ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಅಪರೂಪದ ದಾಖಲೆ ಬರೆಯಲು ಕ್ರಿಸ್ ಗೇಲ್ ಸಜ್ಜು

Chris Gayle is all set create unique record in internation cricket

ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿದೆ. ಶ್ರೀಲಂಕಾ ವಿರುದ್ಧ ಮಾರ್ಚ್‌ನಲ್ಲಿ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಗಳು ಇದೆ. ಹಾಗಾದಲ್ಲಿ ಎರಡು ವರ್ಷಗಳ ನಂತರ ರಾಷ್ಟ್ರೀಯ ತಂಡದಲ್ಲಿ ಗೇಲ್ ಕಾಣಿಸಿಕೊಂಡಂತಾಗುತ್ತದೆ.

ಕ್ರಿಸ್ ಗೇಲ್ ಮತ್ತೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದರೆ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಅಪರೂಪದ ದಾಖಲೆಯೊಂದನ್ನು ಬರೆದಂತಾಗುತ್ತದೆ. ನಾಲ್ಕು ಪ್ರತ್ಯೇಕ ದಶಕಗ ಅವಧಿಯಲ್ಲಿ ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ವಿಶ್ವದ ಕೇವಲ ನಾಲ್ಕನೇ ಆಟಗಾರ ಎಂಬ ದಾಖಲೆಗೆ ಕ್ರಿಸ್ ಗೇಲ್ ಪಾತ್ರರಾಗಲಿದ್ದಾರೆ.

ಆನ್‌ಫೀಲ್ಡ್ ಪ್ರದರ್ಶನ ಹೊರತು ಕ್ರೀಡೆ ಮತ್ತೇನೂ ಗುರುತಿಸಲಾರದು: ಸಚಿನ್ಆನ್‌ಫೀಲ್ಡ್ ಪ್ರದರ್ಶನ ಹೊರತು ಕ್ರೀಡೆ ಮತ್ತೇನೂ ಗುರುತಿಸಲಾರದು: ಸಚಿನ್

ಈವರೆಗೆ ವಿಶ್ವ ಕ್ರಿಕೆಟ್‌ನಲ್ಲಿ ನಾಲ್ಕು ಪ್ರತ್ಯೇಕ ದಶಕದ ಅವಧಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಮೂವರು ಆಟಗಾರರು ಕೂಡ ಏಷ್ಯಾ ಮೂಲದ ಕ್ರಿಕೆಟಿಗರೇ ಆಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಏಷ್ಯಾ ಹೊರತಾದ ಆಟಗಾರನೋರ್ವ ಈ ದಾಖಲೆಯನ್ನು ಮಾಡಿದಂತಾಗುತ್ತದೆ. ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ ಹಾಗೂ ಪಾಕಿಸ್ತಾನದ ಆಲ್‌ರೌಂಡರ್ ಶೋಯೆಬ್ ಮಲಿಕ್ ನಾಲ್ಕು ಪ್ರತ್ಯೇಕ ದಶಕಗಳಲ್ಲಿ ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಆಟಗಾರರಾಗಿದ್ದಾರೆ.

1989ರಲ್ಲಿ ತಮ್ಮ ತಮ್ಮ ದೇಶಗಳನ್ನು ಮೊದಲ ಬಾರಿಗೆ ಪ್ರತಿನಿಧಿಸಿದ ಸಚಿನ್ ಹಾಗೂ ಜಯಸೂರ್ಯ 80, 90 2000, 2010 ರಿಂದ ಆರಂಭವಾಗುವ ದಶಕಗಳಲ್ಲಿ ತಮ್ಮ ತಂಡವನ್ನು ಪ್ರತಿನಿಧಿಸಿದ್ದರು. ಮಲಿಕ್ 1999ರಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದು 90, 2000, 2010 ಹಾಗೂ 2020ರಿಂದ ಆರಂಭವಾಗುವ ದಶಕಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದಾರೆ. ಕ್ರಿಸ್ ಗೇಲ್ ಕೂಡ 1999ರಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

'ಆರ್ ಅಶ್ವಿನ್ ವೈಟ್ ಬಾಲ್ ಕ್ರಿಕೆಟ್‌ನ ಭಾಗವಾಗದಿರುವುದು ದುರದೃಷ್ಟಕರ'
ಮಾರ್ಚ್‌ನಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಈ ವಾತಾಂತ್ಯದಲ್ಲಿ ಪ್ರಕಟಿಸುವ ಸಾಧ್ಯತೆಗಳಿದೆ. ಆದರೆ ಸದ್ಯ ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಗೇಲ್ ಈ ಟೂರ್ನಿಯನ್ನು ಮೊಟಕುಗೊಳಿಸಿ ಕೆರೀಬಿಯನ್‌ಗೆ ಮರಳಲಿದ್ದಾರೆ. ಇದು ರಾಷ್ಟ್ರೀಯ ತಂಡದ ಕರೆಯ ಸೂಚನೆಯನ್ನು ಬಿಂಬಿಸುತ್ತಿದೆ.

Story first published: Tuesday, February 23, 2021, 20:30 [IST]
Other articles published on Feb 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X