ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೌಂಟಿಯಲ್ಲಿ ಮುಂದುವರಿದ ಪೂಜಾರ ಆರ್ಭಟ: 7ನೇ ಪಂದ್ಯದಲ್ಲಿ 3ನೇ ದ್ವಿಶತಕ!

Cheteshwar Pujara another double century in County cricket Joins Indian Legend In Elusive List

ಭಾರತದ ಟೆಸ್ಟ್ ಸ್ಪೆಶಲಿಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ. ಸಸ್ಸೆಕ್ಸ್ ತಂಡವನ್ನು ಮುನ್ನಡೆಸುತ್ತಿರುವ ಪೂಜಾರ ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಲಾರ್ಡ್ಸ್‌ನಲ್ಲಿ ಬುಧವಾರ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಇದು ಚೇತೇಶ್ವರ್ ಪೂಜಾರ ಈ ಬಾರಿಯ ಆವೃತ್ತಿಯಲ್ಲಿ ಸಿಡಿಸಿದ ಮೂರನೇ ದ್ವಿಶತಕ ಎಂಬುದು ಗಮನಾರ್ಹ ಅಂಶ. ಸಸ್ಸೆಕ್ಸ್ ತಂಡದ ಪರವಾಗಿ ಕ್ರಿಕೆಟ್‌ನ ತವರು ಎನಿಸಿಕೊಳ್ಳುವ ಲಾರ್ಡ್ಸ್‌ನಲ್ಲಿ ಕೊನೆಯ ಬಾರಿ ದ್ವಿಶತಕ ಸಿಡಿಸಿದ ಭಾರತದ ಆಟಗಾರ ಎಂದರೆ ಕರ್ನಲ್ ಹೆಚ್ ಹೆಚ್ ಶ್ರೀ ಸರ್ ರಂಜಿತ್‌ಸಿಂಗ್ ಜೀ. 125 ವರ್ಷಗಳ ಹಿಂದೆ ಎಂಸಿಸಿ ತಂಡದ ವಿರುದ್ಧ ಅವರು ಈ ಸಾಧನೆ ಮಾಡಿದ್ದರು.

ಟೀಂ ಇಂಡಿಯಾ ಪರ ಕಂಬ್ಯಾಕ್ ಮಾಡಲು ಭರ್ಜರಿ ಅಭ್ಯಾಸ ನಡೆಸುತ್ತಿರುವ KL ರಾಹುಲ್ಟೀಂ ಇಂಡಿಯಾ ಪರ ಕಂಬ್ಯಾಕ್ ಮಾಡಲು ಭರ್ಜರಿ ಅಭ್ಯಾಸ ನಡೆಸುತ್ತಿರುವ KL ರಾಹುಲ್

ಸವಾಲಿಗೆ ಜಗ್ಗದ ಪೂಜಾರ

ಸವಾಲಿಗೆ ಜಗ್ಗದ ಪೂಜಾರ

ಬಿಸಿ ಗಾಳಿಯ ಕಾರಣದಿಂದಾಗಿ ಲಂಡನ್ ಹವಾಮಾನ ವ್ಯತಿರಿಕ್ತವಾಗಿದ್ದರೂ ಚೇತೇಶರ್ವರ್ ಪೂಜಾರ ಅಮೋಘ ಪ್ರದರ್ಶನ ನಿಡಿದ್ದಾರೆ. ಸುಮಾರು 9 ಗಂಟೆಗಳ ಕಾಲ ಕ್ರೀಸ್‌ನಲ್ಲಿ ಉಳಿದ ಪೂಜಾರ ತಮಡದ ಕೊನೆಯ ಆಟಗಾರನಾಗಿ ವಿಕೆಟ್ ಕಳೆದುಕೊಂಡು ಫೆವಿಲಿಯನ್‌ಗೆ ಸೇರಿದರು. ಈ ಸಂದರ್ಭದಲ್ಲಿ ಸಸ್ಸೆಕ್ಸ್ ತಂಡ ಭರ್ಜರಿ 523 ರನ್‌ಗಳನ್ನು ಕಲೆ ಹಾಕಿವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಲಾರ್ಡ್ಸ್ದ ಕ್ರೀಡಾಂಗಣದಲ್ಲಿ ಇದಕ್ಕೂ ಹಿಂದೆ ಗಳಿಸಿದ್ದ ಅತಿ ಹೆಚ್ಚಿನ ಮೊತ್ತವನ್ನು ಹಿಂದಿಕ್ಕಿತು.

ದ್ವಿಶತಕದಲ್ಲಿ ಶ್ರೇಷ್ಠ ಸಾಧನೆ

ದ್ವಿಶತಕದಲ್ಲಿ ಶ್ರೇಷ್ಠ ಸಾಧನೆ

ಚೇತೇಶ್ವರ್ ಪೂಜಾರ ಈ ಬಾರಿಯ ಕೌಂಟಿ ಆವೃತ್ತಿಯಲ್ಲಿ ಆಡುತ್ತಿರುವ 7ನೇ ಪಂದ್ಯ ಇದಾಗಿದೆ. ಆರಂಭಿಕ ಪಂದ್ಯದಿಂದಲೇ ಅದ್ಭುತ ಪ್ರದರ್ಶನ ನೀಡುತ್ತಿರುವ ಪೂಜಾರ ಈ ಪಂದ್ಯದಲ್ಲಿ ಮೂರನೇ ದ್ವಿಶತಕ ಸಿಡಿಸಿದ್ದಾರೆ. ಇನ್ನು ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಪೂಜಾರ 3ನೇ ಸ್ಥಾನಕ್ಕೇರಿದ್ದು ಬೃಹತ್ ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ 16ನೇ ದ್ವಿಶತಕವಾಗಿದೆ. ಈ ಪಟ್ಟಿಯಲ್ಲಿ ದಿಗ್ಗಜ ಡಾನ್ ಬ್ರಾಡ್‌ಮನ್ ಮೊದಲ ಸ್ಥಾನದಲ್ಲಿದ್ದು 37 ದ್ವಿಶತಕಗಳನ್ನು ಹೊಂದಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಮಹಿಳಾ ಜಾವೆಲಿನ್ ಸ್ಪರ್ಧೆಯಲ್ಲಿ ಫೈನಲ್‌ಗೇರಿದ ಭಾರತದ ಅನ್ನು ರಾಣಿ

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ ವಿರಾಟ್ ಕೊಹ್ಲಿಯ ಡಾನ್ಸ್ ವಿತ್ ವರ್ಕೌಟ್ ವಿಡಿಯೋ | *Cricket | OneIndia
231 ರನ್‌ಗಳಿಸಿದ ಪೂಜಾರಿ

231 ರನ್‌ಗಳಿಸಿದ ಪೂಜಾರಿ

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನ್ಲಲಿ ಪೂಜಾರ 403 ಎಸೆತಗಳನ್ನು ಎದುರಿಸಿದ್ದು 231 ರನ್‌ಗಳಿಸಿದ್ದಾರೆ. ಇದರಲ್ಲಿ 21 ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್‌ಗಳು ಇದ್ದವು. ಈ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಸಸ್ಸೆಕ್ಸ್ ತಂಡ ಭರ್ಜರಿ 523 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ಕೌಂಟಿ ಕ್ರಿಕೆಟ್‌ನಲ್ಲಿ ನಿಡಿದ ಪ್ರದರ್ಶನದ ಕಾರಣದಿಂದಾಗಿಯೇ ಪೂಜಾರ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಂತೆ ಮಾಡಿತು. ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದ ಪೂಜಾರ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಟೆಸ್ಟ್ ತಂಡದಿಂದ ಹೊರಬಿದ್ದಿದ್ದರು. ಬಳಿಕ ಕೌಂಟಿ ಕ್ರಿಕೆಟ್‌ನಲ್ಲಿ ಆಡಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.

Story first published: Thursday, July 21, 2022, 11:49 [IST]
Other articles published on Jul 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X