ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020: ಕೆರಿಬಿಯನ್ ನಾಡಿನ ಟಿ20 ದಿಗ್ಗಜ ಈ ಬಾರಿಯ ಟೂರ್ನಿಗೆ ಅಲಭ್ಯ

Chris Gayle Miss Caribbean Premier League 2020

ಟಿ20 ಕ್ರಿಕೆಟ್ ಅಂದರೆ ಅಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಮುಂಚೂಣಿಯಲ್ಲಿರುತ್ತಾರೆ. ಹೊಡಿ ಬಡಿ ಆಟಕ್ಕೆ ಹೇಳಿ ಮಾಡಿಸಿದಂತಿರುವ ಕ್ರಿಕೆಟಿಗರು ಕೆರಿಬಿಯನ್ ನಾಡಿನಲ್ಲಿ ಸಾಕಷ್ಟಿದ್ದಾರೆ. ಅದರಲ್ಲೂ ಟಿ20 ಕ್ರಿಕೆಟ್‌ನ ದಿಗ್ಗಜನೆನಿಸಿದ ಕ್ರಿಸ್ ಗೇಲ್ ಯಾವುದೇ ಲೀಗ್‌ ಟೂರ್ನಿಯಲ್ಲಿದ್ದರೂ ಅಲ್ಲಿ ಭರಪೂರ ಮನರಂಜನೆ ಖಂಡಿತಾ. ಆದರೆ ಈ ಬಾರಿಯ ತವರು ನೆಲದ ಲೀಗ್ ಟೂರ್ನಿಗೇ ಕ್ರೀಸ್ ಗೇಲ್ ಅಲಭ್ಯರಾಗುತ್ತಿದ್ದಾರೆ.

ಹೌದು ಕೆರೆಬಿಯನ್ ನಾಡಿನಲ್ಲಿ ಕ್ರಿಕೆಟ್ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಆದರೆ ಈ ಬಾರಿಯ ಸಿಪಿಎಲ್ ನಲ್ಲಿ ಕ್ರೀಸ್ ಗೇಲ್ ಪಾಲ್ಗೊಳ್ಳುತ್ತಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಕ್ರೀಸ್ ಗೇಲ್ ಈ ಬಾರಿಯ ಕೆರಿಬಿಯನ್ ನಾಡಿನ ಚುಟುಕು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಸಿಪಿಎಲ್ 2020 ತಂಡದ ವಿಮರ್ಶೆ: ಗಯಾನಾ ಅಮೆಜಾನ್ ವಾರಿಯರ್ಸ್ ಬಲ, ದೌರ್ಬಲ್ಯ, ಸ್ಕ್ವಾಡ್ಸಿಪಿಎಲ್ 2020 ತಂಡದ ವಿಮರ್ಶೆ: ಗಯಾನಾ ಅಮೆಜಾನ್ ವಾರಿಯರ್ಸ್ ಬಲ, ದೌರ್ಬಲ್ಯ, ಸ್ಕ್ವಾಡ್

ಜಮೈಕಾ ತಂಡದ ಸದಸ್ಯರಾಗಿದ್ದ ಗೇಲ್

ಜಮೈಕಾ ತಂಡದ ಸದಸ್ಯರಾಗಿದ್ದ ಗೇಲ್

ಕಳೆದ ಆವೃತ್ತಿಯಲ್ಲಿ ಕ್ರಿಸ್ ಗೇಲ್ ತವರು ತಂಡವಾದ ಜಮೈಕಾ ತಲ್ಲವಾಸ್‌ನಲ್ಲಿ ಆಡಿದ್ದರು. ಆದರೆ ಈ ಬಾರಿಯ ಟೂರ್ನಿಗೆ ಅಲಭ್ಯರಾಗುವುದನ್ನು ಮೊದಲೇ ಖಚಿತಪಡಿಸಿದ್ದ ಕಾರಣ ಅವರನ್ನು ಸಿಪಿಎಲ್2020 ಸ್ಕ್ವಾಡ್‌ನಿಂದ ಕೈಬಿಡಲಾಗಿದೆ.

ಗೇಲ್ ಅಲಭ್ಯಕ್ಕೆ ಕಾರಣವಿದು

ಗೇಲ್ ಅಲಭ್ಯಕ್ಕೆ ಕಾರಣವಿದು

ಕೊರೊನಾ ವೈರಸ್‌ನ ಕಾರಣದಿಂದಾಗಿ ಲಾಕ್‌ಡೌನ್ ಆಗಿದ್ದ ಕಾರಣ ಕೆಲ ತಿಂಗಳ ಕಾಲ ಕ್ರಿಸ್ ಗೇಲ್ ಕುಟುಂಬ ಹಾಗೂ ತಮ್ಮ ಪುಟ್ಟ ಮಗುವನ್ನು ಬಿಟ್ಟು ದೂರುಳಿದಿದ್ದರು. ಕ್ರಿಸ್ ಗೇಲ್ ಜಮೈಕದಲ್ಲಿ ಉಳಿದುಕೊಂಡಿದ್ದರೆ ಗೇಲ್ ಕುಟುಂಬಸ್ಥರು ಸೈಂಟ್ ಕಿಟ್ಸ್‌ನಲ್ಲಿದ್ದರು. ಹೀಗಾಗಿ ಬಹಳ ಕಾಲದ ನಂತರ ಕುಟುಂಬದೊಂದಿಗೆ ಕಾಲ ಕಳೆಯಲು ನಿರ್ಧರಿಸಿರುವ ಕಾರಣ ಗೇಲ್ ಈ ಬಾರಿಯ ಸಿಪಿಎಲ್‌ನಿಂದ ದೂರ ಉಳಿಯುವ ನಿರ್ಧಾರವನ್ನು ಕೈಗೊಂಡಿದ್ದರು.

ಸಿಪಿಎಲ್ ವಕ್ತಾರರ ಪ್ರತಿಕ್ರಿಯೆ

ಸಿಪಿಎಲ್ ವಕ್ತಾರರ ಪ್ರತಿಕ್ರಿಯೆ

ಕ್ರಿಸ್ ಗೇಲ್ ಈ ಬಾರಿಯ ಟೂರ್ನಿಯಿಂದ ಹೊರಗುಳಿಯುವ ಬಗ್ಗೆ ಸಿಪಿಎಲ್ ವಕ್ತಾರರು ಕೂಡ ಪ್ರತಿಕ್ರಿಯಿಸಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಕ್ರಿಸ್ ಗೇಲ್ ಈ ಬಾರಿಯ ಸಿಪಿಎಲ್ ಟೂರ್ನಿಯಿಂದ ಹೊರಗುಳಿಯುತ್ತಿರುವುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಅವರ 2020ರ ಉಳಿದ ಅವಧಿ ಸುಗಮವಾಗಿ ಸಾಗಲಿ. ಮುಂದಿನ ವರ್ಷದ ಆವೃತ್ತಿಗೆ ಮರಳಿ ಸಿಪಿಎಲ್‌ನ ಭಾಗವಾಗಲಿದ್ದಾರೆ ಎಂದು ಆಶಿಸುತ್ತೇವೆ ಎಂದಿದ್ದರು.

ಕೋಚ್ ವಿರುದ್ಧ ಹರಿಹಾಯ್ದಿದ್ದ ಗೇಲ್

ಕೋಚ್ ವಿರುದ್ಧ ಹರಿಹಾಯ್ದಿದ್ದ ಗೇಲ್

ಮತ್ತೊಂದು ಪ್ರಮುಖ ವಿಚಾರ ಗಮನಿಸಬೇಕಿದೆ. ಕೆಲವೇ ತಿಂಗಳ ಹಿಂದೆ ಕ್ರಿಸ್ ಗೇಲ್ ಸಿಪಿಎಲ್‌ನಲ್ಲಿ ತಮ್ಮ ತಂಡವಾಗಿದ್ದ ಜಮೈಕಾ ತಲ್ಲವಾಸ್‌ನ ಕೋಚ್ ಆಗಿದ್ದ ರಾಮ್ ನರೇಶ್ ಸರ್ವಾನ್ ವಿರುದ್ಧ ಹರಿಹಾಯ್ದಿದ್ದರು. ಆತ ಕೊರೊನಾ ವೈರಸ್‌ಗಿಂತ ಕೆಟ್ಟ ಮನುಷ್ಯ ಎಂದು ಗೇಲ್ ಜರಿದಿದ್ದರು. ಕ್ರಿಸ್ ಗೇಲ್ ಮಾತಿಗೆ ಆಂಡ್ರೆ ರಸೆಲ್ ಕೂಡ ಧ್ವನಿ ಗೂಡಿಸಿದ್ದರು. ಈ ಎಲ್ಲಾ ಘಟನೆಯ ಬಳಿಕ ಗೇಲ್ ಈ ಬಾರಿಯ ಸಿಪಿಎಲ್ ಟೂರ್ನಿಯಿಮದ ಹೊರಗುಳಿಯುವ ನಿರ್ಧಾರವನ್ನು ಮಾಡಿದ್ದಾರೆ.

Story first published: Friday, August 7, 2020, 10:03 [IST]
Other articles published on Aug 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X