಿಟಿವ್ ಬಂದಿರುವ ಸಂಗತಿ ಮತ್ತು ರಾಜಸ್ಥಾನ್ ರಾಯಲ್ಸ್‌ನಿಂದ ತನಗೆ ಸಹಾಯವಾದ ಬಗೆಯನ್ನು ಸಕಾರಿಯಾ ಹೇಳಿಕೊಂಡಿದ್ದಾರೆ. ಈ ಮುಂಚಿತವಾಗಿಯೇ ಫ್ರಾಂಚೈಸಿ ತನ್ನ ಹಣ ನೀಡಿದ್ದರಿಂದ ಕಷ್ಟದ ಸಮಯದಲ್ಲಿ ಕುಟುಂಬಕ್ಕೆ ನೆರವಾಗಲು ಸಾಧ್ಯವಾಯಿತು ಎಂದು ಸಕಾರಿಯಾ ಹೇಳಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಸಕಾರಿಯಾ, 'ರಾಜಸ್ಥಾನ್ ರಾಯಲ್ಸ್‌ನಿಂದ ನನ್ನ ಪಾಲಿನ ಹಣ ನನಗೆ ಕೆಲ ದಿನಗಳ ಹಿಂದೆಯೇ ಲಭಿಸಿತ್ತು. ನಾನು ಅದೃಷ್ಟ ಮಾಡಿದ್ದೆ ಅನ್ನಿಸುತ್ತೆ. ಆರ್‌ಆರ್ ಹಣ ನೀಡಿದ್ದರಿಂದ ಈ ಕಷ್ಟದ ಸಮಯದಲ್ಲಿ ಕುಟುಂಬದಲ್ಲಿ ಒಬ್ಬನೇ ಒಬ್ಬ ಸಂಬಳ ಪಡೆಯುತ್ತಿರುವ ನಾನು ನನ್ನ ಕುಟುಂಬಕ್ಕೆ ನೆರವಾಗಲು ಸಾಧ್ಯವಾಯ್ತು. ತಂದೆಗೆ ಕೊರೊನಾ ಪಾಸಿಟಿವ್ ಬಂದಿರುವ ಸುದ್ದಿ ತಿಳಿದ ಕೂಡಲೇ ಹಣವನ್ನು ನೇರವಾಗಿ ಕುಟುಂಬಸ್ಥರಿಗೆ ಕಳುಹಿಸಿದೆ. ಐಪಿಎಲ್‌ನಿಂದ ನನ್ನ ಬದುಕು ಬದಲಾಗಿದೆ,' ಎಂದಿದ್ದಾರೆ.

ಆಸೀಸ್‌ ಜೊತೆ ಮಾಲ್ಡೀವ್ಸ್‌ನಲ್ಲಿ ಎಂಐ ಕೋಚ್ ಜಯವರ್ದನೆ ಕ್ವಾರಂಟೈನ್ಆಸೀಸ್‌ ಜೊತೆ ಮಾಲ್ಡೀವ್ಸ್‌ನಲ್ಲಿ ಎಂಐ ಕೋಚ್ ಜಯವರ್ದನೆ ಕ್ವಾರಂಟೈನ್

ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್‌ಗೆ ಈ ಬಾರಿಯ ಐಪಿಎಲ್‌ ಹರಾಜಿನ ವೇಳೆ 23ರ ಹರೆಯದ ಚೇತನ್ ಸಕಾರಿಯ ಸೇರಿಕೊಂಡಿದ್ದರು. ಆಡಿದ ಏಳು ಪಂದ್ಯಗಳಲ್ಲಿ 7 ವಿಕೆಟ್‌ ಕೂಡ ಪಡೆದು ತಂಡಕ್ಕೆ ನೆರವು ನೀಡಿದ್ದರು.

Story first published: Friday, May 7, 2021, 10:32 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X