ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸ್‌ಗಾಗಿ ಐಪಿಎಲ್‌ನಲ್ಲಿ ಇತಿಹಾಸ ಬರೆದ ಯುನಿವರ್ಸ್ ಬಾಸ್ ಕ್ರಿಸ್‌ಗೇಲ್

Chris Gayle 1st batsman to hit 300 sixes in IPL history

ಮೊಹಾಲಿ, ಮಾರ್ಚ್ 30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತ್ಯಧಿಕ ಸಿಕ್ಸ್‌ಗಾಗಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ಗೇಲ್ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ 300 ಸಿಕ್ಸ್‌ ಬಾರಿಸಿದ ಮೊದಲ ಬ್ಯಾಟ್ಸ್ಮನ್‌ ಆಗಿ ಗೇಲ್ ದಾಖಲೆ ಬರೆದಿದ್ದಾರೆ. ಶನಿವಾರ (ಮಾರ್ಚ್ 30) ನಡೆದ ಪಂಜಾಬ್ vs ಮುಂಬೈ ಪಂದ್ಯದ ವೇಳೆ ಗೇಲ್ ಈ ಸಾಧನೆ ಮಾಡಿದರು.

ಯುವಿ ಬ್ಯಾಟಿಂಗ್‌ಗೆ ಒಂದುಕ್ಷಣ ನಾನೇ ಸ್ಟುವರ್ಟ್ ಬ್ರಾಡ್‌ ಅನ್ನಿಸಿತು: ಚಾಹಲ್ಯುವಿ ಬ್ಯಾಟಿಂಗ್‌ಗೆ ಒಂದುಕ್ಷಣ ನಾನೇ ಸ್ಟುವರ್ಟ್ ಬ್ರಾಡ್‌ ಅನ್ನಿಸಿತು: ಚಾಹಲ್

ಶನಿವಾರದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಗೇಲ್ 24 ಎಸೆತಗಳಿಗೆ 40 ರನ್ ಬಾರಿಸಿದರು. ಇದರಲ್ಲಿ 3 ಬೌಂಡರಿ ಮತ್ತು 4 ಸಿಕ್ಸ್‌ಗಳೂ ಸೇರಿದ್ದವು. ಸದ್ಯ ಐಪಿಎಲ್‌ನಲ್ಲಿ ಒಟ್ಟು 302 ಸಿಕ್ಸ್‌ಗಳ ದಾಖಲೆ ಗೇಲ್ ಹೆಸರಿನಲ್ಲಿದೆ.

ಐಪಿಎಲ್ ಅತ್ಯಧಿಕ ಸಿಕ್ಸ್‌ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) 192 ಸಿಕ್ಸ್ ಮತ್ತು ತೃತೀಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂಎಸ್ ಧೋನಿ 187 ಸಿಕ್ಸ್‌ ದಾಖಲೆ ಹೊಂದಿದ್ದಾರೆ.

ಸ್ಮಿತ್-ವಾರ್ನರ್ ನಿಷೇಧ ಅಂತ್ಯ, ಆಸ್ಟ್ರೇಲಿಯಾ ವಿಶ್ವಕಪ್ ತಂಡಕ್ಕೆ ಆಯ್ಕೆ?ಸ್ಮಿತ್-ವಾರ್ನರ್ ನಿಷೇಧ ಅಂತ್ಯ, ಆಸ್ಟ್ರೇಲಿಯಾ ವಿಶ್ವಕಪ್ ತಂಡಕ್ಕೆ ಆಯ್ಕೆ?

ಹೀಗಾಗಿ ಐಪಿಎಲ್‌ನಲ್ಲಿ ಸಿಕ್ಸ್ ವಿಚಾರದಲ್ಲಿ ಗೇಲ್ ಸಮೀಪ ಸುಳಿದವರೇ ಸದ್ಯಕ್ಕಿಲ್ಲ. ಐಪಿಎಲ್ 114 ಇನ್ನಿಂಗ್ಸ್‌ಗಳಲ್ಲಿ 4,133 ರನ್ ಕಲೆ ಹಾಕಿರುವ ಗೇಲ್, 302 ಸಿಕ್ಸ್‌, 337 ಬೌಂಡರಿಗಳನ್ನು ಬಾರಿಸಿದ್ದಾರೆ. ಐಪಿಎಲ್‌ ಇನ್ನಿಂಗ್ಸ್‌ ಒಂದರಲ್ಲಿ 175 ವೈಯಕ್ತಿಕ ಅತ್ಯಧಿಕ ರನ್ ದಾಖಲೆಯೂ ಯುನಿವರ್ಸಲ್ ಬಾಸ್ ಹೆಸರಿನಲ್ಲಿದೆ.

Story first published: Saturday, March 30, 2019, 19:27 [IST]
Other articles published on Mar 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X