ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ : ವಿಚಿತ್ರ ಅವತಾರದಲ್ಲಿ"stay At Home" ಚಾಲೆಂಜ್ ಸ್ವೀಕರಿಸಿದ ಕ್ರಿಸ್ ಗೇಲ್: ವಿಡಿಯೋ

Chris Gayle Works Out Wearing Superhero Like Suit, Takes StayAtHome Challenge

ವಿಶ್ವಾದ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತಲೆ ಇದೆ. ಇದಕ್ಕೆ ಬೇರೆ ಬೇರೆ ರೀತಿಯಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿತ್ತಿದೆ. ಬೇರೆ ಬೇರೆ ಕ್ರಮಗಳ ಮೂಲಕ ಕೊರೊನಾ ವೈರಸ್‌ನಿಂದ ದೂರವಿರಲು ತಿಳಿಹೇಳಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ "stay At Home" ಎಂಬ ಅಭಿಯಾನವೊಂದು ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ.

ಈ ಅಭಿಯಾನದಲ್ಲಿ ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಭಾಗಿಯಾಗಿದ್ದಾರೆ. ವಿಚಿತ್ರ ವೇಷ ತೊಟ್ಟುಕೊಂಡು ಕ್ರಿಸ್ ಗೇಲ್ ಈ ಸವಾಲನ್ನು ಸ್ವೀಕಾರ ಮಾಡಿದ್ದಾರೆ. ಈ ವಿಡಿಯೋವನ್ನು ಕ್ರಿಸ್ ಗೇಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮನೆಯಲ್ಲೇ ಇದ್ದು ಕೊರೊನಾ ವೈರಸ್‌ನಿಂದ ದೂರವಿರುವಂತೆ ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ ಕ್ರಿಸ್ ಗೇಲ್.

ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರಿಗೆ ಸೆಲ್ಫ್ ಐಸೋಲೇಶನ್‌ಗೆ ಸೂಚನೆಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರಿಗೆ ಸೆಲ್ಫ್ ಐಸೋಲೇಶನ್‌ಗೆ ಸೂಚನೆ

ಈ ವಿಡಿಯೋದಲ್ಲಿ ಕ್ರಿಸ್ ಗೇಲ್ ಸಂಪೂರ್ಣವಾಗಿ ದೇಹವನ್ನು ಕಪ್ಪುವಸ್ತ್ರದಿಂದ ಮುಚ್ಚಿಕೊಂಡು ಸೂಪರ್ ಹೀರೋ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಾಸ್ಕ್‌ಕೂಡ ಧರಿಸಿದ್ದಾರೆ. ಕೈಗೆ ಗ್ಲೌಸ್‌ ಹಾಗೂ ಶೂ ಹಾಕಿಕೊಂಡಿರುವ ಕ್ರಿಸ್ ಗೇಲ್ ಮನೆಯೊಳಗೆ ವ್ಯಾಯಾಮ ಮಾಡುವ ಮೂಲಕ ಮನೆಯಿಂದ ಎಲ್ಲೂ ಆಚೆ ಹೋಗಬೇಡಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಶ್ವಾದ್ಯಂತ ಕೊರೊನಾ ವೈರಸ್ ಕ್ರೀಡಾ ಲೋಕವನ್ನು ಕೂಡ ಜರ್ಝರಿತಗೊಳಿಸಿದೆ. ವಿಶ್ವಾದ್ಯಂತ ಎಲ್ಲಾ ಕ್ರೀಡಾಕೂಟಗಳನ್ನೂ ಸಂಪೂರ್ಣವಾಗಿ ರದ್ದು ಮತ್ತು ಮುಂದೂಡಲಾಗಿದೆ. ಇಲ್ಲಿಯವರೆಗೂ 2 ಲಕ್ಷ ಮಂದಿ ಈ ಭಯಾನಕ ಕೊರೊನಾ ವೈರಸ್‌ಗೆ ತುತ್ತಾಗಿದ್ದು ಸುಮಾರು 9000ದಷ್ಟು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಭಾರತ 'ಟೆಸ್ಟ್‌ನ ಪವರ್‌ ಹೌಸ್‌' ಆಗಿದೆ ಯಾಕೆ ಎಂದು ಕಾರಣ ಹೇಳಿದ ಪಾಕ್‌ ದಿಗ್ಗಜಭಾರತ 'ಟೆಸ್ಟ್‌ನ ಪವರ್‌ ಹೌಸ್‌' ಆಗಿದೆ ಯಾಕೆ ಎಂದು ಕಾರಣ ಹೇಳಿದ ಪಾಕ್‌ ದಿಗ್ಗಜ

ಕೊರೊನಾ ವೈರಸ್‌ನಿಂದ ದೂರವಿರಬೇಕಾದರೆ ಸಾಮಾಜಿಕ ಸಂಪರ್ಕದಿಂದ ದೂರವಿರುವುದು ಬಹುದೊಡ್ಡ ಮುನ್ನೆಚ್ಚರಿಕಾ ಕ್ರಮವಾಗಿದೆ. ಅಂದರೆ ಸಾಧ್ಯವಾದಷ್ಟು ಮನೆಯಿಂದ ಆಚೆ ಬಾರದಂತೆ ಎಚ್ಚರವಹಿಸುವುದು ಉತ್ತಮ. ಹೀಗಾಗಿ "stay At Home" ಅಭಿಯಾನದ ಮೂಲಕ ಬೇರೆ ಬೇರೆ ಕ್ಷೇತ್ರಗಳ ತಾರೆಯರು ಎಚ್ಚರಿಕೆ ನಿಡುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

Story first published: Thursday, March 19, 2020, 16:07 [IST]
Other articles published on Mar 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X