ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೃತ್ತಿ ಜೀವನದ ಚೊಚ್ಚಲ ಟಿ20 ಶತಕ ಚಚ್ಚಿದ ಟೆಸ್ಟ್ ಸ್ಟಾರ್ ಪೂಜಾರ!

Cheteshwar Pujara slams maiden T20 hundred off 61 balls

ಇಂದೋರ್, ಫೆಬ್ರವರಿ 21: ಟೆಸ್ಟ್ ಕ್ರಿಕೆಟ್‌ನ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಈ ಹಿಂದೆ ಟಿ20ಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದಿಲ್ಲ. ಆದರೆ ಗುರುವಾರ (ಫೆಬ್ರವರಿ 21) ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 1ನೇ ಸುತ್ತಿನ ಗ್ರೂಪ್ ಸಿ ಪಂದ್ಯದಲ್ಲಿ ಪೂಜಾರ ಶತಕ ಬಾರಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್

ರೈಲ್ವೇಸ್ ಮತ್ತು ಸೌರಾಷ್ಟ್ರ ತಂಡಗಳ ನಡುವಿನ ಟಿ20 ಪಂದ್ಯದಲ್ಲಿ ಸೌರಾಷ್ಟ್ರ ಪ್ರತಿನಿಧಿಸಿದ್ದ ಚೇತೇಶ್ವರ 61 ಎಸೆತಗಳಿಗೆ ಭರ್ತಿ 100 ರನ್ ಗಳಿಸಿದರು. ಇದು ಪೂಜಾರ ಅವರಿಂದಾಗ ಚೊಚ್ಚಲ ಟಿ20 ಶತಕ. ಆದರೆ ಈ ಪಂದ್ಯವನ್ನು ರೈಲ್ವೇಸ್ ತಂಡ 5 ವಿಕೆಟ್ ಗಳಿಂದ ಗೆದ್ದುಕೊಂಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೌರಾಷ್ಟ್ರ, ಹಾರ್ವಿಕ್ ದೇಸಾಯ್ 34, ಪೂಜಾರ 100, ಕನ್ನಡಿಗ ರಾಬಿನ್ ಉತ್ತಪ್ಪ 46 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 188 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ರೈಲ್ವೇಸ್, ಮೃಣಾಲ್ ದೇವಧಾರ್ 49, ಪ್ರಥಮ್ ಸಿಂಗ್ 40, ಅಭಿನವ್ ದೀಕ್ಷಿತ್ 37 ರನ್ ಬೆಂಬಲದೊಂದಿಗೆ 19.4 ಓವರ್‌ಗೆ 5 ವಿಕೆಟ್ ಕಳೆದು 190 ರನ್ ಬಾರಿಸಿತು.

ಗೇಲ್ ಅಬ್ಬರ ವ್ಯರ್ಥಗೊಳಿಸಿದ ರಾಯ್-ರೂಟ್, ಇಂಗ್ಲೆಂಡ್‌ಗೆ ದಾಖಲೆ ಜಯ!ಗೇಲ್ ಅಬ್ಬರ ವ್ಯರ್ಥಗೊಳಿಸಿದ ರಾಯ್-ರೂಟ್, ಇಂಗ್ಲೆಂಡ್‌ಗೆ ದಾಖಲೆ ಜಯ!

114 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಪೂಜಾರ 51.19ರ ಸರಾಸರಿಯಲ್ಲಿ 5,426 ರನ್ ಕಲೆ ಹಾಕಿದ್ದಾರೆ. 206 ವೈಯಕ್ತಿಯ ಅಧಿಕ ರನ್ ಬಾರಿಸಿದ್ದಾರೆ. ಆದರೆ 22 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 390 ಒಟ್ಟು ರನ್ ಮತ್ತು 51 ವೈಯಕ್ತಿಕ ಅತ್ಯಧಿಕ ರನ್ ಬಾರಿಸಿದ್ದರು. ಪೂಜಾರ ಪಾಲಿಗೆ ಈ ಟಿ20 ಶತಕ ವೃತ್ತಿ ಜೀವನದ ಶ್ರೇಷ್ಠ ಟಿ20 ಸಾಧನೆಯಾಗಿದೆ.

Story first published: Thursday, February 21, 2019, 15:23 [IST]
Other articles published on Feb 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X