ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಕೊಳ್ಳೋರೇ ಇಲ್ಲ!

Chris Gayle, Lasith Malinga find no takers in The Hundred draft

ಲಂಡನ್, ಅಕ್ಟೋಬರ್ 21: ವಿಶ್ವಶ್ರೇಷ್ಠ ಸ್ಫೋಟಕ ಬ್ಯಾಟ್ಸ್‌ಮನ್, ವೆಸ್ಟ್‌ ಇಂಡೀಸ್‌ನ ದೈತ್ಯ ಕ್ರಿಸ್‌ ಗೇಲ್ ಅವರನ್ನು ಇಂಗ್ಲೆಂಡ್‌ನ ಟಿ20 ಕ್ರಿಕೆಟ್‌ ಮಾದರಿಯ ಟೂರ್ನಿ 'ದ ಹಂಡ್ರೆಡ್‌'ಗೆ ಖರೀದಿಸಲು ಯಾವುದೇ ಫ್ರಾಂಚೈಸಿಗಳು ಮುಂದಾಗಿಲ್ಲ. ಗೇಲ್ ಜೊತೆ ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಕೂಡ ಮೊದಲ ಸುತ್ತಿನಲ್ಲಿ ಸೇಲಾಗದೆ ಉಳಿದಿದ್ದಾರೆ.

ಡಾನ್ ಬ್ರಾಡ್ಮನ್, ಸಚಿನ್ ದಾಖಲೆ ಧೂಳಿಪಟ ಮಾಡಿದ ರೋಹಿತ್ ಶರ್ಮಾಡಾನ್ ಬ್ರಾಡ್ಮನ್, ಸಚಿನ್ ದಾಖಲೆ ಧೂಳಿಪಟ ಮಾಡಿದ ರೋಹಿತ್ ಶರ್ಮಾ

2020ರಲ್ಲಿ ನಡೆಸಲುದ್ದೇಶಿಸಿರುವ 'ದ ಹಂಡ್ರೆಡ್' ಟೂರ್ನಿಗಾಗಿ ನಡೆದ ಮೊದಲ ಸುತ್ತಿನ ಆಟಗಾರರ ಹರಾಜಿನಲ್ಲಿ ಗೇಲ್, ಮಾಲಿಂಗ್ ಸೇರಿದಂತೆ ಟಿ20ಐನಲ್ಲಿನ ನಂ.1 ಬ್ಯಾಟ್ಸ್‌ಮನ್ ಪಾಕಿಸ್ತಾನದ ಬಾಬರ್ ಅಝಮ್ ಅವರನ್ನೂ ಫ್ರಾಂಚೈಸಿಗಳು ಖರೀದಿಸಲು ಮುಂದಾಗಿಲ್ಲ.

10 ಎಸೆತಗಳಲ್ಲಿ 5 ಸಿಕ್ಸ್‌ ಚಚ್ಚಿದ ವೇಗಿ ಉಮೇಶ್ ಯಾದವ್: ವೈರಲ್ ವೀಡಿಯೋ10 ಎಸೆತಗಳಲ್ಲಿ 5 ಸಿಕ್ಸ್‌ ಚಚ್ಚಿದ ವೇಗಿ ಉಮೇಶ್ ಯಾದವ್: ವೈರಲ್ ವೀಡಿಯೋ

ಅಫ್ಘಾನಿಸ್ಥಾನ ಸ್ಪಿನ್ನರ್ ರಶೀದ್ ಖಾನ್ ಮೊದಲ ಸುತ್ತಿನಲ್ಲೇ ಟ್ರೆಂಡ್ ರಾಕೆಟ್ಸ್ ಪಾಲಾಗಿದ್ದಾರೆ.

ಸೇಲಾಗದೆ ಉಳಿದವರು

ಸೇಲಾಗದೆ ಉಳಿದವರು

ಅಲ್ಲದೆ ವೆಸ್ಟ್‌ ಇಂಡೀಸ್ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೊ (ವಿಂಡೀಸ್), ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ), ತಮೀಮ್ ಇಕ್ಬಾಲ್ (ಬಾಂಗ್ಲಾದೇಶ), ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ) ಇವರೆಲ್ಲ ಮೊದಲ ಸುತ್ತಿನಲ್ಲಿ ಖರೀದಿಯಾಗದೆ ಉಳಿದ ಇನ್ನಿತರ ಖ್ಯಾತ ಕ್ರಿಕೆಟ್‌ ಆಟಗಾರರು.

125,000 ಪೌಂಡ್ ಮುಖಬೆಲೆ

125,000 ಪೌಂಡ್ ಮುಖಬೆಲೆ

125,000 ಪೌಂಡ್‌ (ಸುಮಾರು 1,14,50,158 ರೂ.) ಮೂಲ ಬೆಲೆಯ ಗೇಲ್‌ ಮತ್ತು ಮಾಲಿಂಗ ಅವನ್ನು ಖರೀದಿಸಲು ಫ್ರಾಂಚೈಸಿಗಳು ಮುಂದಾಗಿಲ್ಲ. ಆದರೆ ಇದೇ ಮುಖ ಬೆಲೆ ಹೊಂದಿರುವ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಖರೀದಿಸಲ್ಪಟ್ಟಿದ್ದಾರೆ.

ಆರಿಸಲ್ಪಟ್ಟವರು

ಆರಿಸಲ್ಪಟ್ಟವರು

ಸ್ಟಾರ್ಕ್, ಮತ್ತು ಸ್ಮಿತ್ (ವೆಲ್ಷ್ ಫೈರ್‌), ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್ (ಸದರ್ನ್ ಬ್ರೇವ್), ಆಸೀಸ್‌ನ ಆ್ಯರನ್ ಫಿಂಚ್, ಅಫ್ಘಾನ್‌ನ ಮುಜೀಬ್ ಉರ್ ರಹಮಾನ್ (ನಾರ್ತರ್ನ್ ಸೂಪರ್ ಚಾರ್ಜರ್ಸ್), ವಿಂಡೀಸ್‌ನ ಸುನಿಲ್ ನರೇನ್ (ಓವಲ್ ಇನ್‌ವಿನ್ಸಿಬಲ್) ಆರಿಸಲ್ಪಟ್ಟಿದ್ದಾರೆ.

ಮಿಂಚಲಿರುವ ತಾಹಿರ್

ಮಿಂಚಲಿರುವ ತಾಹಿರ್

ಮೈದಾನದಲ್ಲಿ ಗಮನ ಸೆಳೆಯುವ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್, ಡೇನ್ ವಿಲಾಸ್, ಮ್ಯಾನ್ಚೆಸ್ಟರ್ ಒರಿಜಿನಲ್ಸ್ ಪಾಲಾಗಿದ್ದಾರೆ. ಇನ್ನು ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್ (ಲಂಡನ್ ಸ್ಪಿರಿಟ್), ಆಸ್ಟ್ರೇಲಿಯಾದ ಡಿ ಆರ್ಸಿ ಶಾರ್ಟ್ (ಟ್ರೆಂಟ್ ರಾಕೆಟ್ಸ್), ವಾರ್ನರ್ (ಸದರ್ನ್ ಬ್ರೇವ್), ಇಂಗ್ಲೆಂಡ್‌ನ ಜೇಸನ್ ರಾಯ್ (ಓವಲ್ ಇನ್‌ವಿನ್ಸಿಬಲ್), ಇಂಗ್ಲೆಂಡ್‌ನ ಇಯಾನ್ ಮಾರ್ಗನ್ (ಲಂಡನ್‌ ಸ್ಪಿರಿಟ್‌) ಖರೀದಿಸಲ್ಪಟ್ಟಿದ್ದಾರೆ.

Story first published: Monday, October 21, 2019, 13:40 [IST]
Other articles published on Oct 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X