ಟೀಮ್ ಇಂಡಿಯಾದ ನಾಲ್ವರು ಆಟಗಾರರು
ಚೇತೇಶ್ವರ್ ಪೂಜಾರ ಟೀಮ್ ಇಂಡಿಯಾದಿಂದ ಇಬ್ಬರು ಭಾರತೀಯ ಬ್ಯಾಟ್ಸ್ಮನ್ಗಳು ಹಾಗೂ ಓರ್ವ ಸ್ಪಿನ್ ಬೌಲರ್ ಹಾಗೂ ಓರ್ವ ವೇಗಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಸ್ವತಃ ತಮ್ಮನ್ನೇ ಆಯ್ಕೆ ಮಾಡಿದ್ದರೆ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದಾರೆ.
ಇಬ್ಬರು ಬೌಲರ್ಗಳು
ಬೌಲಿಂಗ್ ವಿಭಾಗದಲ್ಲಿ ಭಾರತದ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಚೇತೇಶ್ವರ್ ಪೂಜಾರ ಅವರ ಆಯ್ಕೆಯಾಗಿದ್ದು ಯುವ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಆಡುವ 11ರ ಬಳಗದಲ್ಲಿದ್ದಾರೆ. ರವೀಂದ್ರ ಜಡೇಜಾ 12ನೇ ಆಟಗಾರಾಗಿದ್ದು 13ನೇ ಆಟಗಾರನಾಗಿ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಿದ್ದಾರೆ ಪೂಜಾರ.
ಆಸ್ಟ್ರೇಲಿಯಾದ ಮೂವರು ಆಟಗಾರರು
ಇನ್ನು ಉಳಿದಂತೆ ಆಸ್ಟ್ರೇಲಿಯಾದಿಂದ ಮೂವರು ಆಟಗಾರರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡದಿಂದ ಇಬ್ಬರು ಹಾಗೂ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡದ ತಲಾ ಒಬ್ಬರು ಆಟಗಾರರು ಚೇತೇಶ್ವರ್ ಪೂಜಾರ ಹೆಸರಿಸಿದ ಶ್ರೇಷ್ಠ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಪೂಜಾರ ಹೆಸರಿಸಿದ ತಂಡ ಹೀಗಿದೆ
ಡೇಚಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಬಿಜೆ ವಾಟ್ಲಿಂಗ್(ವಿಕೆಟ್ ಕೀಪರ್) ಆರ್ ಅಶ್ವಿನ್, ಪ್ಯಾಟ್ ಕಮ್ಮಿನ್ಸ್, ಕಗಿಸೋ ರಬಡಾ