ಭಾರತಕ್ಕೆ ಬಂದಿಳಿದ ವಿಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್: ಚುಟುಕು ಮಾದರಿಯಲ್ಲಿ ಮತ್ತೆ ರನ್ ಮಳೆ ಹರಿಸಲು ಸಜ್ಜು!

ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಮತ್ತೆ ಭಾರತಕ್ಕೆ ಬಂದಿಳಿದಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಭಾಗವಹಿಸದೆ ದೂರವುಳಿದಿದ್ದ ಕ್ರಿಸ್ ಗೇಲ್ ಇದೀಗ ಮತ್ತೊಂದು ಟಿ20 ಲೀಗ್ ಮೂಲಕ ಅಂಗಳಕ್ಕಿಳಿಯಲು ಸಜ್ಜಾಗಿದ್ದಾರೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗಿಯಾಗಲಿರುವ ಕ್ರಿಸ್ ಗೇಲ್ ಗುಜರಾತ್ ಜೈಂಟ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಕಟಕ್‌ನ ಬಾರಬಾತಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಮೂಲಕ ಕ್ರಿಸ್ ಗೇಲ್ ಟಿ20 ಲೀಗ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸ್ಪೋಟಕ ಬ್ಯಾಟರ್‌ಗಳಾದ ವೀರೇಂದ್ರ ಸೆಹ್ವಾಗ್ ಹಾಗೂ ಕ್ರಿಸ್ ಗೇಲ್ ಅವರನ್ನು ಜೊತೆಯಾಗಿ ನೋಡುವ ಅವಕಾಶ ದೊರೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದಾಗ ಈ ಇಬ್ಬರು ಆಟಗಾರರು ಕೂಡ ಎದುರಾಳಿ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸುವುದಕ್ಕೇ ಹೆಸರಾಗಿದ್ದರೂ. ಈ ಇಬ್ಬರು ಕೂಡ ಒಂದೇ ತಂಡದಲ್ಲಿ ಆಡುತ್ತಿರುವುದು ಕುತೂಹಲ ಹೆಚ್ಚಿಸಿದೆ.

ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್

ಚುಟುಕು ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ

ಚುಟುಕು ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ

ಟಿ20 ಕ್ರಿಕೆಟ್‌ನ ಸರ್ವಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಕ್ರಿಸ್ ಗೇಲ್ ಟಿ20 ಮಾದರಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 463 ಟಿ20 ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ 1056 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಲ್ಲದೆ 14,562 ರನ್‌ಗಳನ್ನು ಬಾರಿಸಿರುವ ಗೇಲ್ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 36.22ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಗೇಲ್ 144.75ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಚುಟುಕು ಮಾದರಿಯಲ್ಲಿ ಬರೊಬ್ಬರಿ 22 ಶತಕ ಹಾಗೂ 88 ಅರ್ಧ ಶತಕಗಳು ಗೇಲ್ ಹೆಸರಿನಲ್ಲಿರುದೆ.

ದಿಗ್ಗಜ ಆಟ ನೋಡಿ ಆನಂದಿಸುತ್ತಿದ್ದಾರೆ ಅಭಿಮಾನಿಗಳು

ದಿಗ್ಗಜ ಆಟ ನೋಡಿ ಆನಂದಿಸುತ್ತಿದ್ದಾರೆ ಅಭಿಮಾನಿಗಳು

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜನೆಯಾಗುತ್ತಿದೆ. ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿ ನಿವೃತ್ತಿ ಹೇಳಿರುವ ಆಟಗಾರರು ಮತ್ತೆ ಈ ಟೂರ್ನಿಯಲ್ಲಿ ಆಡುತ್ತಿರುವುದು ಈ ಲೀಗ್‌ನ ವಿಶೇಷತೆಯಾಗಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳು ದಿಗ್ಗಜ ಆಟಗಾರರ ಬ್ಯಾಟಿಂಗ್ ಹಾಗೂ ಬೌಲಿಂಗ್‌ಅನ್ನು ಆನಂದಿಸುತ್ತಿದ್ದಾರೆ.

ನಾಲ್ಕು ತಂಡಗಳ ಮುಖಾಮುಖಿ

ನಾಲ್ಕು ತಂಡಗಳ ಮುಖಾಮುಖಿ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ನಾಲ್ಕು ತಂಡಗಳು ಭಾಗವಹಿಸುತ್ತಿದ್ದು ಈ ನಾಲ್ಕು ತಂಡಗಳಲ್ಲಿ ವಿಶ್ವ ಕ್ರಿಕೆಟ್‌ನ ದಿಗ್ಗಜರು ಹಂಚಿಕೊಂಡಿದ್ದಾರೆ. ಇಂಡಿಯಾ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮಣಿಪಾಲ್ ಟೈಗರ್ಸ್ ಹಾಗೂ ಬಿಲ್ವಾರ ಕಿಂಗ್ಸ್ ತಂಡಗಳು ಈ ಟೂರ್ನಿಯಲ್ಲಿ ಹಣಾಹಣಿ ನಡೆಸುತ್ತಿದೆ. ಅಂಕಪಟ್ಟಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ ಜೈಂಟ್ಸ್ ಎರಡನೇ ಸ್ಥಾನದಲ್ಲಿದೆ. ಮಣಿಪಾಲ್ ಟೈಗರ್ಸ್ ಹಾಗೂ ಬಿಲ್ವಾರ ಕಿಂಗ್ಸ್ ತಂಡಗಳು ನಂತರದ ಸ್ಥಾನದಲ್ಲಿದೆ.

2021ರ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸಿದ್ದ ಕ್ರಿಸ್ ಗೇಲ್

2021ರ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸಿದ್ದ ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರ ಕ್ರಿಸ್ ಗೇಲ್ 2021ರ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು. ಆದರೆ ನಂತರ ನಡೆದ ಮೆಗಾ ಹರಾಜಿನಿಂದ ಹೊರಗುಳಿದ ಗೇಲ್ ಕಳೆದ ಐಪಿಎಲ್‌ನಲ್ಲಿ ಭಾಗವಹಿಸಿರಲಿಲ್ಲ. ಆದರೆ ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮೂಲಕ ಭಾರತದ ನೆಲದಲ್ಲಿ ಮತ್ತೆ ಚುಟುಕು ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, September 27, 2022, 19:30 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X