ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ವಿಶ್ವದಾಖಲೆ ಬರೆದ ಕ್ರಿಸ್ ಗೇಲ್!

Chris Gayle slams half century, West Indies beat Australia by 6 Wickets in 3rd T20I

ಸೇಂಟ್ ಲೂಸಿಯಾ: ಸೇಂಟ್ ಲೂಸಿಯಾದಲ್ಲಿರುವ ಡ್ಯಾರೆನ್ ಸಾಮಿ ನ್ಯಾಷನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ (ಜುಲೈ 12) ನಡೆದ ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್ ನಡುವಿನ ಮೂರನೇ ಮತ್ತು ಕೊನೇಯ ಟಿ20ಐ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ 6 ವಿಕೆಟ್‌ ಜಯ ಗಳಿಸಿದೆ. ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಸ್ಫೋಟಕ ಅರ್ಧಶತಕದೊಂದಿಗೆ ಕೆರಿಬಿಯನ್ ತಂಡ ಪ್ರವಾಸಿ ಆಸ್ಟ್ರೇಲಿಯಾವನ್ನು ಸುಲಭವಾಗಿ ಸೋಲಿಸಿದೆ.

ಆಕಾಶ್ ಚೋಪ್ರಾ ಪ್ರಕಾರ ಐಪಿಎಲ್ 2022ರ ಮೆಗಾ ಆಕ್ಷನ್‌ನಲ್ಲಿ ಆರ್‌ಸಿಬಿ ಉಳಿಸಿಕೊಳ್ಳುವ ಆಟಗಾರರಿವರು!ಆಕಾಶ್ ಚೋಪ್ರಾ ಪ್ರಕಾರ ಐಪಿಎಲ್ 2022ರ ಮೆಗಾ ಆಕ್ಷನ್‌ನಲ್ಲಿ ಆರ್‌ಸಿಬಿ ಉಳಿಸಿಕೊಳ್ಳುವ ಆಟಗಾರರಿವರು!

ಈ ಪಂದ್ಯದೊಂದಿಗೆ ವೆಸ್ಟ್‌ ಇಂಡೀಸ್-ಆಸ್ಟ್ರೇಲಿಯಾ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ವೆಸ್ಟ್ ಇಂಡೀಸ್ 3-0ಯ ಗೆಲುವಿನೊಂದಿಗೆ ಸರಣಿ ವಶವಾಗಿಸಿಕೊಂಡಿದೆ. ಐದು ಪಂದ್ಯಗಳ ಟಿ20ಐ ಸರಣಿಯಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯೂ ಇತ್ತಂಡಗಳ ಮಧ್ಯೆ ನಡೆಯಲಿದೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ಮ್ಯಾಥ್ಯೂ ವೇಡ್ 23, ಆ್ಯರನ್ ಫಿಂಚ್ 30, ಅಲೆಕ್ಸ್ ಕ್ಯಾರಿ 13, ಮೋಯ್ಸಸ್ ಹೆನ್ರಿಕ್ಸ್ 33, ಆ್ಯಷ್ಟನ್ ಟರ್ನರ್ 24 ರನ್‌ನೊಂದಿಗೆ 6 ವಿಕೆಟ್‌ ನಷ್ಟದಲ್ಲಿ 141 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ವೆಸ್ಟ್‌ ಇಂಡೀಸ್‌, ಲೆಂಡ್ಲ್ ಸಿಮನ್ಸ್ 15, ಕ್ರಿಸ್ ಗೇಲ್ 67, ನಿಕೋಲಸ್ ಪೂರನ್ 32 ರನ್‌ನೊಂದಿಗೆ 14.5ನೇ ಓವರ್‌ಗೆ 4 ವಿಕೆಟ್ ಕಳೆದು 142 ರನ್ ಗಳಿಸಿತು.

ಮೆರಿಡಿತ್ ಉತ್ತಮ ಬೌಲಿಂಗ್

ಮೆರಿಡಿತ್ ಉತ್ತಮ ಬೌಲಿಂಗ್

ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಒಬೆಡ್ ಮೆಕಾಯ್ 1, ಡ್ವೇನ್ ಬ್ರಾವೋ 1, ಫ್ಯಾಬಿಯೆನ್ ಅಲೆನ್ 1, ಹೇಡನ್ ವಾಲ್ಶ್ 2 ವಿಕೆಟ್‌ ಪಡೆದರೆ, ವೆಸ್ಟ್‌ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 1, ರಿಲೇ ಮೆರಿಡಿತ್ 3 ವಿಕೆಟ್‌ನೊಂದಿಗೆ ಗಮನ ಸೆಳೆದರು. ಕ್ರಿಸ್ ಗೇಲ್ ಪಂದ್ಯಶ್ರೇಷ್ಠರೆನಿಸಿದರು.

ಟಿ20 ಕ್ರಿಕೆಟ್‌ನಲ್ಲಿ ದಾಖಲೆ

ಟಿ20 ಕ್ರಿಕೆಟ್‌ನಲ್ಲಿ ದಾಖಲೆ

ಈ ಪಂದ್ಯದಲ್ಲಿ 38 ಎಸೆತಗಳಲ್ಲಿ 67 ರನ್ ಬಾರಿಸಿರುವ ಕ್ರಿಸ್‌ಗೇಲ್ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಗೂ ಕಾರಣರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 14,000 ರನ್ ಬಾರಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ವಿಶೇಷ ದಾಖಲೆಯನ್ನು 41ರ ಹರೆಯದ ಗೇಲ್ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ ಅತ್ಯಧಿಕ ರನ್ ಪಟ್ಟಿಯಲ್ಲಿ ಗೇಲ್ ಈಗ ನಂ.1 ಸ್ಥಾನದಲ್ಲಿದ್ದಾರೆ.

ರನ್ ಔಟ್ ಮಾಡಿದ್ದೇ ಇಂಗ್ಲೆಂಡ್ ಸೋಲೋಕೇ ಕಾರಣ!! | Oneindia Kannada
ಟಿ20 ಕ್ರಿಕೆಟ್‌ ಅತ್ಯಧಿಕ ರನ್ ಪಟ್ಟಿ

ಟಿ20 ಕ್ರಿಕೆಟ್‌ ಅತ್ಯಧಿಕ ರನ್ ಪಟ್ಟಿ

1. ಕ್ರಿಸ್ ಗೇಲ್, ವೆಸ್ಟ್‌ ಇಂಡೀಸ್, 14038 ರನ್, 22 ಶತಕ
2. ಕೀರನ್ ಪೊಲಾರ್ಡ್, ವೆಸ್ಟ್‌ ಇಂಡೀಸ್, 10836 ರನ್, 1 ಶತಕ
3. ಶೊಯೆಬ್ ಮಲಿಕ್, ಪಾಕಿಸ್ತಾನ, 10,741 ರನ್, 0 ಶತಕ
4. ಡೇವಿಡ್ ವಾರ್ನರ್, ಆಸ್ಟ್ರೇಲಿಯಾ, 10017, 8 ಶತಕ
5. ವಿರಾಟ್ ಕೊಹ್ಲಿ, ಭಾರತ, 9922 ರನ್, 5 ಶತಕ

Story first published: Wednesday, July 14, 2021, 9:06 [IST]
Other articles published on Jul 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X