ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತೇಶ್ವರ ಪೂಜಾರ ವಿಕೆಟ್ ನಮಗೆ ಬಹಳ ಮುಖ್ಯ: ಜೋ ರೂಟ್

Cheteshwar Pujara will be a huge wicket for us, says Joe Root

ಚೆನ್ನೈ: ಫೆಬ್ರವರಿ 5ರಿಂದ ಭಾರತ-ಇಂಗ್ಲೆಂಡ್ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಭಾರತದ ಟೆಸ್ಟ್ ಸ್ಪೆಷಾಲಿಷ್ಟ್ ಚೇತೇಶ್ವರ ಪೂಜಾರ ಅವರಿಗೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲುವ ವಿಶೇಷ ಸಾಮರ್ಥ್ಯವಿದೆ. ಇದೇ ಕಾರಣಕ್ಕೆ ಪೂಜಾರ ವಿಕೆಟ್ ನಮಗೆ ತುಂಬಾ ಪ್ರಮುಖ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.

ಕ್ರಿಸ್‌ ಗೇಲ್ ಬ್ಯಾಟಿಂಗ್ ಆರ್ಭಟಕ್ಕೆ ಶರಣಾದ ಮರಾಠಾ ಅರೇಬಿಯನ್ಸ್!ಕ್ರಿಸ್‌ ಗೇಲ್ ಬ್ಯಾಟಿಂಗ್ ಆರ್ಭಟಕ್ಕೆ ಶರಣಾದ ಮರಾಠಾ ಅರೇಬಿಯನ್ಸ್!

ಚೇತೇಶ್ವರ ಪೂಜಾರ ಅವರನ್ನು ಭಾರತೀಯ ಅಭಿಮಾನಿಗಳು 'ಗ್ರೇಟ್‌ ವಾಲ್-2' ಎಂದು ಕರೆಯತೊಡಗಿದ್ದಾರೆ. 'ಗ್ರೇಟ್ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಬಳಿಕ ಕ್ರೀಸ್‌ನಲ್ಲಿ ಹೆಚ್ಚು ಕಾಲ ನಿಲ್ಲುವ ಸಾಮರ್ಥ್ಯ ತೋರಿಕೊಂಡಿದ್ದು ಪೂಜಾರ ಒಬ್ಬರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲೂ ಪೂಜಾರ ಬೌಲರ್‌ಗಳ ಬೆವರಿಳಿಸಿದ್ದರು. ಸರಣಿಯಲ್ಲಿ ಒಟ್ಟು ಮೂರು ಅರ್ಧ ಶತಕಗಳನ್ನು ಬಾರಿಸಿದ್ದ ಪೂಜಾರ ಇದಕ್ಕಾಗಿ 900ಕ್ಕೂ ಎಸೆತಗಳನ್ನು ಬಳಸಿಕೊಂಡಿದ್ದರು. ಹೀಗಾಗಿ ಟೆಸ್ಟ್ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಳ್ಳಲು ಅನುಕೂಲವಾಗಿತ್ತು.

ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಬೌಲಿಂಗ್‌ನಲ್ಲಿ ಬೆಸ್ಟ್ ಯಾರು ಗೊತ್ತಾ?!ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಬೌಲಿಂಗ್‌ನಲ್ಲಿ ಬೆಸ್ಟ್ ಯಾರು ಗೊತ್ತಾ?!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋ ರೂಟ್, 'ಚೇತೇಶ್ವರ ಪೂಜಾರ ಒಬ್ಬ ಅದ್ಭುತ ಆಟಗಾರ. ಆತನ ಜೊತೆಗಿದ್ದು ಆಡುವ ಖುಷಿ ನನಗೆ ಒಂದಿಷ್ಟು ಪಂದ್ಯಗಳಲ್ಲಿ ಸಿಕ್ಕಿದೆ ಅದು ಯಾರ್ಕ್‌ಶೈರ್‌ನಲ್ಲಿದ್ದಾಗ. ಆತನ ಜೊತೆಗಿದ್ದಾಗ ಕಲಿಯೋದು ಸಾಧ್ಯವಾಗುತ್ತದೆ. ಆಟದೆಡೆಗಿನ ಅವರ ಪ್ರೀತಿಯ ಬಗ್ಗೆಯೂ ಮಾತನಾಡಿದ್ದೇನೆ. ಅವೆಲ್ಲ ಆಸಕ್ತಿಕರವಾಗಿದೆ,' ಎಂದಿದ್ದಾರೆ.

Story first published: Thursday, February 4, 2021, 17:04 [IST]
Other articles published on Feb 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X