ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ಅಗ್ನಿ ಪರೀಕ್ಷೆಯಲ್ಲಿ ಟಿ20 ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಪಾಸ್

Chris Gayle Tests Negative For Coronavirus After Attending Usain Bolts Birthday Party

ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದ ಕ್ರಿಸ್ ಗೇಲ್ ವಿಶ್ವ ದಾಖಲೆಯ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಉಸೇನ್ ಬೋಲ್ಟ್ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಾಗ ಕ್ರಿಸ್ ಗೇಲ್ ಬಗ್ಗೆಯೂ ಚರ್ಚೆಗಳು ನಡೆದಿತ್ತು. ಆದರೆ ಕ್ರಿಸ್ ಗೇಲ್ ತಮ್ಮ ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ತನ್ನ ಕೊರೊನಾ ಪರೀಕ್ಷೆಯ ವರದಿಯ ಬಗ್ಗೆ ಕ್ರಿಸ್ ಗೇಲ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಎರಡು ಪರೀಕ್ಷೆಯನ್ನು ನಡೆಸಲಾಗಿದ್ದು ಎರಡು ಕೊವಿಡ್ ಪರೀಕ್ಷೆಯಲ್ಲೂ ನೆಗೆಟಿವ್ ಬಂದಿರುವುದನ್ನು ಗೇಲ್ ಖಚಿತಪಡಿಸಿದ್ದಾರೆ.

ವಿಶ್ವದಾಖಲೆಯ ಓಟಗಾರ ಉಸೇನ್ ಬೋಲ್ಟ್‌ಗೆ ಕೊರೊನಾ ವೈರಸ್ ದೃಢವಿಶ್ವದಾಖಲೆಯ ಓಟಗಾರ ಉಸೇನ್ ಬೋಲ್ಟ್‌ಗೆ ಕೊರೊನಾ ವೈರಸ್ ದೃಢ

ಕ್ರಿಸ್ ಗೇಲ್ ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಯುಎಇಗೆ ತೆರಳುವ ಮುನ್ನ 20 ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆವಿಟ್ ವರದಿಯನ್ನು ಪಡೆದುಕೊಳ್ಳಬೇಕಿದೆ. ಹೀಗಾಗಿ ಎರಡು ಪರೀಕ್ಷೆಗೆ ಗೇಲ್ ಒಳಪಟ್ಟಿದ್ದು ಎರಡಲ್ಲೂ ಋಣಾತ್ಮಕ ವರದಿ ಪಡೆದುಕೊಂಡಿದ್ದಾರೆ. ಹೀಗಾಗಿ ಐಪಿಎಲ್‌ಗೆ ಪ್ರಯಾಣಿಸಲು ಸಜ್ಜಾಗಿದ್ದೇನೆ ಎಂದು ಗೇಲ್ ತಿಳಿಸಿದ್ದಾರೆ.

ಕಳೆದ ವಾರ ದಿಗ್ಗಜ ಓಟಗಾರ ಉಸೇನ್ ಬೋಲ್ಟ್ ತಮ್ಮ 34ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಕೊರೊನಾ ವೈರಸ್‌ ಭೀತಿಯ ಮಧ್ಯೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಗೇಲ್ ಬಗ್ಗೆಯೂ ಚರ್ಚೆಗಳು ಆರಂಭವಾಗಿತ್ತು.

ಬೋಲ್ಟ್ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕ್ರಿಸ್ ಗೇಲ್‌ಗೆ ಕೊರೊನಾ ಆತಂಕಬೋಲ್ಟ್ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕ್ರಿಸ್ ಗೇಲ್‌ಗೆ ಕೊರೊನಾ ಆತಂಕ

ಮುಂದಿನ ತಿಂಗಳು ನಡೆಯಲಿರುವ ಐಪಿಎಲ್‌ನ 13ನೇ ಆವೃತ್ತಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ XI ಪಂಜಾಬ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ ಕ್ರಿಸ್ ಗೇಲ್. ಹೀಗಾಗಿ ಗೇಲ್ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಮತ್ತೊಂದೆಡೆ ಕೌಟುಂಬಿಕ ಕಾರಣದಿಂದಾಗಿ ತವರು ಟಿ20 ಲೀಗ್‌ ಟೂರ್ನಿಯಾದ ಸಿಪಿಎಲ್‌ನಿಂದ ಈ ಬಾರಿ ದೂರ ಉಳಿದಿದ್ದಾರೆ.

Story first published: Tuesday, August 25, 2020, 15:59 [IST]
Other articles published on Aug 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X