ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತೇಶ್ವರ ಪೂಜಾರ ಟೆಸ್ಟ್ ದಾಖಲೆಗಳು, ಅಚ್ಚರಿಯ ಅಂಕಿ-ಅಂಶಗಳು!

Cheteshwar Pujara: Amazing records in Test Cricket

ನವದೆಹಲಿ: ಚೇತೇಶ್ವರ ಪೂಜಾರ ಕ್ರೀಸ್‌ನಲ್ಲಿದ್ದರೆ ಪಟ ಪಟನೆ ಉದುರತೊಡಗಿದ್ದ ವಿಕೆಟ್‌ಗಳಿಗೆ ಬ್ರೇಕ್ ಬಿದ್ದಿದೇ ಎಂದೇ ಅರ್ಥ. ಎದುರಾಳಿ ಬೌಲರ್‌ಗಳನ್ನೆಲ್ಲ ಬೆವರಿಳಿಸುವ ಟೆಸ್ಟ್ ಸ್ಪೆಷಾಲಿಸ್ಟ್ ಪೂಜಾರಗೆ 'ಗ್ರೇಟ್ ವಾಲ್-2' ಎಂಬ ಹೆಸರಿದೆ. ಪೂಜಾರ ಅವರನ್ನು ಈ ದಿನಗಳ ರಾಹುಲ್ ದ್ರಾವಿಡ್ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಇದಕ್ಕೊಂದು ಕಾರಣವಿದೆ. ಅದೇನೆಂದರೆ ಪೂಜಾರ ಕೂಡ ಇಂದು ದ್ರಾವಿಡ್ ಅವರ ಶೈಲಿಯಲ್ಲೇ ಆಡುತ್ತಿದ್ದಾರೆ.

ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್

ಚೇತೇಶ್ವರ್ ಪೂಜಾರ ಅವರು ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಅಥವಾ ಕೇನ್ ವಿಲಿಯಮ್ಸನ್‌ನಂತೆ ಬುದ್ಧಿವಂತ ಅಲ್ಲ. ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್ ಅವರಂತೆ ರಕ್ಷಣೆಯಲ್ಲಿ ಸೊಗಸುಗಾರನಲ್ಲ. ಆದರೂ ಟೆಸ್ಟ್‌ನಲ್ಲಿ ಬೆಸ್ಟ್‌ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು ಪೂಜಾರ.

ನಾನು ಇನ್ನೂ ಒಂದಿಷ್ಟು ಮೈಲುಗಳು ಸಾಗೋದಿದೆ: ಟಿ ನಟರಾಜನ್ನಾನು ಇನ್ನೂ ಒಂದಿಷ್ಟು ಮೈಲುಗಳು ಸಾಗೋದಿದೆ: ಟಿ ನಟರಾಜನ್

ಚೇತೇಶ್ವರ ಪೂಜಾರ (33 ವರ್ಷ) ಅವರ ಹುಟ್ಟು ಹಬ್ಬದ ಈ ದಿನ (ಜನವರಿ 25) ಅವರ ಕ್ರಿಕೆಟ್ ಬದುಕಿನ ವಿಶೇಷ ದಾಖಲೆಗಳು, ಅಂಕಿ-ಅಂಶಗಳತ್ತ ಇಣುಕು ನೋಟ ಹರಿಸೋಣ.

ಟೆಸ್ಟ್ ಸರಾಸರಿಯಲ್ಲಿ ದ್ವಿತೀಯ ಸ್ಥಾನಿ

ಟೆಸ್ಟ್ ಸರಾಸರಿಯಲ್ಲಿ ದ್ವಿತೀಯ ಸ್ಥಾನಿ

ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಬ್ಯಾಟಿಂಗ್‌ ಸರಾಸರಿ ಹೊಂದಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಚೇತೇಶ್ವರ ಪೂಜಾರ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 39 ಟೆಸ್ಟ್ ಪಂದ್ಯಗಳಲ್ಲಿ 3558 ರನ್‌ನೊಂದಿಗೆ 68.42 ಸರಾಸರಿ ಹೊಂದಿದ್ದರೆ, ಪೂಜಾರ 41 ಟೆಸ್ಟ್ ಪಂದ್ಯಗಳಲ್ಲಿ 3471 ರನ್‌ನೊಂದಿಗೆ 59.84 ಸರಾಸರಿ ಹೊಂದಿದ್ದಾರೆ.

ತವರಿನಲ್ಲಿ ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿ

ತವರಿನಲ್ಲಿ ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿ

1. ವಿರಾಟ್ ಕೊಹ್ಲಿ, 39 ಪಂದ್ಯಗಳು, 3558 ರನ್‌ಗಳು, 68.42 ಸರಾಸರಿ, 13 ಶತಕಗಳು
2. ಚೇತೇಶ್ವರ ಪೂಜಾರ, 41 ಪಂದ್ಯಗಳು, 3471 ರನ್‌ಗಳು, 59.84 ಸರಾಸರಿ, 10 ಶತಕಗಳು
3. ಮೊಹಮ್ಮದ್ ಅಝರುದ್ದೀನ್, 46 ಪಂದ್ಯಗಳು, 3412 ರನ್‌ಗಳು, 55.93 ಸರಾಸರಿ, 13 ಶತಕಗಳು
4. ದಿಲೀಪ್ ವೆಂಗ್‌ ಸರ್ಕಾರ್, 54 ಪಂದ್ಯಗಳು, 3725 ರನ್‌ಗಳು, 55.59 ಸರಾಸರಿ, 13 ಶತಕಗಳು
5. ವೀರೇಂದ್ರ ಸೆಹ್ವಾಗ್, 52 ಪಂದ್ಯಗಳು, 4656 ರನ್‌ಗಳು, 53.13 ಸರಾಸರಿ, 13 ಶತಕಗಳು

ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್‌

ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್‌

ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಪೂಜಾರ ಕೂಡ ಇದ್ದಾರೆ. ಈ ಪಟ್ಟಿಯಲ್ಲಿ ಪೂಜಾರ 5ನೇ ಸ್ಥಾನದಲ್ಲಿದ್ದಾರೆ. ಈ ಯಾದಿಯಲ್ಲಿ 3ನೇ ಸ್ಥಾನದಲ್ಲಿರುವ ರಾಹುಲ್ ದ್ರಾವಿಡ್ ತನ್ನ ಟೆಸ್ಟ್ ವೃತ್ತಿ ಜೀವನದಲ್ಲಿ 31258 ಎಸೆತಗಳನ್ನು ಎದುರಿಸಿದ್ದಾರೆ. ದ್ರಾವಿಡ್ ಅವರ ಟೆಸ್ಟ್ ಇನ್ನಿಂಗ್ಸ್‌ ಮತ್ತು ಎದುರಿಸಿದ ಎಸೆತಗಳ ಸರಾಸರಿ ತೆಗೆದರೆ 109.29 ಸಿಗುತ್ತದೆ. ಅದೇ ಪೂಜಾರ 136 ಇನ್ನಿಂಗ್ಸ್‌ಗಳಲ್ಲಿ 13572 ಎಸೆತಗಳನ್ನು ಎದುರಿಸಿದ್ದಾರೆ. ಇದರ ಸರಾಸರಿ ತೆಗೆದರೆ 99.79 ಸಿಗುತ್ತದೆ.

ಟೆಸ್ಟ್‌ನಲ್ಲಿ ಅತ್ಯಧಿಕ ಎಸೆತಗಳ ಸರಾಸರಿ ಪಟ್ಟಿ

ಟೆಸ್ಟ್‌ನಲ್ಲಿ ಅತ್ಯಧಿಕ ಎಸೆತಗಳ ಸರಾಸರಿ ಪಟ್ಟಿ

1. ರಾಹುಲ್ ದ್ರಾವಿಡ್, ಭಾರತ, 286 ಇನ್ನಿಂಗ್ಸ್‌, 31258 ಎದುರಿಸಿದ ಎಸೆತಗಳು, 109.29 ಸರಾಸರಿ
2. ಜೆಫ್ರಿ ಬಹಿಷ್ಕಾರ, ಇಂಗ್ಲೆಂಡ್, 193 ಇನ್ನಿಂಗ್ಸ್‌, 20412 ಎದುರಿಸಿದ ಎಸೆತಗಳು, 105.76 ಸರಾಸರಿ
3. ಜಾಕ್ ಕ್ಯಾಲೀಸ್, ದಕ್ಷಿಣ ಆಫ್ರಿಕಾ, 280 ಇನ್ನಿಂಗ್ಸ್‌, 28903 ಎದುರಿಸಿದ ಎಸೆತಗಳು, 103.23 ಸರಾಸರಿ
4. ಅಲನ್ ಬಾರ್ಡರ್, ಆಸ್ಟ್ರೇಲಿಯಾ, 265 ಇನ್ನಿಂಗ್ಸ್‌, 27002 ಎದುರಿಸಿದ ಎಸೆತಗಳು, 101.89 ಸರಾಸರಿ
5. ಚೇತೇಶ್ವರ ಪೂಜಾರ, 136 ಇನ್ನಿಂಗ್ಸ್, 13572 ಎದುರಿಸಿದ ಎಸೆತಗಳು, 99.79 ಸರಾಸರಿ

ಚೇತೇಶ್ವರ ಪೂಜಾರ ಅಂಕಿ-ಅಂಶ

ಚೇತೇಶ್ವರ ಪೂಜಾರ ಅಂಕಿ-ಅಂಶ

ಚೇತೇಶ್ವರ ಪೂಜಾರ ಅವರು 81 ಪಂದ್ಯ (136 ಇನ್ನಿಂಗ್ಸ್)ಗಳಲ್ಲಿ 6111 ರನ್, 18 ಶತಕ, 3 ದ್ವಿಶತಕಗಳನ್ನು ಬಾರಿಸಿದ್ದಾರೆ. 5 ಏಕದಿನ ಪಂದ್ಯಗಳಲ್ಲಿ 51 ರನ್ ಬಾರಿಸಿದ್ದಾರೆ. ಟೆಸ್ಟ್ ಸ್ಪೆಶಾಲಿಸ್ಟ್ ಎಂದು ಕರೆಯಲಾಗುವ ಪೂಜಾರ ಈವರೆಗೆ ಟೆಸ್ಟ್‌ನಲ್ಲಿ ಬರೋಬ್ಬರಿ 13572 ಎಸೆತಗಳನ್ನು ಎದುರಿಸಿದ್ದಾರೆ.

Story first published: Monday, January 25, 2021, 15:48 [IST]
Other articles published on Jan 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X