ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಳೆಯೇ ಪಾಕಿಸ್ತಾನಕ್ಕೆ ತೆರಳುತ್ತೇನೆ ಎಂದು ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ ಕ್ರಿಸ್ ಗೇಲ್

Chris Gayle said ‘going to Pakistan tomorrow’ fans confused

ಚುಟುಕು ಕ್ರಿಕೆಟ್‌ನ ದಿಗ್ಗಜ ಆಟಗಾರ ಜಮೈಕಾ ಮೂಲದ ಕ್ರಿಸ್ ಗೇಲ್ ಸದ್ಯ ಐಪಿಎಲ್‌ಗಾಗಿ ದುಬೈನಲ್ಲಿದ್ದಾರೆ. ಕೆರೀಬಿಯನ್ ಮುಗಿಸಿ ಬಂದಿರುವ ಕ್ರಿಸ್ ಗೇಲ್ ಎರಡು ದಿನಗಳ ಕ್ವಾರಂಟೈನ್ ಪೂರೈಸಿ ಬಳಿಕ ಐಪಿಎಲ್ ಬಯೋಬಬಲ್‌ಗೆ ಸೇರಿಕೊಳ್ಳಲಿದ್ದಾರೆ. ಈ ಮಧ್ಯೆ ಕ್ರಿಸ್ ಗೇಲ್ ಮಾಡಿರುವ ಟ್ವೀಟ್‌ವೊಂದು ಈಗ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಭಾನುವಾರ ಟ್ವಿಟ್ಟರ್‌ನಲ್ಲಿ ಕ್ರಿಸ್ ಗೇಲ್ "ನಾನು ನಾಳೆ ಪಾಕಿಸ್ತಾನಕ್ಕೆ ತೆರಳುತ್ತಿದ್ದೇನೆ. ಯಾರೆಲ್ಲಾ ನನ್ನೊಂದಿಗೆ ಬರುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. ಕ್ರಿಸ್ ಗೇಲ್ ಹೀಗೆ ಟ್ವೀಟ್ ಮಾಡುವುದಕ್ಕೆ ಕಾರಣವೂ ಇದೆ. ಪಾಕಿಸ್ತಾನಕ್ಕೆ ಸೀಮಿತ ಓವರ್‌ಗಳ ಸರಣಿಯನ್ನಾಡಲು ತೆರಳಿದ್ದ ನ್ಯೂಜಿಲೆಂಡ್ ತಂಡ ಶುಕ್ರವಾರ ಇದ್ದಕ್ಕಿದ್ದಂತೆಯೇ ಸರಣಿಯಿಂದ ಹಿಂದಕ್ಕೆ ಸರಿದಿತ್ತು. ಭದ್ರತಾ ಕಾರಣಗಳನ್ನು ನೀಡಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಇದ್ದಕ್ಕಿದ್ದಂತೆಯೇ ತಮ್ಮ ತಂಡವನ್ನು ವಾಪಾಸ್ ಕರೆಸಿಕೊಳ್ಳಲು ತೀರ್ಮಾನಿಸಿತ್ತು.

ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಈ ನಿರ್ಧಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆಘಾತ ನೀಡಿತ್ತು. ಮಂಡಳಿ ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್ ತಮಡದ ನಾಯಜ ಮಾಜಿ ಆಟಗಾರರು ಕೂಡ ಈ ನಿರ್ಧಾರವನ್ನು ಖಂಡಿಸಿದ್ದಾರೆ. ಪಾಕಿಸ್ತಾನ ಹೊರತು ಪಡಿಸಿಯೂ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ನಿರ್ಧಾರದ ಬಗ್ಗೆ ಸಾಕಷ್ಟು ಪರ ವಿರೋಧದ ಚರ್ಚೆಗಳಾಗಿದೆ. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮಾತ್ರ ಭದ್ರತಾ ವಿಚಾರವಾಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್

ಈ ಸಂದರ್ಭದಲ್ಲಿ ಜಮೈಕಾದ ದಿಗ್ಗಜ ಆಟಗಾರ ಕ್ರಿಸ್ ಗೇಲ್ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಕ್ರಿಸ್ ಗೇಲ್. ಕ್ರಿಸ್ ಗೇಲ್ ಮಾಡಿದ ಈ ಟ್ವೀಟ್‌ಗೆ ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ಆಟಗಾರ ಮೊಹಮ್ಮದ್ ಆಮಿರ್ ಸಹಿತ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋ

ಇನ್ನು ಭದ್ರತಾ ಕಾರಣವನ್ನು ನೀಡಿ ಪಾಕಿಸ್ತಾನದಿಂದ ನ್ಯೂಜಿಲೆಂಡ್ ಕ್ರಿಕೆಟ್ ವಾಪಸಾಗುವ ನಿರ್ಧಾರ ತೆಗೆದುಕೊಂಡ ಬಳಿಕ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮಾತ್ರವಲ್ಲದೆ ಡ್ಯಾರನ್ ಸಮಿ ಕೂಡ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕಳೆದ ಆರು ವರ್ಷಗಳಿಂದ ಪಾಕಿಸ್ತಾನ ಪ್ರೀಮಿಯರ್‌ ಲೀಗ್‌ನಲ್ಲಿ ನಿರಂತರವಾಗಿ ಭಾಗಿಯಾಗುತ್ತಿರುವ ಡ್ಯಾರನದ ಸಮಿ ತನಗೆ ಪಾಕಿಸ್ತಾನದಲ್ಲಿ ಯಾವತ್ತಿಗೂ ಅಸುರಕ್ಷತೆಯ ಭಾವನೆ ಬಂದಿಲ್ಲ ಎಂದಿದ್ದರು. ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್ ಆಡುವುದೆಂದರೆ ತುಂಬಾ ಆನಂದದ ವಿಷಯ. ನಾನು ಯಾವತ್ತಿಗೂ ಪಾಕಿಸ್ತಾನದಲ್ಲಿ ಸುರಕ್ಷಿತ ಭಾವನೆಯನ್ನು ಹೊಂದಿದ್ದೇನೆ ಎಂದು ಟ್ವೀಟ್ ಮಾಡಿದ್ದರು.

ಐಪಿಎಲ್ 2021: ಚೆನ್ನೈ vs ಮುಂಬೈ ಮುಖಾಮುಖಿಯಲ್ಲಿ ಯಾವುದು ಬಲಿಷ್ಠ ತಂಡ, ಯಾರಿಗೆ ಹೆಚ್ಚು ಸೋಲು?ಐಪಿಎಲ್ 2021: ಚೆನ್ನೈ vs ಮುಂಬೈ ಮುಖಾಮುಖಿಯಲ್ಲಿ ಯಾವುದು ಬಲಿಷ್ಠ ತಂಡ, ಯಾರಿಗೆ ಹೆಚ್ಚು ಸೋಲು?

ಇನ್ನು ಪಾಕಿಸ್ತಾನದಿಂದ ತೆರಳಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾನುವಾರ ಮುಂಜಾನೆ ದುಬೈಗೆ ಬಂದಿಳಿದಿದೆ. ಆದರೆ ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಯಾವ ರೀತಿಯ ಭದ್ರತಾ ಬೆದರಿಕೆಯಿತ್ತು ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ವಿರಾಟ್ ನಂತರ ಈ ಮೂವರಲ್ಲಿ ಯಾರಾಗ್ತಾರೆ RCB ನಾಯಕ? | Oneindia kannada

ಇನ್ನು ಕ್ರಿಸ್ ಗೇಲ್ ವಿಶ್ವಾದ್ಯಂತ ನಡೆಯುವ ಚುಟುಕು ಕ್ರಿಕೆಟ್ ಲೀಗ್‌ಗಳಲ್ಲಿ ಸಕ್ರಿಯವಾಗಿದ್ದು ಪಾಕಿಸ್ತಾನದ ಟಿ20 ಲೀಗ್ ಪಿಎಸ್‌ಎಲ್‌ನಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತುದ್ದಾರೆ. ಬಿಸಿಸಿಐ ಆಯೋಜಿಸುವ ಐಪಿಎಲ್‌ನಲ್ಲಿಯೂ ಸಾಕಷ್ಟು ಖ್ಯಾತರಾಗಿರುವ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ದುಬೈಗೆ ತಲುಪಿದ್ದಾರೆ. ಈ ಐಪಿಎಲ್‌ಗೂ ಮುನ್ನ ಇತ್ತೀಚೆಗಷ್ಟೇ ಅಂತ್ಯವಾದ ಕೆರೀಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಕ್ರಿಸ್ ಗೇಲ್ ಪಾಲ್ಗೊಂಡಿದ್ದರು. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಕಣಕ್ಕಿಳಿಯುವ ಗೇಲ್ ಮೂರನೇ ಕ್ರಮಾಂಕದಲ್ಲಿ ತಂಡಕ್ಕೆ ಬಲ ನೀಡುತ್ತಿದ್ದಾರೆ.

Story first published: Sunday, September 19, 2021, 17:03 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X