ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾ

ಲಂಡನ್, ಜೂನ್ 24: ಶನಿವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತವು ರೋಚಕ ಗೆಲುವು ಕಂಡಿತು. ಅದಕ್ಕೆ ಕಾರಣವಾಗಿದ್ದು ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಹ್ಯಾಟ್ರಿಕ್ ವಿಕೆಟ್. 2019ರ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಇದು. ಭಾರತದ ಪಾಲಿಗೆ ವಿಶ್ವಕಪ್‌ನಲ್ಲಿ ಎರಡನೆಯ ಹ್ಯಾಟ್ರಿಕ್ ಸಾಧನೆ ಮಾಡಿದ ಕೀರ್ತಿ ಶಮಿ ಅವರದ್ದಾಯಿತು.

ಈ ಮೂಲಕ ಹಳೆಯ ದಾಖಲೆಗಳೆಲ್ಲವನ್ನೂ ನೆನಪಿನ ಅಂಗಳಕ್ಕೆ ಎಲೆದು ತರಲಾಯಿತು. ಚರಿತ್ರೆಯನ್ನು ನೋಡಿದರೆ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದವರ ಸಾಲಿನಲ್ಲಿ ಮೊದಲು ಕಂಡ ಹೆಸರು ಚೇತನ್ ಶರ್ಮಾ. ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದವರು ಭಾರತದ ಮಾಜಿ ವೇಗಿ ಚೇತನ್ ಶರ್ಮಾ.

ಹರಿಯಾಣದ ಈ ವೇಗಿ 1987ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು. ಆದರೆ, ಆ ಸಾಧನೆಗಿಂತಲೂ ಅವರು ಹೆಚ್ಚಾಗಿ ನೆನಪಿರುವುದು ಪಾಕಿಸ್ತಾನದ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ಅವರಿಂದ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆಸಿಕೊಂಡು ತಂಡದ ಸೋಲಿಗೆ ಕಾರಣರಾಗಿದ್ದರು ಎಂಬ ಕುಖ್ಯಾತಿಯಿಂದಾಗಿ.

ಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿ ಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿ

ಮೊಹಮ್ಮದ್ ಶಮಿ ಅವರ ಹ್ಯಾಟ್ರಿಕ್ ಸಾಧನೆಯಿಂದಾಗಿ ಈಗಿನ ಕಾಲಘಟ್ಟದ ಜನರು ಅವರ ಮೂಲಕ ತಮ್ಮನ್ನು ತಿಳಿದುಕೊಳ್ಳುವಂತಾಯಿತು ಎಂದು ಚೇತನ್ ಶರ್ಮಾ ಹೇಳಿದ್ದಾರೆ.

32 ವರ್ಷದ ಹಿಂದೆ ಹೋದೆ

32 ವರ್ಷದ ಹಿಂದೆ ಹೋದೆ

'ಅನೇಕ ವರ್ಷಗಳ ಹಿಂದೆ ನೀವು ಮಾಡಿದ ಸಾಧನೆಯೊಂದನ್ನು ನಿಮ್ಮದೇ ದೇಶದವರು ಮಾಡಿದಾಗ ವಿಶೇಷ ಖುಷಿಯ ಅನುಭವ ಆಗುತ್ತದೆ. ಶಮಿ ತಮ್ಮ ಮೂರನೇ ವಿಕೆಟ್ ಪಡೆದ ಕೂಡಲೇ ನಾನು 32 ವರ್ಷದ ಹಿಂದಿನ ನಾಗಪುರದ ವಿಸಿಎ ಕ್ರೀಡಾಂಗಣಕ್ಕೆ ಹೋಗಿಬಿಟ್ಟಿದ್ದೆ' ಎಂದು ಚೇತನ್ ಶರ್ಮಾ ಹೇಳಿದ್ದಾರೆ.

ಮೂರು ದಶಕಗಳ ಹಿಂದಿನ ತಮ್ಮ ಮೊದಲ ಓವರ್‌ನ ನೆನಪನ್ನು ಕೆದಕಲು ಶಮಿ ಅವರ ಸಾಧನೆ ಹೇಗೆ ನೆರವಾಯಿತು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.

ವಿಶ್ವಕಪ್ 2019: ಭಾರತ ಪರ ಇತಿಹಾಸ ನಿರ್ಮಿಸಿದ ವೇಗಿ ಮೊಹಮ್ಮದ್ ಶಮಿ!

ಈಗಿನ ಪೀಳಿಗೆಯವರಿಗೆ ತಿಳಿದಿಲ್ಲ

ಈಗಿನ ಪೀಳಿಗೆಯವರಿಗೆ ತಿಳಿದಿಲ್ಲ

'ಈಗಿನ ಪೀಳಿಗೆಯ ಜನರಿಗೆ ಮೂರು ದಶಕದ ಹಿಂದೆ ನಾನು ಏನು ಸಾಧಿಸಿದ್ದೆ ಎಂಬುದು ಗೊತ್ತಿರಲಿಲ್ಲ. ಈಗ ಅವರಿಗೆ ತಿಳಿಯಲಿದೆ. ಅದಕ್ಕಾಗಿ ಶಮಿಗೆ ಧನ್ಯವಾದಗಳು. ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್‌ಅನ್ನು ಒಬ್ಬ ಭಾರತೀಯ ಪಡೆದಿದ್ದ ಎಂಬುದು ಈಗಿನ ಪೀಳಿಗೆಯ ಯುವಜನರಿಗೆ ಗೊತ್ತಾಗುತ್ತಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈಗಲೂ ರೋಮಾಂಚನವಾಗುತ್ತದೆ

ಈಗಲೂ ರೋಮಾಂಚನವಾಗುತ್ತದೆ

'ಆಗ ನನಗೆ ಜಗತ್ತನ್ನೇ ಗೆದ್ದ ಸಂಭ್ರಮದಲ್ಲಿದ್ದೆ. ಮರುದಿನ ಸೆಮಿಫೈನಲ್‌ಗಾಗಿ ತಂಡದೊಂದಿಗೆ ವಿಮಾನವನ್ನೇರಿದ್ದೆ. ನಾನು ಒಳಕ್ಕೆ ಪ್ರವೇಶಿಸಿದಾಗ ಎಲ್ಲ ಪ್ರಯಾಣಿಕರೂ ಎದ್ದು ನಿಂತು ಚಪ್ಪಾಳೆಯೊಂದಿಗೆ ಅಭಿನಂದಿಸಿದ್ದರು. ಅದು ಸ್ಮರಣೀಯ ಗಳಿಗೆ. ಅದರ ಬಗ್ಗೆ ಯೋಚಿಸಿದಾಗಲೆಲ್ಲ ರೋಮಾಂಚನವಾಗುತ್ತದೆ' ಎಂದಿದ್ದಾರೆ.

ಇಬ್ಬರಲ್ಲೂ ಸಾಮ್ಯತೆ ಇದೆ

ಇಬ್ಬರಲ್ಲೂ ಸಾಮ್ಯತೆ ಇದೆ

ತಮ್ಮ ಮತ್ತು ಶಮಿ ಅವರ ಸಾಧನೆಗಳು ಬಹುತೇಕ ಒಂದೇ ರೀತಿಯದ್ದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 'ನಾವಿಬ್ಬರೂ ಬಲಗೈ ವೇಗದ ಬೌಲರ್‌ಗಳು. ನಮ್ಮ ಹ್ಯಾಟ್ರಿಕ್ ಎಸೆತದಲ್ಲಿ ಇಬ್ಬರೂ ಲೆಗ್‌ಸ್ಟಂಪ್ ಅನ್ನು ಉರುಳಿಸಿದ್ದೆವು. ಅಷ್ಟೇ ಅಲ್ಲ ಇಬ್ಬರೂ ಗಡ್ಡಧಾರಿಗಳು' ಎಂದು ನಕ್ಕಿದ್ದಾರೆ.

ಚೇತನ್ ಶರ್ಮಾ ಅವರ ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್‌ನ ಕೆನ್ ರುದರ್‌ಫರ್ಡ್, ಇಯಾನ್ ಸ್ಮಿತ್ ಮತ್ತು ಇವೆನ್ ಚಾಟ್‌ಫೀಲ್ಡ್ ಬೌಲ್ಡ್ ಆಗಿದ್ದರು. ಶಮಿ ಅವರ ಮೊದಲ ವಿಕೆಟ್ (ಮೊಹಮ್ಮದ್ ನಬಿ) ಲಾಂಗ್ ಆನ್‌ನಲ್ಲಿ ಕ್ಯಾಚ್ ನೀಡಿದ್ದರೆ, ಉಳಿದಿಬ್ಬರು ಬೌಲ್ಡ್ ಆಗಿದ್ದರು.

ಸಿಕ್ಸರ್ ಮಾತ್ರ ನೆನಪಿದೆ- ವಿಷಾದ

ಸಿಕ್ಸರ್ ಮಾತ್ರ ನೆನಪಿದೆ- ವಿಷಾದ

1986ರಲ್ಲಿ ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ಕಪ್‌ನ ಫೈನಲ್‌ನಲ್ಲಿ ಜಾವೇದ್ ಮಿಯಾಂದಾದ್, ಚೇತನ್ ಶರ್ಮಾ ಅವರ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಾಕಿಸ್ತಾನದ ಗೆಲುವಿಗೆ ಕಾರಣರಾಗಿದ್ದರು. 'ಶಾರ್ಜಾದಲ್ಲಿ ನನ್ನ ಕೊನೆಯ ಎಸೆತದಲ್ಲಿ ಮಿಯಾಂದಾದ್ ಸಿಕ್ಸರ್ ಬಾರಿಸಿ ಗೆಲುವು ಪಡೆದಿದ್ದನ್ನು ಅನೇಕರು ನೆನಪಿಸಿಕೊಳ್ಳುತ್ತಾರೆ. ಆದರೆ, ಮರುವರ್ಷವೇ ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್ ಗಳಿಸಿದವನು ನಾನು ಎನ್ನುವುದನ್ನು ಅವರು ಮರೆಯುತ್ತಾರೆ' ಎಂದು ವಿಷಾದದಿಂದ ಹೇಳಿದ್ದಾರೆ.

Story first published: Monday, June 24, 2019, 13:57 [IST]
Other articles published on Jun 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X