ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಮಾರ ಸಂಗಕ್ಕಾರ ದಾಖಲೆಯನ್ನ ಮುರಿದ ಚೇತೇಶ್ವರ ಪೂಜಾರ: ಗರಿಷ್ಠ ರನ್ ಕಲೆಹಾಕಿದ ಏಷ್ಯಾದ ಕ್ರಿಕೆಟರ್‌

Pujara and sangakkara

ಚೇತೇಶ್ವರ ಪೂಜಾರ ಭಾರತ ಟೆಸ್ಟ್ ತಂಡದ ಆಧಾರ ಸ್ತಂಭಗಳಲ್ಲಿ ಒಬ್ಬರು. ಮಾಜಿ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ನಂತರ, ಅವರನ್ನು ಭಾರತೀಯ ಕ್ರಿಕೆಟ್‌ನ ಮಹಾ ಗೋಡೆ ಎಂದು ಬಣ್ಣಿಸಲಾಗುತ್ತದೆ. ಆದರೆ ಅವರು ಟೆಸ್ಟ್ ಕ್ರಿಕೆಟಿಗ ಎಂಬ ಹಣೆಪಟ್ಟಿಯಲ್ಲಿ ಅಂಟಿಕೊಂಡಿರುವ ಬ್ಯಾಟ್ಸ್‌ಮನ್.

ವೈಟ್ ಬಾಲ್ ಕ್ರಿಕೆಟ್ ಪೂಜಾರಗೆ ಹೊಂದುವುದಿಲ್ಲ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಇದಕ್ಕೆ ಕಾರಣ ಚೇತೇಶ್ವರ್ ಪೂಜಾರ ನಿಧಾನಗತಿಯ ಬ್ಯಾಟಿಂಗ್ ಇದಕ್ಕೆ ಪ್ರಮುಖ ಕಾರಣವಾಗಿತ್ತು.

ಆದರೆ ಈಗ ಪೂಜಾರ ಸಂಪೂರ್ಣ ಬದಲಾಗಿದ್ದಾರೆ. ತನ್ನ ಫಾರ್ಮ್ ಅನ್ನು ಮರಳಿ ಪಡೆಯಲು ಇಂಗ್ಲಿಷ್ ಕೌಂಟಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ನಂತರ, ಪ್ರತಿಯೊಬ್ಬರೂ ಅವನ ಹೊಸ ಅವತಾರವನ್ನ ನೋಡಿ ಆಶ್ಚರ್ಯಗೊಂಡಿದ್ದಾರೆ. ಪೂಜಾರ ಅವರಿಗೆ ಈ ರೀತಿಯಲ್ಲೂ ಬ್ಯಾಟಿಂಗ್ ಮಾಡಲು ಗೊತ್ತಿದೆಯೇ ಎಂಬುದು ಕ್ರಿಕೆಟ್ ಪ್ರೇಮಿಗಳ ಪ್ರಶ್ನೆಯಾಗಿದೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಉತ್ತಮ ಸರಾಸರಿ ಹೊಂದಿರುವ ಚೇತೇಶ್ವರ ಪೂಜಾರ

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಉತ್ತಮ ಸರಾಸರಿ ಹೊಂದಿರುವ ಚೇತೇಶ್ವರ ಪೂಜಾರ

ಲಿಸ್ಟ್ ಎ ಕ್ರಿಕೆಟ್ ನಲ್ಲಿ ಕನಿಷ್ಠ 100 ಇನ್ನಿಂಗ್ಸ್ ಆಡಿದ ಆಟಗಾರರನ್ನು ತೆಗೆದುಕೊಂಡರೆ ವಿಶ್ವ ಕ್ರಿಕೆಟ್ ನಲ್ಲಿ ಚೇತೇಶ್ವರ ಪೂಜಾರ ಐದನೇ ಸ್ಥಾನದಲ್ಲಿದ್ದಾರೆ ಎಂಬುದು ಅಚ್ಚರಿಯ ಸಂಗತಿ. ಆದರೂ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗದಿರುವುದು ಕೂಡ ಅಚ್ಚರಿ ಮೂಡಿಸಿದೆ. ಪೂಜಾರ 55.95ರ ಅದ್ಭುತ ಬ್ಯಾಟಿಂಗ್ ಸರಾಸರಿಯೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ಪಾಕಿಸ್ತಾನದ ನಾಯಕ ಮತ್ತು ರನ್ ಮಷಿನ್ ಬಾಬರ್ ಅಜಮ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಸರಾಸರಿ 56.16ರಷ್ಟಿದೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಬರ್ (56.50)ಗಿಂತ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾನ್ ಮಸೂದ್ (57.13) ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಮಾಜಿ ಆಸ್ಟ್ರೇಲಿಯಾದ ದಂತಕಥೆ ಮತ್ತು ಸೂಪರ್ ಫಿನಿಶರ್ ಮೈಕೆಲ್ ಬೆವನ್ ಇದ್ದು, ಅವರ ಸರಾಸರಿ 57.86ರಷ್ಟಿದೆ.

ಪ್ರಪಂಚದಾದ್ಯಂತ ಕಾಡಿನಲ್ಲಿ 4,000 ಹುಲಿಗಳಿರಬಹುದು, ಆದ್ರೆ ಕೇವಲ ಒಬ್ಬ ರಾಹುಲ್ ದ್ರಾವಿಡ್: ರಾಸ್ ಟೇಲರ್

ಸಸೆಕ್ಸ್‌ ಪರ ಭರ್ಜರಿ ಆಟವಾಡುತ್ತಿರುವ ಪೂಜಾರ

ಸಸೆಕ್ಸ್‌ ಪರ ಭರ್ಜರಿ ಆಟವಾಡುತ್ತಿರುವ ಪೂಜಾರ

ಭಾರತದ ಸೂಪರ್‌ಸ್ಟಾರ್ ಚೇತೇಶ್ವರ್ ಪೂಜಾರ ಪ್ರಸ್ತುತ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಅನ್ನು ಸಸೆಕ್ಸ್ ಪರ ಆಡುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರು ರಾಯಲ್ ಲಂಡನ್ ಒನ್‌ ಡೇ ಕಪ್‌ನಲ್ಲಿ ಮಿಂಚಿನ ಆಟವಾಡುವ ಮೂಲಕ 131 ಎಸೆತಗಳಲ್ಲಿ ಭರ್ಜರಿ 174ರನ್ ಕಲೆಹಾಕುವ ಮೂಲಕ ತಂಡವು ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದಾರೆ.

ತಂಡದ ನಾಯಕ ಟಾಮ್ ಹೈನ್ಸ್‌ ಅನುಪಸ್ಥಿತಿಯಲ್ಲಿ ಸಸೆಕ್ಸ್ ತಂಡವನ್ನ ಮುನ್ನಡೆಸುತ್ತಿರುವ ಚೇತೇಶ್ವರ ಪೂಜಾರ ಸಸೆಕ್ಸ್‌ ತಂಡದ ಪರ ಅಬ್ಬರದ ಆಟವಾಡಿದ್ದಾರೆ. ವಾರ್ವಿಕ್‌ಶೈರ್ ವಿರುದ್ಧದ ಪಂದ್ಯದಲ್ಲಿ 131 ಎಸೆತಗಳಲ್ಲಿ 174 ರನ್ ಗಳಿಸಿದರು. ಇನ್ನಿಂಗ್ಸ್‌ನಲ್ಲಿ 20 ಬೌಂಡರಿ ಹಾಗೂ ಐದು ಸಿಕ್ಸರ್‌ಗಳಿದ್ದವು. ಈ ಪಂದ್ಯವನ್ನು ಸಸೆಕ್ಸ್ 216 ರನ್‌ಗಳಿಂದ ಗೆದ್ದುಕೊಂಡಿತು.

ಏಷ್ಯಾ ಕಪ್ 2022: ದೊಡ್ಡ ದಾಖಲೆಯ ಮೇಲೆ ಕಣ್ಣಿಟ್ಟ ರವೀಂದ್ರ ಜಡೇಜಾ, ಶಕೀಬ್ ಅಲ್ ಹಸನ್

ಇಂಗ್ಲೆಂಡ್ ದೇಶೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ಏಷ್ಯಾದ ಕ್ರಿಕೆಟಿಗ

ಇಂಗ್ಲೆಂಡ್ ದೇಶೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ಏಷ್ಯಾದ ಕ್ರಿಕೆಟಿಗ

ಚೇತೇಶ್ವರ ಪೂಜಾರ ಅವರು ಇಂಗ್ಲೆಂಡ್‌ನಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಏಕದಿನ ಮಾದರಿಯಲ್ಲಿ ಏಷ್ಯನ್ ಆಟಗಾರ ಗಳಿಸಿದ ಗರಿಷ್ಠ ಸ್ಕೋರ್ ದಾಖಲೆಯನ್ನು ಹೊಂದಿದ್ದಾರೆ. ಸಾರ್ವಕಾಲಿಕ ದಾಖಲೆಯನ್ನು ಈ ಹಿಂದೆ ಶ್ರೀಲಂಕಾದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಕುಮಾರ್ ಸಂಗಕ್ಕಾರ ಹೊಂದಿದ್ದರು. 2015ರಲ್ಲಿ ನಾಟಿಂಗ್ ಹ್ಯಾಮ್ ಶೈರ್ ವಿರುದ್ಧ 166 ರನ್ ಗಳಿಸಿದ್ದರು. ಏಳು ವರ್ಷಗಳ ನಂತರ ಪೂಜಾರ ಈ ದಾಖಲೆಯನ್ನು ಮುರಿದಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ದಿಗ್ಗಜ ಜಹೀರ್ ಅಬ್ಬಾಸ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 1984 ರಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಗ್ಲೌಸೆಸ್ಟರ್‌ಶೈರ್‌ ಪರವಾಗಿ 158 ರನ್ ಗಳಿಸಿದರು.

Story first published: Monday, August 15, 2022, 18:09 [IST]
Other articles published on Aug 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X