ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಕ್ಸಿಂಗ್‌ ಡೇ ಟೆಸ್ಟ್: ದಾಖಲೆಯಲ್ಲಿ ರಾಹುಲ್ ದ್ರಾವಿಡ್ ಬೆನ್ನು ಹಿಡಿದ ಪೂಜಾರ

Cheteshwar Pujara slams fifty at MCG, continues to pursue Rahul Dravid’s record

ಮೆಲ್ಬರ್ನ್, ಡಿಸೆಂಬರ್ 26: ಕ್ರಿಕೆಟ್ ಆಟಕ್ಕಾಗಿ 'ಭಾರತದ ಗೋಡೆ' ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಚೇತೇಶ್ವರ ಪೂಜಾರ ಹಿಂಬಾಲಿಸುತ್ತಿದ್ದಾರೆ. ಮೆಲ್ಬರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ವೇಳೆ ಪೂಜಾರ ಬಾರಿಸಿದ ಅರ್ಧಶತಕ ಅವರನ್ನು ಸಾಧನೆ ಹಾದಿಯಲ್ಲಿ ಕೊಂಡೊಯ್ಯುತ್ತಿದೆ.

ಮೊದಲ ಪಂದ್ಯದಲ್ಲೇ ಮಿಂಚಿದ ಮಯಾಂಕ್ ಬಗ್ಗೆ ಕೋಚ್ ಸಂಭ್ರಮದ ಮಾತುಮೊದಲ ಪಂದ್ಯದಲ್ಲೇ ಮಿಂಚಿದ ಮಯಾಂಕ್ ಬಗ್ಗೆ ಕೋಚ್ ಸಂಭ್ರಮದ ಮಾತು

ಟೆಸ್ಟ್ ಕ್ರಿಕೆಟ್‌ಗಾಗಿ ಗಮನ ಸೆಳೆದಿರುವ ಪೂಜಾರ ಇತ್ತೀಚೆಗಂತೂ ರಾಹುಲ್ ದ್ರಾವಿಡ್ ಆಟ ನೆನಪಿಸುವಂತ ಪ್ರದರ್ಶನ ನೀಡುತ್ತಿದ್ದಾರೆ. ಕೊಂಚ ಕಾಲ ಪೂಜಾರ ಕ್ರೀಸ್‌ಗೆ ಅಂಟಿ ನಿಂತರೆಂದರೆ ಮತ್ತೆ ಅರ್ಧಶತಕ ಅಥವಾ ಶತಕ ಬಾರಿಸೋದು ಖಚಿತ ಎಂಬಂತ ಆಟವನ್ನೀಗ ಪೂಜಾರ ಪ್ರದರ್ಶಿಸುತ್ತಿದ್ದಾರೆ.

ಟಿ20ಗೆ ಧೋನಿ ಸೇರ್ಪಡೆ, ಏಕದಿನದಿಂದ ಪಂತ್‌ ಕಿಕ್‌ಔಟ್ ಗುಟ್ಟು ರಟ್ಟು!ಟಿ20ಗೆ ಧೋನಿ ಸೇರ್ಪಡೆ, ಏಕದಿನದಿಂದ ಪಂತ್‌ ಕಿಕ್‌ಔಟ್ ಗುಟ್ಟು ರಟ್ಟು!

ಅಡಿಲೇಡ್ ಟೆಸ್ಟ್ ನಲ್ಲಿ ಭಾರತ 31 ರನ್‌ನಿಂದ ಗೆಲ್ಲುವಲ್ಲಿ ಪೂಜಾರ ಅವರ ಶತಕದ ಕೊಡುಗೆ ಪ್ರಮುಖವಾಗಿತ್ತು. ಈ ವೇಳೆ 123 ರನ್ ಬಾರಿಸಿ ಭಾರತವನ್ನು ರನ್ ಕುಸಿತದಿಂದ ಪಾರು ಮಾಡಿದ್ದರಲ್ಲದೆ, ಭಾರತದ ಕ್ರಿಕೆಟ್ ಅಭಿಮಾನಿಗಳಿಂದ ರಾಹುಲ್ ದ್ರಾವಿಡ್-2 ಅಂತ ಕರೆಸಿಕೊಂಡಿದ್ದರು ಪೂಜಾರ.

ದ್ರಾವಿಡ್ ಬೆನ್ನಲ್ಲಿ ಪೂಜಾರ

ದ್ರಾವಿಡ್ ಬೆನ್ನಲ್ಲಿ ಪೂಜಾರ

ಅಡಿಲೇಡ್ ನಲ್ಲಿ ಬುಧವಾರ (ಡಿಸೆಂಬರ್ 26) ಆರಂಭಗೊಂಡ ಭಾರತ-ಆಸೀಸ್ ನಡುವಿನ ಮೂರನೇ ಟೆಸ್ಟ್‌ನಲ್ಲಿ ಪೂಜಾರ ಅರ್ಧಶತಕ (68 ರನ್) ಬಾರಿಸಿದ್ದರು. ಇದು ಪೂಜಾರ ಅವರಿಂದಾದ 19ನೇ ಅರ್ಧಶತಕ. ಹೀಗಾಗಿ ಚೇತೇಶ್ವರ, ಭಾರತದ ಟೆಸ್ಟ್ ಸಾಧಕರ ಸಾಲಿನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಗ್ರ ದ್ಥಾನದಲ್ಲಿ ದ್ರಾವಿಡ್ ಇದ್ದಾರೆ. ಡಿಸೆಂಬರ್ 26ರ ದಿನದಾಂತ್ಯಕ್ಕೆ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಭಾರತ 2 ವಿಕೆಟ್ ಕಳೆದು 215 ರನ್ ಗಳಿಸಿತ್ತು.

28 ಶತಕದ ಸಾಧನೆ

28 ಶತಕದ ಸಾಧನೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಪಂದ್ಯ, ಅರ್ಧಶತಕ ಮತ್ತು ಶತಕದ ಸಾಧನೆಯನ್ನು ಪರಿಗಣಿಸಿದರೆ ಭಾರತೀಯರಲ್ಲಿ ರಾಹುಲ್ ದ್ರಾವಿಡ್ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟು 135 ಪಂದ್ಯಗಳನ್ನಾಡಿರುವ ದ್ರಾವಿಡ್ 50 ಅರ್ಧಶತಕ, 28 ಶತಕದ ಸಾಧನೆ ಮಾಡಿದ್ದಾರೆ.

ಇಂಡಿಯನ್‌ ವಾಲ್‌-2

ಇಂಡಿಯನ್‌ ವಾಲ್‌-2

ಇಂಡಿಯನ್‌ ವಾಲ್‌-2 ಎಂದು ಕರೆಯಲ್ಪಡುತ್ತಿರುವ ಚೇತೇಶ್ವರ್ ಒಟ್ಟು 61 ಪಂದ್ಯಗಳಲ್ಲಿ 19 ಅರ್ಧಶತಕ, 15 ಶತಕವನ್ನು ಪೂರೈಸಿದ್ದಾರೆ. ಆಸೀಸ್-ಭಾರತ ಮೂರನೇ ಟೆಸ್ಟ್ ನಲ್ಲಿ ಪೂಜಾರ (ಡಿಸೆಂಬರ್ 26ರ ದಿನದಾಂತ್ಯಕ್ಕೆ) ಕ್ರೀಸ್‌ನಲ್ಲಿ ಇರುವುದರಿಂದ ಶತಕ ಬಾರಿಸುವ ನಿರೀಕ್ಷೆಯಿದೆ. ನಾಯಕ ವಿರಾಟ್ ಕೊಹ್ಲಿ ಕೂಡ (47 ರನ್) ಕ್ರೀಸ್‌ನಲ್ಲಿದ್ದರು.

ವಿಶ್ವ ರ್ಯಾಂಕಿಂಗ್‌ನಲ್ಲಿ 4ನೇ

ವಿಶ್ವ ರ್ಯಾಂಕಿಂಗ್‌ನಲ್ಲಿ 4ನೇ

ಭಾರತೀಯ ಟೆಸ್ಟ್ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಎಂ ಅಮರ್‌ನಾಥ್, ಡಿಬಿ ವೆಂಗ್‌ಸರ್ಕಾರ್ ನಾಲ್ಕನೇ ಸ್ಥಾನದಲ್ಲಿ, ಎಎಲ್ ವಾಡೇಕರ್ ಐದನೇ ಸ್ಥಾನದಲ್ಲಿದ್ದಾರೆ. ಸದ್ಯ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಪೂಜಾರ ನಾಲ್ಕನೇ ಸ್ಥಾನಿಗ.

Story first published: Wednesday, December 26, 2018, 16:07 [IST]
Other articles published on Dec 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X