ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾ ವಿರುದ್ದದ ಸರಣಿ ಬಳಿಕ ಕ್ರಿಸ್‌ ಗೇಲ್‌ ನಿವೃತ್ತಿ!

ICC World Cup 2019 : ನಿವೃತ್ತಿ ಘೋಷಿಸಲು ಮುಂದಾದ ಗೇಲ್..! | IND vs WI | Oneindia Kannada
Chris Gayle plans retirement after home series against India

ಮ್ಯಾಂಚೆಸ್ಟರ್‌, ಜೂನ್‌ 26: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿ ಬಳಿಕ ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ಗೇಲ್‌ ನಿವೃತ್ತಿ ಹೊಂದುತ್ತಾರೆಂದೇ ಅಂದಾಜಿಸಲಾಗಿತ್ತು. ಆದರೆ, 'ದಿ ಯೂನಿವರ್ಸ್‌ ಬಾಸ್‌' ಖ್ಯಾತಿಯ ಕ್ರಿಸ್‌ ಗೇಲ್‌ ನಿವೃತ್ತಿಗೆ ಬೇರೆಯದ್ದೇ ಯೋಜನೆ ಹಾಕಿಕೊಂಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ವಿಶ್ವಕಪ್‌ ಬಳಿಕ ಭಾರತ ತಂಡ ಚೊಚ್ಚಲ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಷಿಪ್‌ ಸಲುವಾಗಿ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ಇದರಲ್ಲಿ ಏಕದಿನ, ಟಿ20 ಮತ್ತು ಟೆಸ್ಟ್‌ ಸರಣಿಗಳನ್ನಾಡಲಿದೆ. ಈ ಸಂದರ್ಭದಲ್ಲಿ ಗೇಲ್‌, ಒಡಿಐ ಮತ್ತು ಟೆಸ್ಟ್‌ ಸರಣಿಗಳಲ್ಲಿ ಆಡಿ ಅಂತಾರಾಷ್ಟ್ರೀಯ ವೃತ್ತಿ ಬದುಕು ಕೊನೆಗೊಳಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ.

ಹಂದಿ ಎಂದು ಅಪಮಾನಿಸಿದವರ ಬಗ್ಗೆ ಮಾತನಾಡಿದ ಸರ್ಫರಾಝ್‌!ಹಂದಿ ಎಂದು ಅಪಮಾನಿಸಿದವರ ಬಗ್ಗೆ ಮಾತನಾಡಿದ ಸರ್ಫರಾಝ್‌!

ಭಾರತ ತಂಡ ಆಗಸ್ಟ್‌-ಸೆಪ್ಟೆಂಬರ್‌ ಅವಧಿಯಲ್ಲಿ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ತಲಾ ಮೂರು ಪಂದ್ಯಗಳ ಏಕದಿನ ಮತ್ತು ಅಂತಾರಾಷ್ಟ್ರೀಯ ಟಿ20 ಹಾಗೂ 2 ಟೆಸ್ಟ್‌ಗಳ ಸರಣಿಗಳಲ್ಲಿ ಪೈಪೋಟಿ ನಡೆಸಲಿದೆ. ಈ ಸಂದರ್ಭದಲ್ಲಿ ಟಿ20 ಸರಣಿಯಲ್ಲಿ ತಾವು ಆಡುವುದಿಲ್ಲ ಎಂದು ಗೇಲ್‌ ಸ್ಪಷ್ಟ ಪಡಿಸಿದ್ದಾರೆ. 39 ವರ್ಷದ ಅನುಭವಿ ಎಡಗೈ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌, ವಿಶ್ವಕಪ್‌ ಟೂರ್ನಿ ವೇಳೆ ತಮ್ಮ ವೃತ್ತಿ ಬದುಕಿನ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಟೂರ್ನಿಗೂ ಮುನ್ನ ಹೇಳಿಕೆ ನೀಡಿದ್ದರು.

ಆಸೀಸ್‌ ವಿರುದ್ಧದ ಹೀನಾಯ ಸೋಲಿನ ನಂತರ ಮಾರ್ಗನ್‌ ಹೇಳಿದ್ದೇನು?ಆಸೀಸ್‌ ವಿರುದ್ಧದ ಹೀನಾಯ ಸೋಲಿನ ನಂತರ ಮಾರ್ಗನ್‌ ಹೇಳಿದ್ದೇನು?

"ಇಲ್ಲಿಗೇ ಅಂತ್ಯವಲ್ಲ. ನನ್ನಲ್ಲಿ ಇನ್ನು ಕೆಲವು ಪಂದ್ಯಗಳು ಬಾಕಿ ಇದೆ. ಇನ್ನೊಂದು ಸರಣಿ ಆಡುವುದಿದೆ. ಮುಂದೇನಾಗುತ್ತದೆ ನೋಡೋಣ. ವಿಶ್ವಕಪ್‌ ಬಳಿಕ ನನ್ನ ಯೋಜನೆ? ಭಾರತ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡಬಹುದು. ಏಕದಿನ ಸರಣಿಯಲ್ಲಂತೂ ಖಂಡಿತಾ ಆಡಲಿದ್ದೇನೆ. ಟಿ20 ಆಡುವುದಿಲ್ಲ. ಇಷ್ಟೇ ಸದ್ಯಕ್ಕೆ ನನ್ನ ಯೋಜನೆಗಳು,'' ಎಂದು ಭಾರತ ವಿರುದ್ಧದ ವಿಶ್ವಕಪ್‌ ಪಂದ್ಯಕ್ಕೂ ಹಿಂದಿನ ದಿನವಾದ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕ್ರಿಸ್‌ ಗೇಲ್‌ ಹೇಳಿದ್ದಾರೆ.

ವಿಶ್ವಕಪ್ ಇತಿಹಾಸ ನಿರ್ಮಿಸಿದ ಆ್ಯರನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ!ವಿಶ್ವಕಪ್ ಇತಿಹಾಸ ನಿರ್ಮಿಸಿದ ಆ್ಯರನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ!

ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕವೇ ಹೆಸರುವಾಸಿಯಾಗಿರುವ ಸಿಕ್ಸ್‌ ಮಷೀನ್‌ ಪರ ಕ್ರಿಸ್‌ ಗೇಲ್‌ 103 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 7215 ರನ್‌ಗಳನ್ನು ದಾಖಲಿಸಿದ್ದಾರೆ. ಒಡಿಐನಲ್ಲಿ 294 ಪಂದ್ಯಗಳಲ್ಲಿ 10345 ರನ್‌ಗಳನ್ನು ಚಚ್ಚಿದ್ದಾರೆ. ಟಿ20ಯಲ್ಲೂ 58 ಪಂದ್ಯಗಳಿಂದ 1627 ರನ್‌ಗಳನ್ನು ಬಾರಿಸಿದ್ದಾರೆ.

Story first published: Wednesday, June 26, 2019, 19:18 [IST]
Other articles published on Jun 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X