ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ಕ್ರಿಸ್ ಗೇಲ್

ವೆಸ್ಟ್ ಇಂಡೀಸ್‌ನ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಆಗಸ್ಟ್‌ 18ರಿಂದ ಸೆಪ್ಟೆಂಬರ್ 10ವರೆಗೆ ಟ್ರಿನಿಡಾಡ್ ಮತ್ತು ಟೊಬ್ಯಾಗೋದಲ್ಲಿ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡೆಸಲು ಸಿದ್ದತೆಯನ್ನು ನಡೆಸಲಾಗುತ್ತಿದೆ. ಆದರೆ ಅದಕ್ಕೆ ಅಲ್ಲಿನ ಸರ್ಕಾರಗಳಿಂದ ಇನ್ನಷ್ಟೇ ಅನುಮತಿ ದೊರೆಯಬೇಕಿದೆ.

ಕ್ರಿಸ್ ಗೇಲ್ ಕೌಟುಂಬಿಕ ಕಾರಣವನ್ನು ನೀಡಿ ಸಿಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಲಾಕ್‌ಟೌನ್ ಕಾರಣದಿಂದಾಗಿ ಕುಟುಂಬದಿಂದ ದೂರ ಉಳಿದಿದ್ದ ಕ್ರಿಸ್ ಗೇಲ್ ಕುಟುಂಬದೊಂದಿಗೆ ಕಾಲವನ್ನು ಕಳೆಯಲು ನಿರ್ಧರಿಸಿದ ಕಾರಣ ಸಿಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ಕ್ರಿಕ್ ಇನ್‌ಫೋ ವರದಿ ಮಾಡಿದೆ.

ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

ಸೈಂಟ್ ಲೂಸಿಯಾ ಜೌಕ್ಸ್ ತಂಡದೊಂದಿಗೆ ಕ್ರಿಸ್ ಗೇಲ್ ಒಪ್ಪಂದವನ್ನು ಹೊಂದಿದ್ದು ಸಿಪಿಎಲ್ ಲೀಗ್‌ನ ಈ ವರ್ಷದ ಆವೃತ್ತಿಯಿಂದ ಕರುಡು ಪಟ್ಟಿಯಿಂದ ಹೊರಬಂದ ಪ್ರಮುಖ ಆಟಗಾರನಾಗಿದ್ದಾರೆ. ಈ ಆವೃತ್ತಿಯ ಸ್ಪರ್ಧೆಗೆ ಕರುಡು ಪಟ್ಟಿ ಸಿದ್ಧಪಡಿಸುವ ಒಂದು ದಿನ ಮುನ್ನ ತನ್ನ ನಿರ್ಧಾರವನ್ನು ಕ್ರಿಸ್ ಗೇಲ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಕ್ರಿಸ್ ಗೇಲ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಮೈಕಾ ತಲ್ಲಾವಾಸ್, ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯೋಟ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಜಮೈಕಾ ತಲ್ಲಾವಾಸ್ ತಂಡದ ಎರಡು ಬಾರಿ ಚಾಂಪಿಯನ್ ಆಗಿದ್ದ ವೇಳೆ ಕ್ರಿಸ್ ಗೇಲ್ ಆ ತಂಡದ ಪ್ರಮುಖ ಸದಸ್ಯರಾಗಿದ್ದರು.

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಾಕ್‌ಗೆ ಆಘಾತ, ಮೂವರಿಗೆ ಕೊರೊನಾ ವೈರಸ್

ಕೆಲ ತಿಂಗಳ ಹಿಂದೆಯಷ್ಟೇ ಜಮೈಕಾ ತಂಡದ ಕೋಚ್ ರಾಮ್ ನರೇಶ್ ಸರ್ವಾನ್ ವಿರುದ್ಧ ಗೇಲ್ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದರು. ಸರ್ವಾನ್ ಕೊರೊನಾ ವೈರಸ್‌ಗಿಂತಲೂ ಕೆಟ್ಟ ವೈರಸ್ ಎಂದು ಹೇಳಿದ್ದರು. ವೆಸ್ಟ್ ಇಂಡೀಸ್ ತಂಡದ ಪರವಾಗಿ ಗೇಲ್ 103 ಟೆಸ್ಟ್ ಮತ್ತು 301 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, June 24, 2020, 10:29 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X