ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಫೈನಲ್‌: ಕಿವೀಸ್ ಸೋಲಿಗೆ ಪ್ರತಿಕ್ರಿಯಿಸಿದ ಚೇತೇಶ್ವರ್ ಪೂಜಾರ

ICC World Cup 2019 : ಇದನ್ನು ನಾವು ಎಂದೆಂದಿಗೂ ಮರೆಯೊಲ್ಲ..? | Cheteshwar Pujara | Oneindia Kannada
Cheteshwar Pujara has his say on New Zealand’s loss in World Cup final

ನವದೆಹಲಿ, ಜುಲೈ 15: ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರಿನ ನ್ಯೂಜಿಲೆಂಡ್ ಸೋಲಿಗೆ 'ಇದೊಂಥರಾ ಅನ್ಯಾಯ' ಎಂದು ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ವೇಲ್ಸ್‌ನಲ್ಲಿ ಭಾನುವಾರ (ಜುಲೈ 14) ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ವಿಶ್ವಕಪ್‌: ಮೈಖೇಲ್‌ ಕನಸಿನ ತಂಡದಲ್ಲಿ ಯಾರೆಲ್ಲಾ ಇದ್ದಾರೆ?ವಿಶ್ವಕಪ್‌: ಮೈಖೇಲ್‌ ಕನಸಿನ ತಂಡದಲ್ಲಿ ಯಾರೆಲ್ಲಾ ಇದ್ದಾರೆ?

'ನನ್ನ ಪ್ರಕಾರ ಫೈನಲ್‌ನಲ್ಲಿ ಯಾರೂ ಸೋತಿಲ್ಲ. ಎರಡೂ ತಂಡಗಳೂ ಟ್ರೋಫಿ ಹಂಚಿಕೊಂಡಿವೆ. ಆದರೆ ವಿಜೇತ ತಂಡವನ್ನು ಐಸಿಸಿ ನಿರ್ಧರಿಸಿತು. ಅದಕ್ಕಾಗಿ ಉಪಾಯವನ್ನು ಬಳಸಿತು. ವಿಶ್ವಕಪ್‌ ಫೈನಲ್‌ನಲ್ಲಿ ಹೀಗೆ ಹಿಂದೆಂದೂ ನಡೆದಿಲ್ಲ. ಹೀಗಾಗಿ ನನಗೆ ಈ ನಿಯಮದ ಬಗ್ಗೆ ಖಚಿತವಿಲ್ಲ.' ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಆಯೋಜಿಸಿದ್ದ ಕ್ರೀಡಾ ಸಮಾವೇಶದಲ್ಲಿ ಪೂಜಾರ ಹೇಳಿಕೊಂಡಿದ್ದಾರೆ.

ವಿಶ್ವಕಪ್ 2019: ಕೊಹ್ಲಿ-ರೋಹಿತ್ ನಡುವಿನ ಬಿರುಕು ಪರಿಶೀಲಿಸಲಿದೆ ಬಿಸಿಸಿಐ!ವಿಶ್ವಕಪ್ 2019: ಕೊಹ್ಲಿ-ರೋಹಿತ್ ನಡುವಿನ ಬಿರುಕು ಪರಿಶೀಲಿಸಲಿದೆ ಬಿಸಿಸಿಐ!

ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ 22 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿತ್ತು. ನ್ಯೂಜಿಲೆಂಡಗ 16 ಬೌಂಡರಿಗಳನ್ನು ಸಿಡಿಸಿತ್ತು. ರೋಚಕ ಹಂತಕ್ಕೆ ತಲುಪಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ (241 ರನ್) ಸಾಧಿಸಿದ್ದವು. ಸೂಪರ್ ಓವರ್‌ನಲ್ಲೂ ಎರಡೂ ತಂಡಗಳು 15 ರನ್‌ಗಳಿಂದ ಪಂದ್ಯ ಟೈ ಮಾಡಿಕೊಂಡಿದ್ದರಿಂದ ಬೌಂಡರಿ ಸಂಖ್ಯೆಗಳನ್ನು ಪರಿಗಣಿಸಿ ಇಂಗ್ಲೆಂಡನ್ನು ವಿಜಯಿ ಎಂದು ಘೋಷಿಸಲಾಗಿತ್ತು.

ಸೂಪರ್ ಗೇಮ್ : ಒಂದು ಕಪ್. ಒಂದು ಗೆಲುವು, ಎರಡು ತಂಡ ಚಾಂಪಿಯನ್ಸ್ಸೂಪರ್ ಗೇಮ್ : ಒಂದು ಕಪ್. ಒಂದು ಗೆಲುವು, ಎರಡು ತಂಡ ಚಾಂಪಿಯನ್ಸ್

'ಆದರೆ ಈ ನಿಯಮ ನ್ಯೂಜಿಲೆಂಡ್ ಪಾಲಿಗೆ ಕೊಂಚ ಅನ್ಯಾಯ ಮಾಡಿದೆ. ಯಾಕೆಂದರೆ ನ್ಯೂಜಿಲೆಂಡ್ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿತ್ತು. ಈ ಪಂದ್ಯ ಪ್ರತೀ ವಿಶ್ವಕಪ್ ವೇಳೆಯೂ ಖಂಡಿತಾ ನೆನಪಾಗಲಿದೆ.' ಎಂದು ಪೂಜಾರ ಹೇಳಿದ್ದಾರೆ. ಪಂದ್ಯಾಟದಲ್ಲಿ ಬಿಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಸೋತು ನಿರಾಸೆ ಅನುಭವಿಸಿತ್ತು.

Story first published: Monday, July 15, 2019, 19:46 [IST]
Other articles published on Jul 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X