ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗೆ ಗೌರವ ಸಿಗಲಿಲ್ಲ; IPL 2022 ರಿಂದ ಹಿಂದೆ ಸರಿದ ಬಗ್ಗೆ ಬಾಯ್ಬಿಟ್ಟ ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ 15ನೇ ಆವೃತ್ತಿಯಿಂದ ಹೊರಗುಳಿಯುವ ನಿರ್ಧಾರದ ಕಾರಣವನ್ನು ತೆರೆದಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತನ್ನನ್ನು ಸರಿಯಾಗಿ ನಡೆಸಿಕೊಳ್ಳಲಾಗಿಲ್ಲ ಮತ್ತು ನನಗೆ ಅರ್ಹವಾದ ಗೌರವ ಸಿಗಲಿಲ್ಲ ಎಂದು ಹೇಳಿದ್ದಾರೆ.

ಐಪಿಎಲ್ ಆರಂಭವಾದಾಗಿನಿಂದ ದೊಡ್ಡ ಸ್ಟಾರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಕ್ರಿಸ್ ಗೇಲ್ ಐಪಿಎಲ್ 2022 ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸರಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಸೇರಿದಂತೆ ವಿಶ್ವದ ಶ್ರೀಮಂತ ಲೀಗ್‌ನಲ್ಲಿ ಕ್ರಿಸ್ ಗೇಲ್ ಮೂರು ತಂಡಗಳಿಗಾಗಿ ಆಡಿದ್ದಾರೆ.

Chris Gayle Hits Out At IPL For Lack Of Respect: I Wasnt Been Treated Properly For Few Years

ಕಳೆದೆರಡು ವರ್ಷಗಳ ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಅಂತಿಮ ಹನ್ನೊಂದರ ಬಳಗದ ಖಾಯಂ ಸದಸ್ಯನಾಗಿರಲಿಲ್ಲ ಮತ್ತು ಬಯೋ-ಬಬಲ್ ಆಯಾಸದಿಂದಾಗಿ IPL 2021ರ ಸೆಕೆಂಡ್ ಹಾಫ್‌ನಿಂದ ಹಿಂದಿರುಗಿದರು.

ಕಳೆದ ಕೆಲವು ವರ್ಷಗಳಲ್ಲಿ ಕ್ರಿಸ್ ಗೇಲ್ ಐಪಿಎಲ್ ಪಂದ್ಯಾವಳಿಯ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಈ ಸ್ಟಾರ್ ಬ್ಯಾಟ್ಸ್‌ಮನ್ ಆರು ಶತಕ ಗಳಿಸಿದ್ದಾರೆ. ಇದು ಯಾವುದೇ ಬ್ಯಾಟ್ಸ್‌ಮನ್‌ಗಳಿಗಿಂತ ಅತಿ ಹೆಚ್ಚು ಮತ್ತು 142 ಪಂದ್ಯಗಳಲ್ಲಿ 4965 ರನ್‌ ಬಾರಿಸಿದ್ದಾರೆ. ಕ್ರಿಸ್ ಗೇಲ್ ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲಿ ಸಾರ್ವಕಾಲಿಕ ಏಳನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

RCB vs SRH Preview: ಪ್ರಿವ್ಯೂ, ಪಿಚ್ ರಿಪೋರ್ಟ್, ಹವಾಮಾನ ವರದಿRCB vs SRH Preview: ಪ್ರಿವ್ಯೂ, ಪಿಚ್ ರಿಪೋರ್ಟ್, ಹವಾಮಾನ ವರದಿ

"ಕಳೆದ ಎರಡು ವರ್ಷಗಳಿಂದ ಐಪಿಎಲ್ ನಡೆಯುತ್ತಿದ್ದಾಗ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ನಾನು ಭಾವಿಸಿದೆ,'' ಎಂದು ಗೇಲ್ ಹೇಳಿರುವುದಾಗಿ ದಿ ಮಿರರ್ ವರದಿ ಮಾಡಿದೆ.

Chris Gayle Hits Out At IPL For Lack Of Respect: I Wasnt Been Treated Properly For Few Years

"ಆದ್ದರಿಂದ ನಾನು (ಕ್ರಿಸ್ ಗೇಲ್) ಕ್ರೀಡೆ ಮತ್ತು ಐಪಿಎಲ್‌ಗಾಗಿ ಇಷ್ಟೆಲ್ಲಾ ಮಾಡಿದ ನಂತರವೂ ಅರ್ಹವಾದ ಗೌರವ ಸಿಗಲಿಲ್ಲ ಎಂದು ನಾನು ಭಾವಿಸಿದೆ. ಹಾಗಾಗಿ ನಾನು ಐಪಿಎಲ್ ಹರಾಜಿಗೆ ನಾನು ನೋಂದಾಯಿಸಿಕೊಳ್ಳಲು ಚಿಂತಿಸಲಿಲ್ಲ. ಹಾಗಾಗಿ ನಾನು ಅದನ್ನು ಅಲ್ಲಿಗೆ ಬಿಟ್ಟಿದ್ದೇನೆ. ಕ್ರಿಕೆಟ್ ನಂತರದ ಜೀವನ ಯಾವಾಗಲೂ ಇರುತ್ತದೆ, ನಾನು ಸಾಮಾನ್ಯ ಜೀವನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ," ಎಂದು ಹೇಳಿಕೊಂಡಿದ್ದಾರೆ.

ಕ್ರಿಸ್ ಗೇಲ್ ಕೊನೆಯದಾಗಿ ವೆಸ್ಟ್ ಇಂಡೀಸ್ ತಂಡಕ್ಕಾಗಿ ಐಸಿಸಿ ಪುರುಷರ ಟಿ20 ವಿಶ್ವಕಪ್ 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬುಧಾಬಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಅಲ್ಲದೆ, ಅವರು ಕೊನೆಯ ಬಾರಿಗೆ 2022ರ ಫೆಬ್ರವರಿ 18ರಂದು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನಲ್ಲಿ ಟಿ20 ಕ್ರಿಕೆಟ್ ಆಡಿದರು.

Story first published: Monday, May 9, 2022, 9:48 [IST]
Other articles published on May 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X